ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಯೋಧರು

Posted By:
Subscribe to Oneindia Kannada

ಜಮ್ಮು ಮತ್ತು ಕಾಶ್ಮೀರ, ಏಪ್ರಿಲ್ 10 : ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಗಡಿ ನುಸುಳಲು ಯತ್ನಿಸುತ್ತಿದ್ದ ನಾಲ್ವರು ಉಗ್ರರನ್ನು ಭಾರತೀಯ ಗಡಿ ಭದ್ರತಾ ಪಡೆ ಯೋಧರು ಹೊಡೆದುರುಳಿಸಿದ್ದಾರೆ.

ಗಡಿಯಲ್ಲಿ ಕಾವಲು ಕಾಯುತ್ತಿದ್ದ ಯೋಧರು ಉಗ್ರರು ಗಡಿ ನುಸುಳುತ್ತಿದ್ದನ್ನು ಗಮನಿಸಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ನಾಲ್ವರು ಉಗ್ರರು ಮೃತಪಟ್ಟಿದ್ದಾರೆ.

Alert Indian Army kills 4 terrorists who tried to infiltrate into Kashmir

ಶ್ರೀನಗರದ ಬುದ್ಗಾಮ್ ಜಿಲ್ಲೆಯ ಲೋಕಸಭೆ ಉಪ ಚುನಾವಣೆ ಮತದಾನದ ವೇಳೆ ಪ್ರತಿಭಟನಾಕಾರರು ಮತ್ತು ಗಡಿ ಭದ್ರತಾ ಯೋಧರ ನಡುವಿನ ಸಂಘರ್ಷವನ್ನು ಅಸ್ತ್ರವಾಗಿಸಿಕೊಂಡು ಮತ್ತೊಷ್ಟು ಗಲಭೆ ಸೃಷ್ಟಿಸಲು ಈ ಉಗ್ರರು ಗಡಿ ನುಸುಳುತ್ತಿದ್ದರು ಎನ್ನಲಾಗಿದೆ.

ಮೃತ ಉಗ್ರರು ಲಷ್ಕರ್ ಎ ತೋಯ್ಬಾ ಸಂಘಟನೆಯ ಉಗ್ರರು ಎಂದು ಹೇಳಲಾಗುತ್ತಿದ್ದು ಭಾರತೀಯ ಸೇನೆ ಕಾರ್ಯಾಚರಣೆಯನ್ನು ಮುಂದುವರೆಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Four terrorists who were trying to cross over into Kashmir were killed by security forces. The four terrorists suspected to be part of the Lashkar-e-Tayiba were trying to gain entry through Keran when they were intercepted by security forces and killed.
Please Wait while comments are loading...