ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ಬಿಟ್ಟು ಎಲ್ಲಾ ರಾಜ್ಯಗಳಿಂದ ಜಿಎಸ್ ಟಿಗೆ ಬೆಂಬಲ

By Mahesh
|
Google Oneindia Kannada News

ನವದೆಹಲಿ, ಜೂನ್ 14: ಎನ್ ಡಿಎ ಸರ್ಕಾರದ ಉದ್ದೇಶಿತ ಸರಕುಗಳು ಮತ್ತು ಸೇವೆಗಳ ತೆರಿಗೆ ಮಸೂದೆಗೆ ತಮಿಳುನಾಡು ಹೊರತುಪಡಿಸಿ ಎಲ್ಲಾ ರಾಜ್ಯಗಳು ಸಮ್ಮತಿ ಸೂಚಿಸಿವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ಹೇಳಿದ್ದಾರೆ.

ದೇಶದಲ್ಲಿ ಏಕರೂಪ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುವ ಉದ್ದೇಶಿತದಿಂದ ಜಿಎಸ್ ಟಿ ಮಸೂದೆ ಜಾರಿಗೆ ತರಲು ಮೋದಿ ಸರ್ಕಾರ ಮುಂದಾಗಿದೆ. ಆದರೆ, ಮಸೂದೆಗೆ ಮುಂಬರುವ ಸಂಸತ್ ಅಧಿವೇಶನದಲ್ಲಿ ಬೆಂಬಲ ಸಿಗುವ ನಿರೀಕ್ಷೆಯಲ್ಲಿರುವ ಜೇಟ್ಲಿ ಅವರು ಮಸೂದೆಗೆ ಸಂಪೂರ್ಣ ಬೆಂಬಲ ಪಡೆಯಲು ಯಾವುದೇ ಡೆಡ್ ಲೈನ್ ಹಾಕಿಕೊಂಡಿಲ್ಲ ಎಂದಿದ್ದಾರೆ.

All states, except Tamil Nadu, support GST, says Arun Jaitley

ಜಿಎಸ್ ಟಿ ಮಸೂದೆ ಬಗ್ಗೆ ಚರ್ಚಿಸಲು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರುರು ಕೋಲ್ಕತಾದಲ್ಲಿ 22 ರಾಜ್ಯಗಳ ವಿತ್ತ ಸಚಿವರ ಜೊತೆ ಮಾತುಕತೆ ನಡೆಸಿ ಮಸೂದೆಗೆ ಸರ್ವಾನುಮತದ ಅಂಗೀಕಾರ ಪಡೆಯುವ ಭರವಸೆ ಪಡೆದುಕೊಂಡರು.
'ವಾಸ್ತವವಾಗಿ ಎಲ್ಲಾ ರಾಜ್ಯಗಳು ಜಿಎಸ್​ಟಿಯನ್ನು ಬೆಂಬಲಿಸಿವೆ, ತಮಿಳುನಾಡು ಕೆಲವು ಆಕ್ಷೇಪಗಳನ್ನು ವ್ಯಕ್ತಪಡಿಸಿದೆ ಎಂದು ಜೇಟ್ಲಿ ಹೇಳಿದರು.
ಸರಕು ಮತ್ತು ಸೇವಾ ತೆರಿಗೆ ಮಸೂದೆಗೆ ಲೋಕಸಭೆ ಈ ಹಿಂದೆಯೇ ಅನುಮೋದನೆ ನೀಡಿದೆ. ಆದರೆ ರಾಜ್ಯಸಭೆಯಲ್ಲಿ ಅನುಮೋದನೆ ಲಭಿಸದ ಕಾರಣ ಅದು ನನೆಗುದಿಗೆ ಬಿದ್ದಿದೆ. ಏಪ್ರಿಲ್ 1, 2016 ರಿಂದ ಜಾರಿಗೊಳಿಸಲು ಮೋದಿ ಸರ್ಕಾರ ಮುಂದಾಗಿತ್ತು.(ಪಿಟಿಐ)

English summary
Virtually all states have supported the idea of GST except Tamil Nadu which has "some reservations", finance minister Arun Jaitley said on Tuesday after a meeting of empowered committee of state FMs on the long awaited indirect tax reform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X