• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಗ್ಗದ ವಿಮಾನ ಯಾನ 'ಉಡಾನ್ ಯೋಜನೆ' ಏನು, ಎತ್ತ?

|

ಪ್ರಧಾನಿ ನರೇಂದ್ರ ಮೋದಿ ಗುರುವಾರ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯಡಿ ಶಿಮ್ಲಾ ಮತ್ತು ನವದೆಹಲಿ ಮಧ್ಯೆ ಮೊದಲ ವಿಮಾನ ಯಾನಕ್ಕೆ ಗುರುವಾರ ಚಾಲನೆ ನೀಡಿದರು. ಈ ಯೋಜನೆಯಿಂದ ಭವಿಷ್ಯದಲ್ಲಿ ಪ್ರಾದೇಶಿಕ ಸಂಪರ್ಕ ವ್ಯವಸ್ಥೆಗೆ ಅನುಕೂಲವಾಗಲಿದೆ.

ಸರಕಾರ ಘೋಷಿಸಿದ ಉಡಾನ್ ಯೋಜನೆಯ ಪ್ರಮುಖ ಅಂಶಗಳು ಇಲ್ಲಿವೆ.

* 800 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಮಾನ ಯಾನ ಕಲ್ಪಿಸುವ ಮೂಲಕ ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಆಗಲಿದೆ.[ಹವಾಯಿ ಚಪ್ಪಲಿ ಹಾಕುವವರೂ ವಿಮಾನ ಯಾನ ಮಾಡಬೇಕು: ನರೇಂದ್ರ ಮೋದಿ]

* ದೇಶದ 43 ನಗರಗಳಲ್ಲಿ ವಿಮಾನ ಪ್ರಯಾಣ ವ್ಯವಸ್ಥೆ ಮೂಲಕ ತಲುಪುವ ಅನುಕೂಲ ಮಾಡಲಾಗುತ್ತದೆ. ಹನ್ನೆರಡು ವಿಮಾನ ನಿಲ್ದಾಣಗಳಲ್ಲಿ ನಿಯಮಿತವಾಗಿ, ಅಪರೂಪಕ್ಕೆ ವಿಮಾನ ಹಾರಾಟ ನಡೆಸುತ್ತಿರುವುದು ಇನ್ನು ಮುಂದೆ ಸಮಯಕ್ಕೆ ಹಾರಾಟ ನಡೆಸುತ್ತದೆ. ಸದ್ಯಕ್ಕೆ ವಿಮಾನ ನಿಲ್ದಾಣ ಇದ್ದು, ಹಾರಾಟ ನಡೆಸದ ಮೂವತ್ತೊಂದು ಸ್ಥಳಗಳಲ್ಲಿ ಚಟುವಟಿಕೆ ಆರಂಭವಾಗುತ್ತದೆ.

* ಏರ್ ಇಂಡಿಯಾದ ಸಹವರ್ತಿ ಅಲಯನ್ಸ್ ಏರ್ ಮೊದಲ ಬಾರಿಗೆ ಪ್ರಾದೇಶಿಕ ಸಂಪರ್ಕ ಯೋಜನೆ (ರೀಜನಲ್ ಕನೆಕ್ಟವಿಟಿ ಸ್ಕೀಮ್) ಅಡಿ ದೆಹಲಿ-ಶಿಮ್ಲಾ ಮಧ್ಯೆ ವಿಮಾನ ಯಾನ ಆರಂಭಿಸಿದೆ. ಆಲಯನ್ಸ್ ಏರ್ ಏಪ್ರಿಲ್ 28ರಿಂದ ನಲವತ್ತೆಂಟು ಸೀಟಿನ, ಎಕಾನಮಿ ಕ್ಲಾಸ್ ನ ವಿಮಾನ ಹಾರಾಟವನ್ನು ನಿರಂತರವಾಗಿ ನಡೆಸಲಿದೆ.

* ಕಡಿಮೆ ವಿಸ್ತಾರದ ರನ್ ವೇ, ಎತ್ತರ ಹಾಗೂ ತಾಪಮಾನದ ನಿರ್ಬಂಧ ಇರುವುದರಿಂದ ನಲವತ್ತೆಂಟಕ್ಕಿಂತ ಹೆಚ್ಚು ಪ್ರಯಾಣಿಕರಿಗಿಂತ ವಿಮಾನದಲ್ಲಿ ಕರೆದೊಯ್ಯಲು ಸಾಧ್ಯವಿಲ್ಲ. ದೆಹಲಿ-ಶಿಮ್ಲಾ ಮಧ್ಯೆ ವಿಮಾನ ಯಾನದಲ್ಲಿ ಮೂವತ್ತೈದು ಮಂದಿಯನ್ನು ಕರೆದೊಯ್ಯುವ ವಿಮಾನ, ವಾಪಸ್ ಬರುವಾಗ ಹದಿನೈದು ಮಂದಿಯನ್ನಷ್ಟೇ ಕರೆತರಲು ಸಾಧ್ಯವಾಗುತ್ತದೆ. ವಯಾಬಲಿಟಿ ಕ್ಯಾಪ್ ಫಂಡಿಂಗ್ (ವಿಜಿಎಫ್) ಮೂಲಕ ಪ್ರತಿ ಸೀಟಿಗೆ 3 ಸಾವಿರವನ್ನು ಸರಕಾರವು ಕೊಡುತ್ತದೆ.[ಮೈಸೂರಿನಲ್ಲಿ ವಿಮಾನಯಾನ ಆರಂಭಿಸಲು ಪ್ರತಾಪ್ ಸಿಂಹ ಮನವಿ]

