ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಷ್ಕರಕ್ಕೆ ಕಾರಣವಾದ ಮೋಟಾರು ವಾಹನ ಕಾಯ್ದೆಯಲ್ಲೇನಿದೆ?

By Nayana
|
Google Oneindia Kannada News

Recommended Video

Motor Vehicle Act Amendment Bill : ಕಾಯ್ದೆಯ ವಿರುದ್ದ ಸಾರಿಗೆ ನೌಕರರ ಮುಷ್ಕರ | Oneindia Kannada

ಬೆಂಗಳೂರು, ಆಗಸ್ಟ್ 7: ಕೇಂದ್ರದ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ಮಂಗಳವಾರದಿಂದ ಸಾರಿಗೆ ಮುಷ್ಕರವನ್ನು ಹಮ್ಮಿಕೊಂಡಿದ್ದಾರೆ. ಹಾಗಾದರೆ ಆ ಮೋಟಾರು ವಾಹನ ಕಾಯ್ದೆಯಲ್ಲಿ ಏನಿದೆ ಎನ್ನುವುದನ್ನು ಗಮನಿಸಬೇಕಿದೆ.ಮೋಟಾರು ಕಾಯ್ದೆಯಲ್ಲಿರುವ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

ಮುಷ್ಕರದ ಬಂದ್‌ ಬಿಸಿ ಕರ್ನಾಟಕಕ್ಕೆ ತಟ್ಟಿಲ್ಲ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಲಾರಿ ಮಾಲೀಕರು ಕೂಡ ಮುಷ್ಕರಕ್ಕೆ ಬೆಂಬಲ ಸೂಚಿಸಿಲ್ಲ. ಹೊಸ ಮೋಟಾರು ವಾಹನ ಕಾಯ್ದೆ-2016ರ ಪ್ರಕಾರ ಈ ಹಿಂದಿನ ದಂಡದ ಮೊತ್ತವನ್ನು ಹೆಚ್ಚಿಸಲಾಗಿದ್ದು, ಕೆಲವು ಹೊಸ ಕಾಯ್ದೆಗಳನ್ನು ಕೂಡಾ ಸೇರ್ಪಡೆ ಮಾಡಲಾಗಿದೆ. ಇದರಿಂದ ರಸ್ತೆ ನಿಯಮ ಉಲ್ಲಂಘಿಸುವವರು ಭಾರೀ ಪ್ರಮಾಣದ ದಂಡ ತೆರಬೇಕಾಗುತ್ತದೆ.

ಸಾರಿಗೆ ಮುಷ್ಕರಕ್ಕೆ ನೋ ರೆಸ್ಪಾನ್ಸ್‌: ಬಸ್‌, ಮೆಟ್ರೋ ಓಡ್ತಿವೆ ಬೆಂಗಳೂರಲ್ಲಿ ಸಾರಿಗೆ ಮುಷ್ಕರಕ್ಕೆ ನೋ ರೆಸ್ಪಾನ್ಸ್‌: ಬಸ್‌, ಮೆಟ್ರೋ ಓಡ್ತಿವೆ ಬೆಂಗಳೂರಲ್ಲಿ

ಏನಿದು ಮೋಟಾರು ವಾಹನ ಕಾಯ್ದೆ

ಏನಿದು ಮೋಟಾರು ವಾಹನ ಕಾಯ್ದೆ

ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಹೊಸ ಮೋಟಾರ್ ಕಾಯ್ದೆಗೆ ಲೋಕಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ದೊರೆತಿತ್ತು, ಪ್ರತಿಭಟಿಸುವ ಮುನ್ನ ರಸ್ತೆ ನಿಯಮ ಉಲ್ಲಂಘನೆ ಮಾಡುವ ಮುನ್ನ ಹೊಸ ಕಾಯ್ದೆ ಬಗ್ಗೆ ತಿಳಿದುಕೊಳ್ಳುವುದು ಒಳಿತು.

ರಸ್ತೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ರಚಿತವಾದ ಒಂದು ಕಾಯ್ದೆಯಾಗಿದ್ದು, ಇದೀಗ ಮೋಟಾರು ವಾಹನ ಕಾಯ್ದೆಯನ್ನು ಪರಿಷ್ಕರಣೆ ಮಾಡಲಾಗಿದೆ.

