ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋ ಜತೆ ಪೈಪೋಟಿ: ಏರ್‌ಟೆಲ್, ವೊಡಾಫೋನ್ ಹೊಸ ನಿರ್ಣಯ, ಗ್ರಾಹಕರ ಮೇಲೆ ಪರಿಣಾಮ

|
Google Oneindia Kannada News

ನವದೆಹಲಿ, ಅಕ್ಟೋಬರ್ 05: ಜಿಯೋ ಜೊತೆ ಪೈಪೋಟಿ ನೀಡಲಾಗದೆ ಒದ್ದಾಡುತ್ತಿರುವ ಏರ್‌ಟೆಲ್, ವೊಡಾಫೋನ್ ಕಂಪಡನಿಗಳು ಹೊಸ ನಿರ್ಣಯವೊಂದನ್ನು ತಳೆದಿವೆ. ಇದರ ಪರಿಣಾಮ ಏರ್‌ಟೆಲ್, ವೊಡಾಫೋನ್, ಐಡಿಯಾ ಬಳಕೆದಾರರ ಮೇಲೆ ಆಗಲಿದೆ.

ಇಂಟರ್‌ಕನೆಕ್ಟ್ ಯೂಸರ್ ಫೀ ಅನ್ನು ಜಿಯೋಕ್ಕೆ ಸರಿಸಮಾನಿ ಮಾಡಿಕೊಳ್ಳಲೆಂದು ಏರ್‌ಟೆಲ್, ವೋಡಾಫೋನ್ ಐಡಿಯಾ ಸಂಸ್ಥೆಗಳು ತಾವು ನೀಡುತ್ತಿದ್ದ ರಿಂಗರ್ ಅವಧಿಯನ್ನು ಕಡಿಮೆಗೊಳಿಸಿವೆ.

ಈ ಮೊದಲು ಕರೆ ಮಾಡಿದಾಗ 45 ಸೆಕೆಂಡ್‌ಗಳಷ್ಟು ಕಾಲ ಮೊಬೈಲ್ ರಿಂಗ್ ಆಗಿ ನಂತರ ಕಟ್ ಆಗುತ್ತಿತ್ತು. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ಬದಲಿಗೆ ಕೇವಲ 25 ಸೆಕೆಂಡ್‌ಗಳಷ್ಟೆ ರಿಂಗ್ ಆಗಿ ಕರೆ ಕಟ್‌ ಆಗುತ್ತದೆ.

ಕೇವಲ 25 ಸೆಕೆಂಡ್ ಅಷ್ಟೆ ರಿಂಗ್ ಆಗುತ್ತದೆ

ಕೇವಲ 25 ಸೆಕೆಂಡ್ ಅಷ್ಟೆ ರಿಂಗ್ ಆಗುತ್ತದೆ

ಏರ್‌ಟೆಲ್‌ನಿಂದ ಯಾವುದೇ ನೆಟ್‌ವರ್ಕ್‌ಗೆ ಹೋದ ಕರೆ ಇನ್ನು ಮುಂದೆ ಕೇವಲ 25 ಸೆಕೆಂಡ್‌ಗಳಷ್ಟು ಮಾತ್ರವೇ ರಿಂಗ್ ಆಗಲಿದೆ. 25 ಸೆಕೆಂಡ್‌ ಒಳಗಾಗಿ ಗ್ರಾಹಕ ಫೋನ್ ರಿಸೀವ್ ಮಾಡಲಿಲ್ಲವೆಂದರೆ ಕರೆ ಕಟ್ ಆಗಲಿದೆ.

ಜಿಯೋ ಸಹ ರಿಂಗರ್ ಅವಧಿ ಇಳಿಸಿತ್ತು

ಜಿಯೋ ಸಹ ರಿಂಗರ್ ಅವಧಿ ಇಳಿಸಿತ್ತು

ಜಿಯೋ ಸಹ ರಿಂಗರ್ ಅನ್ನು ಕೇವಲ 20 ಸೆಕೆಂಡ್‌ಗೆ ಇಳಿಸಿತ್ತು. ಆದರೆ ಏರ್‌ಟೆಲ್ ಮತ್ತು ಇತರ ನೆಟ್‌ವರ್ಕ್‌ಗಳು ಪ್ರತಿಭಟಿಸಿದ ನಂತರ ರಿಂಗರ್ ಅನ್ನು 25 ಸೆಕೆಂಡ್‌ಗೆ ಹೆಚ್ಚಿಸಿದೆ. ಕೆಲವು ಪ್ರದೇಶಗಳಲ್ಲಿ ರಿಂಗರ್ ಸಮಯ ಇನ್ನೂ ಸ್ವಲ್ಪ ಹೆಚ್ಚಿದೆ.

