ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂಗಳ ಧಾರ್ಮಿಕ ಭಾವನೆ ಗೌರವಿಸಿ, ಗೋ ಮಾಂಸ ಸೇವನೆ ನಿಲ್ಲಿಸಿ

ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಯಾಗುವಂತಹ ಗೋ ಮಾಂಸ ಸೇವನೆಯನ್ನು ಮುಸ್ಲಿಮರು ನಿಲ್ಲಿಸಬೇಕು ಎಂದು ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದ ಮುಖ್ಯಸ್ಥ ಮನವಿ ಮಾಡಿದ್ದಾರೆ

|
Google Oneindia Kannada News

ನವದೆಹಲಿ, ಏಪ್ರಿಲ್ 4: ಮುಸ್ಲಿಮರು ಗೋ ಸೇವನೆ ಭಕ್ಷಣೆ ನಿಲ್ಲಿಸಬೇಕು ಹಾಗೂ ತ್ರಿವಳಿ ತಲಾಖ್ ಷರಿಯಾಗೆ ವಿರುದ್ಧವಾದದ್ದು ಎಂದು ಅಜ್ಮೇರ್ ದರ್ಗಾದ ಮುಖ್ಯಸ್ಥ ಸೋಮವಾರ ಹೇಳಿದ್ದಾರೆ. ಈ ದರ್ಗಾ ಭಾರತದಲ್ಲೇ ಬಹಳ ಹೆಸರುವಾಸಿಯಾದದ್ದು.

ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿ 805ನೇ ಉರುಸ್ ವೇಳೆ ಮಾತನಾಡಿದ ಅವರು, ತಮ್ಮ ಜೀವನದುದ್ದಕ್ಕೂ ಹಿಂದೂ-ಮುಸ್ಲಿಂ ಮಧ್ಯೆ ಶಾಂತಿಯುತ ಸಹಬಾಳ್ವೆಗಾಗಿ ಹಂಬಲಿಸಿದವರು ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿ. ನಾವು (ಮುಸ್ಲಿಮರು) ಗೋ ಮಾಂಸ ಭಕ್ಷಣೆ ನಿಲ್ಲಿಸಬೇಕು. ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ಗೌರವಿಸಬೇಕು ಎಂದು ಝೈನುಲ್ ಅಬೆದಿನ್ ಖಾನ್ ಹೇಳಿದ್ದಾರೆ.[ಇಸ್ಲಾಂನಲ್ಲಿ ಮಾಂಸ ಸೇವನೆ ಕಡ್ಡಾಯವಲ್ಲ, ಮುಸ್ಲಿಮರೇ ಗೋಮಾಂಸ ತ್ಯಜಿಸಿ]

Ajmer

ಈ ದಿನ ನಾನು ಹಾಗೂ ನನ್ನ ಕುಟುಂಬ ನಿರ್ಧರಿಸಿದ್ದೀವಿ, ಇನ್ನು ನಮ್ಮ ಜೀವನದಲ್ಲಿ ಗೋ ಮಾಂಸ ತಿನ್ನೋದಿಲ್ಲ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದೇಶದ ನಾನಾ ರಾಜ್ಯಗಳಲ್ಲಿ ಗೋ ಹತ್ಯೆಗೆ ಸಂಬಂಧಿಸಿದ ಹಾಗೆ ಕೆಲ ಕಠಿಣ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

English summary
Spiritual head of the Ajmer Sharif dargah on Monday called upon Muslims to give up beef eating and said triple talaq is against Sharia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X