ಡ್ರೈವಿಂಗ್‌ ಲೈಸೆನ್ಸ್‌ ಇಲ್ಲದೆ ಚಾಲನೆ ಮಾಡಿದರೆ ಎಷ್ಟು ದಂಡ

ಡ್ರೈವಿಂಗ್‌ ಲೈಸೆನ್ಸ್‌ ಇಲ್ಲದೆ ಚಾಲನೆ ಮಾಡಿದರೆ ಎಷ್ಟು ದಂಡ

ಡ್ರೈವಿಂಗ್‌ ಲೈಸೆನ್ಸ್‌ ಇಲ್ಲದೆ ಪೊಲೀಸರನ್ನು ಇಷ್ಟು ದಿನ ಯಾಮಾರಿಸಬಹುದು ಆದರೆ, ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಿದ್ರೆ ರೂ.5 ಸಾವಿರ ದಂಡ ಕಟ್ಟಬೇಕಿದೆ. ಈ ಹಿಂದೆ ಇದ್ದ ದಂಡದ ಮೊತ್ತವನ್ನು 1 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸಲಾಗಿದ್ದು, ಇನ್ನು ಲೈಸೆನ್ಸ್ ಇಲ್ಲದೇ ವಾಹನ ಚಾಲನೆ ಮಾಡುವುದು ಅಷ್ಟು ಸುಲಭವಲ್ಲ.

ಸಿಗ್ನಲ್‌ ಜಂಪ್‌ ಮಾಡಿದರೆ ಎಷ್ಟು ದಂಡ ತೆರಬೇಕು

ಸಿಗ್ನಲ್‌ ಜಂಪ್‌ ಮಾಡಿದರೆ ಎಷ್ಟು ದಂಡ ತೆರಬೇಕು

ಇನ್ಮುಂದೆ ಸಿಗ್ನಲ್ ಜಂಪ್ ಮಾಡುವ ಮತ್ತೊಮ್ಮೆ ಯೋಚನೆ ಮಾಡಿ. ಯಾಕೇಂದ್ರೆ ಈ ಹಿಂದೆ ಇದ್ದ ರೂ.200 ದಂಡವನ್ನು 1 ಸಾವಿರಕ್ಕೆ ಹೆಚ್ಚಿಸಲಾಗಿದೆ. ಈ ವಿಧೇಯಕವನ್ನೇ ವಿರೋಧಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.ಆದರೆ ಜನರಿಗೆ ಒಳಿತಾಗುವ ಸಾಕಷ್ಟು ಅಂಶಗಳು ಈ ಕಾಯ್ದೆಯಲ್ಲಿದೆ.

ಕುಡಿದು ವಾಹನ ಚಲಾಯಿಸಬೇಡಿ

ಕುಡಿದು ವಾಹನ ಚಲಾಯಿಸಬೇಡಿ

ದಯವಿಟ್ಟು ಕುಡಿದು ವಾಹನ ಓಡಿಸಲೇಬೇಡಿ. ಯಾಕೇಂದ್ರೆ ಅದು ನಿಮಗೆ ಅಷ್ಚೇ ಅಲ್ಲ ಇತರರ ಜೀವಕ್ಕೂ ಅಪಾಯ. ಹೀಗಾಗಿ ಕಠಿಣ ಕಾನೂನು ಜಾರಿಗೆ ತಂದಿರುವ ಕೇಂದ್ರ ಸರ್ಕಾರ ದಂಡದ ಮೊತ್ತವನ್ನು 2 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಿಸಿದೆ.ಜತೆಗೆ ಅಂಥವರಿಗೆ 10 ವರ್ಷಗಳವರೆಗಿನ ಸೆರೆವಾಸ ಶಿಕ್ಷೆಯೂ ಕಾದಿದೆ.

ಹೆಲ್ಮೆಟ್‌ ಸೀಟ್‌ ಬೆಲ್ಟ್‌ ಇಲ್ಲದಿದ್ದರೆ 1 ಸಾವಿರ ದಂಡ

ಹೆಲ್ಮೆಟ್‌ ಸೀಟ್‌ ಬೆಲ್ಟ್‌ ಇಲ್ಲದಿದ್ದರೆ 1 ಸಾವಿರ ದಂಡ

ಹೆಲ್ಮೆಟ್ ಮತ್ತು ಸೀಟ್‌ಬೆಲ್ಟ್ ಇಲ್ಲದೇ ಪ್ರಮಾಣ ಭಾರೀ ದಂಡಕ್ಕೆ ಆಹ್ವಾನ. ಕಾರಣ ಈ ಹಿಂದಿನ ದಂಡದ ಮೊತ್ತವನ್ನು ರೂ.100ರಿಂದ 1 ಸಾವಿರಕ್ಕೆ ಹೆಚ್ಟಿಸಲಾಗಿದೆ. ದಂಡ ಕಟಟುವುದಕ್ಕಿಂತ ನಿಯಮವನ್ನು ಪಾಲಿಸಿದರೆ ದಂಡದಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಹೊಸ ವಾಹನ ಖರೀದಿಸಿದರೆ ವಿಮೆ ಮಾಡಿಸಿ