ಬೇರೆ ನೆಟ್‌ವರ್ಕ್‌ಗೆ ಕರೆ ಹೋದಾಗ ಹಣ ಹಂಚಿಕೆ

ಬೇರೆ ನೆಟ್‌ವರ್ಕ್‌ಗೆ ಕರೆ ಹೋದಾಗ ಹಣ ಹಂಚಿಕೆ

ಯಾವುದೇ ನೆಟ್‌ವರ್ಕ್‌ನಿಂದ ಬೇರೆ ನೆಟ್‌ವರ್ಕ್‌ಗೆ ಕರೆ ಹೋದಾಗ ಹಂಚಿಕೆ ಆಗಬೇಕಾದ ಹಣವನ್ನು ಇಂಟರ್‌ಕನೆಕ್ಟ್ ಯೂಸರ್ ಫೀ (ಐಯುಸಿ) ಎನ್ನಲಾಗುತ್ತದೆ. ಈ ವರೆಗೆ ಏರ್‌ಟೆಲ್‌ ಮತ್ತು ವೋಡಾ ಐಡಿಯಾಗಳು ಈ ಮಾದರಿಯಲ್ಲಿ ಹಣಗಳಿಸುತ್ತಿತ್ತು. ಆದರೆ ಜಿಯೋ ತನ್ನ ಕರೆ ಅವಧಿಯನ್ನು ಮೊಟಕುಗೊಳಿಸಿದ ಮೇಳೆ ಜಿಯೋ ಯಿಂದ ಬೇರೆ ನೆಟ್‌ವರ್ಕ್‌ಗೆ ಮಿಸ್ಡ್‌ಕಾಲ್‌ಗಳೇ ಹೆಚ್ಚಾಗಿ ಬೇರೆ ನೆಟ್‌ವರ್ಕ್‌ನಿಂದ ಜಿಯೋಗೆ ಕರೆ ಹೋಗುವುದು ಹೆಚ್ಚಾಗಿತ್ತು.

ಜಿಯೋದ ಬುದ್ಧಿವಂತಿಕೆ ಅರ್ಥಮಾಡಿಕೊಂಡ ಏರ್‌ಟೆಲ್

ಜಿಯೋದ ಬುದ್ಧಿವಂತಿಕೆ ಅರ್ಥಮಾಡಿಕೊಂಡ ಏರ್‌ಟೆಲ್

ಜಿಯೋದ ಬುದ್ಧಿವಂತಿಕೆ ಅರಿತ ಏರ್‌ಟೆಲ್‌ ಮತ್ತು ಇತರ ನೆಟ್‌ವರ್ಕ್‌ ಸಂಸ್ಥೆಗಳು ಕೂಡಲೇ ತಮ್ಮ ರಿಂಗರ್‌ ಅವಧಿಯನ್ನೂ ಸಹ ಕಡಿಮೆ ಮಾಡಿದೆ. ಆದರೆ ಇದರಿಂದ ಗ್ರಾಹಕರಿಗೆ ತೊಂದರೆ ಆಗಲಿದೆ. ಕೆಲವೇ ಸೆಕೆಂಡ್‌ಗಳಲ್ಲಿ ಕರೆ ಕಟ್ ಆಗಲಿದ್ದು, ಮತ್ತೆ ಕರೆ ಮಾಡಿ ಮಾತನಾಡಲು ಸಮಯ ವ್ಯರ್ಥವಾಗಲಿದೆ.

English summary
Airtel, Vodafone Idea cut their ringer time to 25 seconds to competition with jio network. Joi cuts its ringer time to 20 seconds then it raises it to 25 seconds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X