ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ವಿರುದ್ಧ 'ನೀಚ' ಪದಬಳಕೆ, ಕ್ಷಮೆ ಕೋರಿದ ಮಣಿಶಂಕರ್ ಅಯ್ಯರ್

By Sachhidananda Acharya
|
Google Oneindia Kannada News

ನವದೆಹಲಿ, ಡಿಸೆಂಬರ್ 7: ಪ್ರಧಾನಿ ನರೇಂದ್ರ ಮೋದಿ ವಿರುದ್ಧ 'ನೀಚ' ಪದ ಬಳಕೆ ಮಾಡಿ ಭಾರೀ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಕ್ಷಮೆ ಕೇಳಿದ್ದಾರೆ.

ಅರಿತೋ ಅರಿಯದೆಯೋ ನನ್ನಿಂದ ತಪ್ಪಾಗಿದ್ರೆ ಕ್ಷಮಿಸಿ!ಅರಿತೋ ಅರಿಯದೆಯೋ ನನ್ನಿಂದ ತಪ್ಪಾಗಿದ್ರೆ ಕ್ಷಮಿಸಿ!

ತಪ್ಪು ಪದ ಪ್ರಯೋಗಕ್ಕೆ ಕ್ಷಮೆ ಕೇಳಿರುವ ಮಣಿ ಶಂಕರ್ ಅಯ್ಯರ್ ಹಿಂದಿ ನನ್ನ ಮಾತೃ ಭಾಷೆಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಾನು ಜಾತಿಯನ್ನು ಉಲ್ಲೇಖಿಸಿ ಈ ಪದ ಪ್ರಯೋಗಿಸಿರಲಿಲ್ಲ. ಹಿಂದಿಯಲ್ಲಿ ಈ ಪದಕ್ಕೆ ಬೇರೆ ಅರ್ಥವಿದೆ ಎಂದು ತಿಳಿದಿರಲಿಲ್ಲ ಎಂದು ಅಯ್ಯರ್ ವಿವರಿಸಿದ್ದಾರೆ.

ಮೋದಿಯನ್ನು 'ನೀಚ' ಎಂದ ಅಯ್ಯರ್, ಮೋದಿಯಿಂದ ತಕ್ಕ ಉತ್ತರಮೋದಿಯನ್ನು 'ನೀಚ' ಎಂದ ಅಯ್ಯರ್, ಮೋದಿಯಿಂದ ತಕ್ಕ ಉತ್ತರ

ಇದೇ ವೇಳೆ ತಾವು ಮೋದಿಯವರನ್ನು ಚಾಯ್ ವಾಲಾ ಎಂದು ಕರೆದಿಲ್ಲ. ನೀವು ಬೇಕಾದರೆ ಇಂಟರ್ನೆಟ್ ಗೆ ಹೋಗಿ ನನ್ನೆಲ್ಲಾ ವಿಡಿಯೋಗಳನ್ನು ನೋಡಬಹುದು ಎಂದು ಅಯ್ಯರ್ ಸವಾಲು ಹಾಕಿದ್ದಾರೆ.

ರಾಹುಲ್ ಟೀಕೆ

ರಾಹುಲ್ ಟೀಕೆ

ಕಾಂಗ್ರೆಸ್ ಪಕ್ಷದ ಮೇಲೆ ದಾಳಿ ಮಾಡಲು ಬಿಜೆಪಿ ಮತ್ತು ಪ್ರಧಾನ ಮಂತ್ರಿಯವರು ಕೊಳಕಾದ ಭಾಷೆಯನ್ನು ಬಳಸುತ್ತಾರೆ. ಆದರೆ ಕಾಂಗ್ರೆಸ್ ವಿಭಿನ್ನ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದೆ. ಪ್ರಧಾನಿಗೆ ಮನವಿ ಮಾಡಲು ಶ್ರೀ ಮಣಿ ಶಂಕರ್ ಅಯ್ಯರ್ ಅವರು ಬಳಸಿದ ಭಾಷೆ ಮತ್ತು ಟೋನ್ ನ್ನು ನಾನು ಪ್ರಶಂಸಿಸುವುದಿಲ್ಲ. ರಾಹುಲ್ ಗಾಂಧಿ ಅವರು ಹೇಳಿದ್ದಕ್ಕಾಗಿ ಕ್ಷಮೆ ಕೇಳಬೇಕೆಂದು ಕಾಂಗ್ರೆಸ್ ಮತ್ತು ನಾನು ಎರಡೂ ನಿರೀಕ್ಷಿಸುತ್ತೇವೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಲಾಲೂ ಟೀಕೆ

ಲಾಲೂ ಟೀಕೆ

ಮಣಿಶಂಕರ್ ಅಯ್ಯರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಆರ್.ಜೆ.ಡಿ ನಾಯಕ ಲಾಲೂ ಪ್ರಸಾದ್ ಯಾದವ್ ಕಿಡಿಕಾರಿದ್ದಾರೆ.

ಮೋದಿ ಪ್ರತ್ಯುತ್ತರ

ನನಗೆ 'ನೀಚ' ಎಂದು ಕರೆಯುವ 'ಬುದ್ಧಿವಂತ' ಕಾಂಗ್ರೆಸ್ ನಾಯಕನ ಬಗ್ಗೆ ನಾನು ಹೇಳಲು ಇಚ್ಛಿಸುವುದಿಲ್ಲ. ಕಾಂಗ್ರೆಸಿನ ಮನಸ್ಥಿತಿ ಹಾಗೆಯೇ. ಅವರಿಗೆ ಅವರ ಭಾಷೆ ಇದೆ ಮತ್ತು ನಮಗೆ ನಮ್ಮ ಕೆಲಸ ಇದೆ. ಇದಕ್ಕೆ

ಮಣಿಶಂಕರ್ ಅಯ್ಯರ್ ಹೇಳಿದ್ದೇನು?

ಮಣಿಶಂಕರ್ ಅಯ್ಯರ್ ಹೇಳಿದ್ದೇನು?

ಡಾ. ಬಿ. ಆರ್ ಅಂಬೇಡ್ಕರ್ ಅವರು ಕಂಡ ಕನಸನ್ನು ನನಸಾಗಿಸಲು ಶ್ರಮಿಸಿದವರಲ್ಲಿ ಜವಹರಲಾಲ್ ನೆಹರೂ ಅಗ್ರಗಣ್ಯರು. ದೇಶಕ್ಕಾಗಿ ದುಡಿದ ಇಂಥ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡುವ ಇಂಥ ವ್ಯಕ್ತಿ(ಮೋದಿ)ಯನ್ನು ನೀಚ ಎನ್ನದೇ ಇರಲಾಗದು, ಆತನಿಗೆ ಯಾವುದೇ ನಾಗರಿಕ ಸಭ್ಯತೆಗಳಿಲ್ಲ. ಅತ್ಯಂತ ಹೀನಾಯ ರೀತಿಯ ರಾಜಕೀಯವನ್ನುಅವರು ಮಾಡುತ್ತಿದ್ದಾರೆ ಎಂದು 'ಎಎನ್ಐ' ಸುದ್ದಿಸಂಸ್ಥೆಗೆ ಮಣಿಶಂಕರ್ ಅಯ್ಯರ್ ಪ್ರತಿಕ್ರಿಯೆ ನೀಡಿದ್ದರು.

English summary
Congress leader Mani Shankar Aiyar on Thursday apologised for Neech remark and said that Hindi is not his mother tongue. Clarifying his remarks, Aiyar said: "I never meant low born. In English there is a clear distinction between low and low-born. The meaning that Modi is drawing out of this is not my concern."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X