ಹೊಸ ವಾಹನ ಖರೀದಿಸಿದರೆ ವಿಮೆ ಮಾಡಿಸಿ

ಹೊಸ ವಾಹನ ಖರೀದಿ ಮಾಡಿದಾಗ ತಪ್ಪದೇ ವಿಮೆ ಮಾಡಿಸಿ. ಇಲ್ಲವಾದಲ್ಲಿ ರೂ.2 ಸಾವಿರ ದಂಡ ತೇರಬೇಕಾಗುತ್ತೆ. ಜೊತೆಗೆ ಚಾಲನ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿದ್ರೆ 25ಸಾವಿರದಿಂದ 1 ಲಕ್ಷದವರೆಗೂ ದಂಡ ತೆರಬೇಕಾಗುತ್ತದೆ.

ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಬೇಡಿ

ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಬೇಡಿ

ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆಯನ್ನು ಮಾಡುವುದನ್ನು ಕಡಿಮೆ ಮಾಡಿ. ಇಲ್ಲವಾದಲ್ಲಿ ಈ ಹಿಂದೆ ಇದ್ದ 1 ಸಾವಿರ ರೂಪಾಯಿ ದಂಡವನ್ನು ಇದೀಗ ರೂ. 5 ಸಾವಿರಕ್ಕೆ ಹೆಚ್ಚಿಸಲಾಗಿದ್ದು, ದಯವಿಟ್ಟು ವಾಹನ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡುತ್ತಾ ನಿಮ್ಮ ಜೀವಕ್ಕೆ ಕುತ್ತು ತಂದುಕೊಂಡಂತಾಗುತ್ತದೆ ಎಚ್ಚರವಿರಲಿ.

ಮಕ್ಕಳ ಕೈಗೆ ವಾಹನ ಕೊಡುವ ಮುನ್ನ ಎಚ್ಚರವಿರಲಿ

ಮಕ್ಕಳ ಕೈಗೆ ವಾಹನ ಕೊಡುವ ಮುನ್ನ ಎಚ್ಚರವಿರಲಿ

ಪಾಲಕರು ತಮ್ಮ ಮಕ್ಕಳಿಗೆ ಬೈಕ್, ಕಾರು ನೀಡುವ ಮುನ್ನ ಮೊತ್ತೊಮ್ಮೆ ಯೋಚಿಸಿ. ಯಾಕೇಂದ್ರೆ ಮೋಟಾರ್ ಕಾಯ್ದೆಯಲ್ಲಿ ಹೊಸ ತಿದ್ದುಪಡಿ ತರಲಾಗಿದ್ದು, ಅಪ್ರಾಪ್ತರು ಗಾಡಿ ಓಡಿಸಿದ್ರೆ, ವಾಹನ ಮಾಲೀಕರಿಗೆ 25 ಸಾವಿರ ದಂಡ ಮತ್ತು 2 ಜೈಲಿಗೆ ಹೋಗಬೇಕಾಗುತ್ತದೆ.

ಚಾಲನಾ ಪರವಾನಗಿ ಬೇಕಾಗಿದ್ದರೆ ಆಧಾರ್ ಕಡ್ಡಾಯ

ಚಾಲನಾ ಪರವಾನಗಿ ಬೇಕಾಗಿದ್ದರೆ ಆಧಾರ್ ಕಡ್ಡಾಯ

ಮೇಲಿನ ಕಠಿಣ ಕ್ರಮಗಳಲ್ಲದೇ ಡ್ರೈವಿಂಗ್ ಲೈಸೆನ್ಸ್ ಬೇಕಂದ್ರೆ ಆಧಾರ್ ಕಾರ್ಡ್ ಲಿಂಕ್ ಮಾಡಲೇಬೇಕೇಂಬ ಹೊಸ ನಿಯಮ ಜಾರಿಗೆ ತರಲಾಗಿದೆ. ಜೊತೆಗೆ 10 ವರ್ಷ ಮೇಲ್ಪಟ್ಟ ಮಕ್ಕಳಿಗೆ ಉತ್ಕೃಷ್ಟ ಗುಣಮಟ್ಟದ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ ಇವೆಲ್ಲವನ್ನೂ ಚಾಲಕರು ವಿರೋಧಿಸುತ್ತಿದ್ದಾರೆ.

English summary
Imposing heavy penalty and modification of rule in indian motor vehicle act received stands opposition by the transporter.millions of transporters have gone for strike today, all over the country so what is the main reason behind with opposition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X