ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಪ್ರವಾದಿ ವಿರುದ್ಧ ಹೇಳಿಕೆ, ಭಾರತಕ್ಕೆ ಅಲ್ ಖೈದಾದಿಂದ ಎಚ್ಚರಿಕೆ ಪತ್ರ

|
Google Oneindia Kannada News

ನವದೆಹಲಿ, ಜೂನ್ 07: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರ ಸ್ಥಾನದಲ್ಲಿದ್ದ ನೂಪುರ್ ಶರ್ಮ ನೀಡಿದ ಹೇಳಿಕೆ ವಿರುದ್ಧ ಉಗ್ರ ಸಂಘಟನೆ ಕೆಂಡಕಾರಿದೆ. ಪ್ರವಾದಿ ಮೊಹಮ್ಮದರ ವಿರುದ್ಧ ಅವಹೇಳನಕಾರಿ ಹೇಳಿಕೆ ಇದಾಗಿದೆ ಎಂದು ಆರೋಪಿಸಿರುವ ಉಗ್ರ ಸಂಘಟನೆ ಇದಕ್ಕೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಹೇಳಿದೆ.

ಜೂನ್ 6ರ ದಿನಾಂಕವಿರುವ ಈ ಪತ್ರ ಉಗ್ರ ಸಂಘಟನೆ ಅಲ್ ಖೈದಾದಿಂದ ಬಂದಿದ್ದು, ಆತ್ಮಾಹುತಿ ದಾಳಿಯ ಎಚ್ಚರಿಕೆ ನೀಡಲಾಗಿದೆ. ಭಾರತದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ರಾಜ್ಯಗಳಾದ ಉತ್ತರ ಪ್ರದೇಶ ಹಾಗ್ ಗುಜರಾತಿನಲ್ಲಿ ವಿಧ್ವಂಸಕ ಕೃತ್ಯ, ಸರಣಿ ಆತ್ಮಾಹುತಿ ದಾಳಿ ಕೈಗೊಳ್ಳುವುದಾಗಿ ಪತ್ರದಲ್ಲಿ ಹೇಳಲಾಗಿದೆ.

"ನಮ್ಮ ಪ್ರವಾದಿಯನ್ನು ಅವಮಾನಿಸುವವರನ್ನು ನಾವು ಕೊಲ್ಲುತ್ತೇವೆ ಮತ್ತು ನಮ್ಮ ಪ್ರವಾದಿಯನ್ನು ಅವಮಾನಿಸುವ ಧೈರ್ಯವಿರುವವರನ್ನು ಸ್ಫೋಟಿಸಲು ನಾವು ನಮ್ಮ ದೇಹ ಮತ್ತು ನಮ್ಮ ಮಕ್ಕಳ ದೇಹಗಳೊಂದಿಗೆ ಸ್ಫೋಟಕಗಳನ್ನು ಹೊತ್ತು ಬರುತ್ತೇವೆ... ಕೇಸರಿ ಭಯೋತ್ಪಾದಕರು ಈಗ ದೆಹಲಿ, ಬಾಂಬೆ, ಯುಪಿ ಮತ್ತು ಗುಜರಾತ್ ರಾಜ್ಯದಲ್ಲಿ ತಮ್ಮ ಅಂತ್ಯಕ್ಕಾಗಿ ಕಾಯಬೇಕು ," ಎಂದು ಪತ್ರದಲ್ಲಿ ಹೇಳಲಾಗಿದೆ.

Al-Qaeda Threatens Attacks in Parts of India Over Controversial Remarks on Prophet

ಪ್ರವಾದಿ ಮುಹಮ್ಮದ್ ಬಗ್ಗೆ ಕೆಲವು ಬಿಜೆಪಿ ನಾಯಕರು ಹೇಳಿಕೆ ನೀಡಿದ ನಂತರ ಭುಗಿಲೆದ್ದಿರುವ ವಿವಾದದ ಬೆನ್ನಲ್ಲೇ ಈ ಪತ್ರ ಕಾಣಿಸಿಕೊಂಡಿದೆ.

ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ವಿವಾದ ಉಲ್ಭಣವಾಗುತ್ತಿದ್ದಂತೆ ಕೆಲವು ಮುಸ್ಲಿಂ ರಾಷ್ಟ್ರಗಳ ಪ್ರತಿಭಟನೆ ಹಾದಿ ಹಿಡಿದು, ಭಾರತದ ವಿರುದ್ಧ ನಿಂತಿವೆ. ಈ ನಡುವೆ ಬಿಜೆಪಿ ತನ್ನ ರಾಷ್ಟ್ರೀಯ ವಕ್ತಾರ ಸ್ಥಾನದಲ್ಲಿದ್ದ ನೂಪುರ್ ಶರ್ಮಾರನ್ನು ಅಮಾನತುಗೊಳಿಸಿದೆ ಮತ್ತು ದೆಹಲಿಯ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಉಚ್ಚಾಟಿಸಿದೆ.

ಕುವೈತ್, ಕತಾರ್ ಮತ್ತು ಇರಾನ್‌ನಂತಹ ದೇಶಗಳ ತೀಕ್ಷ್ಣ ಪ್ರತಿಕ್ರಿಯೆಯ ನಡುವೆ, ಬಿಜೆಪಿ ಈ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಪಕ್ಷ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಮತ್ತು ಯಾವುದೇ ಧಾರ್ಮಿಕ ವ್ಯಕ್ತಿತ್ವದ ಅವಮಾನಗಳನ್ನು ಬಲವಾಗಿ ಖಂಡಿಸುತ್ತದೆ ಎಂದಿದೆ.

