ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ಪೂಜೆ: 'ಹಗಿಯಾ ಸೋಫಿಯಾ' ಘಟನೆ ನೆನಪಿಸಿದ ಮುಸ್ಲಿಂ ಸಂಘಟನೆ

|
Google Oneindia Kannada News

ಲಕ್ನೌ, ಆಗಸ್ಟ್ 5: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರುತ್ತಿದೆ. ಇಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಿದ್ದಾರೆ.

Recommended Video

ಅಯೋಧ್ಯೆಯ ಬಗ್ಗೆ ಮಾತನಾಡಿದ ಬಾಬಾ ರಾಮ್ ದೇವ್ | Oneindia Kannada

ಇಂತಹ ಸಂದರ್ಭದಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ-AIMPLB) ಸುಪ್ರೀಂಕೋರ್ಟ್ ನೀಡಿದ್ದ ಅಯೋಧ್ಯೆ ತೀರ್ಪನ್ನು ಟ್ವಿಟ್ಟರ್ ಮೂಲಕ ಪ್ರಶ್ನಿಸಿದೆ.

ರಾಮ ಮಂದಿರ ಭೂಮಿ ಪೂಜೆ: ಅಯೋಧ್ಯೆಯಲ್ಲಿ ಮೋದಿಯ ವೇಳಾಪಟ್ಟಿರಾಮ ಮಂದಿರ ಭೂಮಿ ಪೂಜೆ: ಅಯೋಧ್ಯೆಯಲ್ಲಿ ಮೋದಿಯ ವೇಳಾಪಟ್ಟಿ

ಅಷ್ಟೇ ಅಲ್ಲ, ಟರ್ಕಿ ದೇಶದಲ್ಲಿರುವ ಹಗಿಯಾ ಸೋಫಿಯಾ ಮಸೀದಿ ಕುರಿತು ಉಲ್ಲೇಖಿಸಿ ಭವಿಷ್ಯದಲ್ಲಿ ಬಾಬ್ರಿ ಮಸೀದಿ ಸ್ಥಳದಲ್ಲಿ ಮಸೀದಿ ಆಗಲಿದೆ ಎಂದು ಎಚ್ಚರಿಕೆ ಸಹ ನೀಡಿದೆ. ಮುಂದೆ ಓದಿ....

ಮಸೀದಿ ಯಾವತ್ತಿದ್ದರೂ ಮಸೀದಿನೇ!

'ಬಾಬ್ರಿ ಮಸೀದಿ ಇತ್ತು ಮತ್ತು ಯಾವಾಗಲೂ ಮಸೀದಿಯಾಗಿಯೇ ಇರಲಿದೆ. ಹಗಿಯಾ ಸೋಫಿಯಾ ನಮಗೆ ಉತ್ತಮ ಉದಾಹರಣೆ. ಅನ್ಯಾಯ, ದಬ್ಬಾಳಿಕೆ, ನಾಚಿಕೆಗೇಡಿನ ಮತ್ತು ಬಹುಮತ ಮನವೊಲಿಸುವ ತೀರ್ಪಿನ ಮೂಲಕ ಭೂಮಿಯನ್ನು ಆಕ್ರಮಿಸಿಕೊಳ್ಳುವುದರಿಂದ ಅದರ ಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಎದೆಗುಂದುವ ಅಗತ್ಯವಿಲ್ಲ. ಪರಿಸ್ಥಿತಿಗಳು ಶಾಶ್ವತವಾಗಿ ಉಳಿಯುವುದಿಲ್ಲ' ಎಂದು ಟ್ವೀಟ್ ಮಾಡಿದೆ.

ಹಗಿಯಾ ಸೋಫಿಯಾ ಘಟನೆ ಏನಿದು?

ಹಗಿಯಾ ಸೋಫಿಯಾ ಘಟನೆ ಏನಿದು?