* ವಿಮಾನ ಯಾನದಿಂದ ಬರುವ ಆದಾಯ ಹಾಗೂ ತಗುಲುವ ವೆಚ್ಚದ ಮಧ್ಯೆ ಇರುವ ವ್ಯತ್ಯಾಸವನ್ನು ತುಂಬಿಕೊಡುವುದಕ್ಕೆ ವಯಾಬಲಿಟಿ ಕ್ಯಾಪ್ ಫಂಡಿಂಗ್ ಬಳಸಲಾಗುತ್ತದೆ. ಈ ಮೊತ್ತ ವರ್ಷಕ್ಕೆ 205 ಕೋಟಿ ಅಗಬಹುದು ಎಂದು ಅಂದಾಜಿಸಲಾಗಿದೆ. ಈ ವರೆಗೆ ಹತ್ತೊಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳು ಈ ಉದ್ದೇಶದ ಒಪ್ಪಂದಕ್ಕೆ ಸಹಿ ಹಾಕಿವೆ.

* ಅಗತ್ಯ ಭೂಮಿ ಒದಗಿಸುವುದು, ಅಗತ್ಯ ರಕ್ಷಣೆ, ವಿಮಾನ ನಿಲ್ದಾಣದಲ್ಲಿ ಒದಗಿಸುವ ಸೇವೆಯಲ್ಲಿ ವಿನಾಯಿತಿ ಒದಗಿಸುವುದಕ್ಕೆ ರಾಜ್ಯ ಸರಕಾರಗಳು ಒಪ್ಪಿವೆ. ಜತೆಗೆ ವಯಾಬಲಿಟಿ ಕ್ಯಾಪ್ ಫಂಡಿಂಗ್ ನಲ್ಲಿ ಶೇ 20ರಷ್ಟನ್ನು ರಾಜ್ಯಗಳು ಭರಿಸಬೇಕು. ಇನ್ನು ವಾಯವ್ಯ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಶೇ 10ರಷ್ಟು ಭರಿಸಬೇಕು.[ವಿಮಾನದೊಳಗೆ ವೈಫೈ ಇನ್ನೂ ದೂರದ ಕನಸು]

* ಅಲಯನ್ಸ್ ಏರ್, ಸ್ಪೈಸ್ ಜೆಟ್, ಟರ್ಬೀ ಮೇಘಾ, ಏರ್ ಒಡಿಶಾ ಮತ್ತು ಏರ್ ಡೆಕ್ಕನ್ ಏರ್ ಲೈನ್ಸ್ ಗಳು 128 ಹೊಸ ಮಾರ್ಗದಲ್ಲಿ ಸಂಚರಿಸುತ್ತವೆ.

* ಪ್ರತಿ ಸೀಟಿಗೆ/ಒಂದು ಗಂಟೆ ಪ್ರಯಾಣಕ್ಕೆ ಗರಿಷ್ಠ 2,500 ನಿಗದಿ ಮಾಡಲಾಗಿದೆ. "ಅಂದಾಜು 500 ಕಿಲೋಮೀಟರ್ ದೂರದ ಒಂದು ಗಂಟೆ ಪ್ರಯಾಣಕ್ಕೆ ಅಥವಾ ಮೂವತ್ತು ನಿಮಿಷದ ಹೆಲಿಕಾಪ್ಟರ್ ಪ್ರಯಾಣಕ್ಕೆ ಗರಿಷ್ಠ 2,500 ನಿಗದಿ ಮಾಡಲಾಗಿದೆ" ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

* ಜೂನ್ 15, 2016ರಲ್ಲಿ ಬಿಡುಗಡೆ ಮಾಡಿದ ರಾಷ್ಟ್ರೀಯ ನಾಗರಿಕ ವಿಮಾನಯಾನ ನೀತಿ (NCAP) ಭಾಗವಾಗಿ ಉಡಾನ್ ಯೋಜನೆ ಪರಿಚಯಿಸಲಾಗಿದೆ.[ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ಏರ್ ಕಾರ್ನಿವಲ್ ವಿಮಾನ]

* ಹೈದರಾ-ಕಡಪಾ, ಹೈದರಾಬಾದ್-ನಾಂದೇಡ್, ನಾಂದೇಡ್-ಮುಂಬೈ, ಚೆನ್ನೈ-ಮೈಸೂರು, ಚೆನ್ನೈ-ಸೇಲಂ, ಮುಂಬೈ-ಪೋರಬಂದರ್, ಕೋಲ್ಕತ್ತಾ-ಐಜ್ ವಾಲ್, ಪುಣೆ-ನಾಸಿಕ್, ದೆಹಲಿ-ಡೆಹ್ರಾಡೂನ್, ರಾಂಚಿ-ರಾಯ್ ಪುರ್ ಸೇರಿದಂತೆ ಇತರೆ ಮಾರ್ಗಗಳಲ್ಲಿ ವಿಮಾನ ಯಾನಕ್ಕೆ ಪ್ರಸ್ತಾವಿಸಲಾಗಿದೆ.

English summary
Prime Minister Narendra Modi on Thursday flagged off the maiden flight between Shimla and New Delhi under government’s UDAN (Ude Desh ka Aam Naagrik) scheme, an endeavour to make regional connectivity easy.The following are the key features of the scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more