ನೂಪುರ್ ಶರ್ಮಾ ಅಮಾನತು ಕ್ರಮ ಒಂದು ನಾಟಕ: ಓವೈಸಿನೂಪುರ್ ಶರ್ಮಾ ಅಮಾನತು ಕ್ರಮ ಒಂದು ನಾಟಕ: ಓವೈಸಿ

ಸುಮಾರು 10 ದಿನಗಳ ಹಿಂದೆ ಟಿವಿ ಕಾರ್ಯಕ್ರಮವೊಂದರ ಚರ್ಚೆಯಲ್ಲಿ ಪಾಲ್ಗೊಂಡಿದ್ದ ನೂಪುರ್ ಶರ್ಮ ಮಾಡಿದ ಕಾಮೆಂಟ್‌ಗಳು ಮತ್ತು ಜಿಂದಾಲ್ ಮಾಡಿದ್ದ ಟ್ವೀಟ್‌ಗಳು ಕಿಡಿ ಹೊತ್ತಲು ಕಾರಣವಾಗಿತ್ತು. ಮುಸ್ಲಿಂ ರಾಷ್ಟ್ರಗಳು ತಮ್ಮ ದೇಶಗಳ ಸೂಪರ್ ಮಾರುಕಟ್ಟೆಗಳಲ್ಲಿ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಿದ್ದವು. ರಾಯಭಾರಿಗಳಿಗೆ ಸಮನ್ಸ್ ಜಾರಿಯಾಗಿತ್ತು, ನೂಪುರ್, ಜಿಂದಾಲ್ ಉಚ್ಚಾಟನೆಯಾಯಿತು, ಬೆದರಿಕೆ ಕರೆ, ಪರ-ವಿರೋಧ ಚರ್ಚೆ ಮೊದಲುಗೊಂಡಿತು.

Nupur Sharma

ಬಿಜೆಪಿ ಯುವ ಘಟಕದ ಮುಖಂಡನ ಬಂಧನ

ಉತ್ತರ ಪ್ರದೇಶದ ಬಿಜೆಪಿ ಯುವ ಘಟಕದ ಮುಖಂಡ ವಿವಾದಾತ್ಮಕ ಟ್ವೀಟ್‌ ಮಾಡಿದ್ದರಿಂದ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.

Timeline; ಪ್ರವಾದಿ ಬಗ್ಗೆ ಅವಹೇಳನ, ವಿವಾದದ ಸುತ್ತಮುತ್ತTimeline; ಪ್ರವಾದಿ ಬಗ್ಗೆ ಅವಹೇಳನ, ವಿವಾದದ ಸುತ್ತಮುತ್ತ

ಕಾನ್ಪುರದಲ್ಲಿ ಹಿಂಸಾಚಾರ ಭುಗಿಲೆದ್ದ ನಾಲ್ಕು ದಿನಗಳ ನಂತರ ಪ್ರವಾದಿ ಮುಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಯುವ ಘಟಕದ ನಾಯಕನನ್ನು ಸ್ಥಳೀಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಿಜೆಪಿ ಯುವ ಘಟಕದ ನಾಯಕ ಹರ್ಷಿತ್ ಶ್ರೀವಾಸ್ತವ ಮಾಡಿದ್ದ ವಿವಾದ್ಮತಕ ಟ್ವೀಟ್ ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಘರ್ಷಣೆಗಳಿಗೆ ಕಾರಣವಾಗಿದೆ ಎಂದು ಕಾನ್ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತಂತೆ ವಿಚಾರಣೆಗಾಗಿ ಆತನನ್ನು ಬಂಧಿಸಲಾಗಿದೆ.

ನೂಪುರ್ ಶರ್ಮಾಗೆ ಸಮನ್ಸ್

ಪ್ರವಾದಿ ಮುಹಮ್ಮದ್ ಅವರ ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ಮಹಾರಾಷ್ಟ್ರ ಪೊಲೀಸರು ಮಂಗಳವಾರ ಸಮನ್ಸ್ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಜೂನ್ 22 ರಂದು ಥಾಣೆ ಜಿಲ್ಲೆಯ ಮುಂಬ್ರಾ ಪೊಲೀಸ್ ಠಾಣೆಯಲ್ಲಿ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಸಮನ್ಸ್‌ನಲ್ಲಿ ತಿಳಿಸಲಾಗಿದೆ.

ನೂಪುರ್ ಶರ್ಮಾಗೆ ಇಮೇಲ್ ಹಾಗೂ ಸ್ಪೀಡ್ ಪೋಸ್ಟ್ ಮೂಲಕ ಸಮನ್ಸ್ ಕಳುಹಿಸಿದ್ದು, ಆಕೆಯ ವಿರುದ್ಧ ದಾಖಲಾಗಿರುವ ಪ್ರಕರಣದ ವಿವರಗಳನ್ನು ಲಗತ್ತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Terror group Al-Qaeda has issued a threat letter, dated June 6, stating that it would launch suicide attacks in Delhi, Mumbai, Uttar Pradesh and Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X