ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳಾ ಪೈಲಟ್ ಗಳ ನೇತೃತ್ವದಲ್ಲಿ ಸ್ಯಾನ್ ಫ್ರಾನ್ಸಿಸ್ಕೊ-ಬೆಂಗಳೂರು ವಿಮಾನಯಾನ ಆರಂಭ

|
Google Oneindia Kannada News

ನವದೆಹಲಿ, ಜನವರಿ 09: ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ಸ್ಯಾನ್ ಫ್ರಾನ್ಸಿಸ್ಕೊ-ಬೆಂಗಳೂರು ನಡುವೆ ನೇರ ವಿಮಾನ ಯಾನ ಸೇವೆ ಆರಂಭಿಸಿದ್ದು, ಶನಿವಾರ ರಾತ್ರಿ ಸ್ಯಾನ್ ಫ್ರಾನ್ಸಿಸ್ಕೊದಿಂದ ಮೊದಲ ವಿಮಾನ ಸಂಚಾರ ಆರಂಭವಾಗಲಿದೆ. ಮಹಿಳಾ ಪೈಲಟ್ ಗಳೇ ಈ ವಿಮಾನ ಯಾನವನ್ನು ನಿರ್ವಹಿಸುತ್ತಿರುವುದು ವಿಶೇಷವಾಗಿದೆ.

ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರತಿಕ್ರಿಯಿಸಿ, "ಏರ್ ಇಂಡಿಯಾದ ಮಹಿಳಾ ಶಕ್ತಿ ವಿಶ್ವದಲ್ಲೇ ಎತ್ತರಕ್ಕೆ ಹಾರಲಿದೆ" ಎಂದು ಶ್ಲಾಘಿಸಿದ್ದಾರೆ. ಏರ್ ಇಂಡಿಯಾದ ಮಹಿಳಾ ಪೈಲಟ್ ಗಳ ತಂಡ ಸ್ಯಾನ್ ಫ್ರಾನ್ಸಿಸ್ಕೊ-ಬೆಂಗಳೂರು ನಡುವಿನ ವಿಮಾನ ಯಾನವನ್ನು ಆರಂಭಿಸಲಿದೆ ಎಂದು ತಿಳಿಸಿದ್ದಾರೆ.

ಬೆಳಗಾವಿ-ಚೆನ್ನೈ ನಡುವೆ ಫೆಬ್ರವರಿ 2ರಿಂದ ನೇರ ವಿಮಾನ ಬೆಳಗಾವಿ-ಚೆನ್ನೈ ನಡುವೆ ಫೆಬ್ರವರಿ 2ರಿಂದ ನೇರ ವಿಮಾನ

ಕ್ಯಾಪ್ಟನ್ ಝೋಯಾ ಅಗರ್ ವಾಲ್ ನೇತೃತ್ವದಲ್ಲಿ ಮಹಿಳಾ ತಂಡ ಶನಿವಾರ ಮೊದಲ ವಿಮಾನ ಸಂಚಾರ ಆರಂಭಿಸಲಿದೆ. ಕ್ಯಾಪ್ಟನ್ ಪಾಪಗರಿ ತನ್ಮಯ್, ಕ್ಯಾಪ್ಟನ್ ಆಕಾಂಕ್ಷ ಸೋನಾವಾರ್, ಕ್ಯಾಪ್ಟನ್ ಶಿವಾನಿ ಮನಹಾಸ್ ಅವರನ್ನೊಳಗೊಂಡ ಈ ತಂಡ ವಿಮಾನ ಸಂಚಾರದ ಸಾರಥ್ಯ ವಹಿಸಲಿದೆ ಎಂದು ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.

All Women Pilots To Fly First San Francisco Bengaluru Flight

ಸ್ಯಾನ್ ಫ್ರಾನ್ಸಿಸ್ಕೊ-ಬೆಂಗಳೂರು ನಡುವಿನ ವೈಮಾನಿಕ ಅಂತರ ವಿಶ್ವದ ಅತ್ಯಂತ ದೀರ್ಘ ವಾಯು ಮಾರ್ಗ ಎನಿಸಿಕೊಂಡಿದೆ. 16 ಸಾವಿರ ಕಿಲೋ ಮೀಟರ್ ಅಂತರವನ್ನು ಈ ಮಾರ್ಗ ಒಳಗೊಂಡಿದೆ. ವಿಮಾನ ಉತ್ತರ ಧೃವವನ್ನು ಹಾದು ಅಟ್ಲಾಂಟಿಕ್ ಮಾರ್ಗದ ಮೂಲಕ ಬೆಂಗಳೂರು ತಲುಪಲಿದೆ.

ಮೊದಲ ವಿಮಾನ ಎಐ 176 ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಿಂದ ಶನಿವಾರ ರಾತ್ರಿ ಹೊರಡಿಲಿದ್ದು, ಸೋಮವಾರ ಮುಂಜಾನೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಇಳಿಯಲಿದೆ. ಒಟ್ಟು 238 ಸೀಟುಗಳಿರುವ ಬೋಯಿಂಗ್ 777-200 ಎಲ್ ಆರ್ ವಿಮಾನಗಳನ್ನು ಏರ್ ಇಂಡಿಯಾ ಕಾರ್ಯಾಚರಣೆ ನಡೆಸಲಿದೆ.

English summary
All-women cockpit crew will operate the inaugural San Francisco-Bengaluru flight on Saturday said Civil Aviation Minister Hardeep Singh Puri,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X