ಪ್ರಸ್ತುತ, ಟರ್ಕಿ ದೇಶದ ಇಸ್ತಾಂಬುಲ್‌ನಲ್ಲಿರುವ ಮಸೀದಿ ಹಗಿಯಾ ಸೋಫಿಯಾ. ಈ ಹಿಂದೆ ಈ ಸ್ಥಳದಲ್ಲಿ ಚರ್ಚ್ ಇತ್ತು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. 537ರಲ್ಲಿ ನಿರ್ಮಿಸಲಾದ ಹಗಿಯಾ ಸೋಫಿಯಾ ಪೂರ್ವ ರೋಮನ್ ಸಾಮ್ರಾಜ್ಯದ (ಬೈಜಾಂಟೈನ್ ಸಾಮ್ರಾಜ್ಯ) ಮತ್ತು ಪೂರ್ವ ಆರ್ಥೊಡಾಕ್ಸ್ ಚರ್ಚ್‌ನ ಅತಿದೊಡ್ಡ ಕ್ರಿಶ್ಚಿಯನ್ ಚರ್ಚ್ ಆಗಿತ್ತು. 1453 ರಲ್ಲಿ ಕಾನ್ಸ್ಟೆಂಟಿನೋಪಲ್ ಒಟ್ಟೋಮನ್ ಸಾಮ್ರಾಜ್ಯ ಪತನದ ನಂತರ ಇದನ್ನು ಮಸೀದಿಯಾಗಿ ಪರಿವರ್ತಿಸಲಾಯಿತು. 1935ರಲ್ಲಿ ಜಾತ್ಯತೀತ ಟರ್ಕಿಶ್ ಗಣರಾಜ್ಯ ಇದನ್ನು ವಸ್ತುಸಂಗ್ರಹಾಲಯವಾಗಿ ಸ್ಥಾಪಿಸಿತು. ಬಳಿಕ 2020ರಲ್ಲಿ ಇದನ್ನು ಮಸೀದಿಯಾಗಿ ಪುನಃ ತೆರೆಯಲಾಗಿದೆ.

ರಾಮಮಂದಿರದ ಎತ್ತರ, ಅಗಲ, ವಿನ್ಯಾಸ ಹಾಗೂ ವಿಶೇಷತೆಗಳುರಾಮಮಂದಿರದ ಎತ್ತರ, ಅಗಲ, ವಿನ್ಯಾಸ ಹಾಗೂ ವಿಶೇಷತೆಗಳು

ಐದು ಎಕರೆ ಭೂಮಿ ಬೇಡ ಎಂದು ಮುಸ್ಲಿಂ ಸಂಘಟನೆ

ಐದು ಎಕರೆ ಭೂಮಿ ಬೇಡ ಎಂದು ಮುಸ್ಲಿಂ ಸಂಘಟನೆ

ಅಯೋಧ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಐದು ಎಕರೆ ಜಾಗವನ್ನು ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಆದರೆ, ಪರ್ಯಾಯವಾಗಿ ನೀಡಲಾಗುತ್ತಿರುವ ಐದು ಎಕರೆ ಭೂಮಿಯನ್ನು ಸ್ವೀಕರಿಸುವುದಿಲ್ಲ ಎಂದು ಎಐಎಂಪಿಎಲ್‌ಬಿ ಹೇಳಿತ್ತು. ಸರ್ವಾನುಮತದ ಆಧಾರದಲ್ಲಿ ನೀಡಿದ ತೀರ್ಪನ್ನು ತಾವು ವಿರೋಧಿಸುತ್ತೇವೆ ಎಂದು ಮತ್ತೊಂದು ಮುಸ್ಲಿಂ ಸಂಸ್ಥೆ ಜಾಮಿಯತ್ ಉಲಾಮಾ-ಇ-ಹಿಂದ್ (ಜೆಯುಹೆಚ್) ಹೇಳಿತ್ತು.

ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಏನಿದೆ?

ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಏನಿದೆ?

2010 ರಲ್ಲಿ ಅಲಹಾಬಾದ್ ಹೈಕೋರ್ಟ್ ಈ ಭೂಮಿಯನ್ನು ನಿರ್ಮೋಹಿ ಅಖರಾ, ರಾಮ್ ಲಲ್ಲಾ ಮತ್ತು ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಗೆ ಸಮಾನವಾಗಿ ವಿತರಿಸಲು ಆದೇಶಿಸಿತ್ತು. ಆದರೆ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐದು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ನ್ಯಾಯಪೀಠ ಸರ್ವಾನುಮತದಿಂದ ಹೈಕೋರ್ಟ್ ತೀರ್ಪನ್ನು ಬದಿಗಿಟ್ಟು ಭೂಮಿಯನ್ನು ರಾಮ್ ಲಲ್ಲಾ ಅವರಿಗೆ ನೀಡಿತು. ಸ್ಥಳದ ನಿರ್ವಹಣೆ ಮತ್ತು ದೇವಾಲಯದ ನಿರ್ಮಾಣದ ಮೇಲ್ವಿಚಾರಣೆಗೆ ಟ್ರಸ್ಟ್ ಸ್ಥಾಪಿಸುವಂತೆ ಸರ್ಕಾರಕ್ಕೆ ಆದೇಶಿಸಿತು ಮತ್ತು ಮಸೀದಿಗೆ ಪರ್ಯಾಯ ಸ್ಥಳದಲ್ಲಿ ಐದು ಎಕರೆ ಭೂಮಿಯನ್ನು ನೀಡಿತು.

English summary
Ram temple foundation stone laying ceremony: All India Muslim personal Law Board (AIMPLB) questioned the Supreme Court judgement in Ayodhya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X