ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶೀಯ ವಿಮಾನಯಾನ: ಶೇ.65 ಆಸನ ಸಾಮರ್ಥ್ಯದೊಂದಿಗೆ ಅವಕಾಶ

|
Google Oneindia Kannada News

ನವದೆಹಲಿ, ಜುಲೈ 06: ದೇಶೀಯ ವಿಮಾನಯಾನಕ್ಕೆ ಶೇ.65ರಷ್ಟು ಆಸನ ಸಾಮರ್ಥ್ಯದೊಂದಿಗೆ ನಡೆಸಲು ಅವಕಾಶ ನೀಡಲಾಗಿದೆ.

ಸಚಿವಾಲಯದ ಮೇ 28ರ ಆದೇಶದ ಪ್ರಕಾರ ಜೂನ್ 1ರಿಂದ ವಿಮಾನಯಾನ ಸಂಸ್ಥೆಗಳು ತಮ್ಮ ಪೂರ್ವ-ಕೋವಿಡ್ ದೇಶೀಯ ವಿಮಾನಗಳಲ್ಲಿ ಕೇವಲ 50ರಷ್ಟು ಆಸನ ವ್ಯವಸ್ಥೆಯನ್ನು ಮಾತ್ರ ಬಳಸಬೇಕಿತ್ತು.

ವಿಮಾನಯಾನ ಸಂಸ್ಥೆಗಳು ದೇಶೀಯ ವಿಮಾನಯಾನವನ್ನು ಈ ಹಿಂದಿನ ಕೋವಿಡ್ ಮಾರ್ಗಸೂಚಿ ಶೇಕಡ 50ರಷ್ಟು ಬದಲಿಗೆ ಗರಿಷ್ಠ 65ರಷ್ಟರವರೆಗೆ ನಿರ್ವಹಿಸಬಹುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸೋಮವಾರ ತಿಳಿಸಿದೆ.

Flight

ಎರಡು ತಿಂಗಳ ವಿರಾಮದ ನಂತರ ಸರ್ಕಾರವು ಕಳೆದ ವರ್ಷ ಮೇ 25ರಂದು ನಿಗದಿತ ದೇಶೀಯ ವಿಮಾನಯಾನವನ್ನು ಪುನರಾರಂಭಿಸುವುದಕ್ಕೆ ಅವಕಾಶ ನೀಡಿತ್ತು.

ದೇಶಾದ್ಯಂತ ಸಕ್ರಿಯ ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಾದ ಹಿನ್ನೆಲೆಯಲ್ಲಿ ಜೂನ್ 1ಕ್ಕೂ ಮುನ್ನ 80ರಷ್ಟಿದ್ದ ಆಸನ ವ್ಯವಸ್ಥೆಯನ್ನು ಮೇ 28ರಂದು ಶೇಕಡಾ 80ರಿಂದ 50ಕ್ಕೆ ಇಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.

ಇದು ಹೊಸ ಆದೇಶವನ್ನು ಹೊರಡಿಸಿದ್ದು, ಅದರಲ್ಲಿ ಮೇ 28 ರ ಆದೇಶವನ್ನು "50 ಶೇಕಡಾ ಸಾಮರ್ಥ್ಯವನ್ನು ಶೇ.65 ಸಾಮರ್ಥ್ಯ ಹೆಚ್ಚಿಸಲಾಗಿದೆ ಎಂದು ತಿಳಿಸಿದೆ. ಈ ಮಾರ್ಗಸೂಚಿ ಜುಲೈ 31ರವರೆಗೆ ಅನ್ವಯಿಸುತ್ತದೆ.

ಅಂತರಾಷ್ಟ್ರೀಯ ವಿಮಾನಯಾನದ ಮೇಲಿನ ನಿರ್ಬಂಧ ಜುಲೈ 31 ರವರೆಗೆ ವಿಸ್ತರಣೆಅಂತರಾಷ್ಟ್ರೀಯ ವಿಮಾನಯಾನದ ಮೇಲಿನ ನಿರ್ಬಂಧ ಜುಲೈ 31 ರವರೆಗೆ ವಿಸ್ತರಣೆ

ನಾಗರಿಕ ವಿಮಾನಯಾನ ನಿರ್ದೇಶನಾಲಯ ​​(ಡಿಜಿಸಿಎ) ಬುಧವಾರ ದೇಶಕ್ಕೆ ಬರುವ ಹಾಗೂ ಹೊರ ಹೋಗುವ ವಿಮಾನಯಾನಗಳ ನಿಷೇಧವನ್ನು ಜುಲೈ 31 ರವರೆಗೆ ವಿಸ್ತರಿಸಿದೆ.

2020 ರ ಮಾರ್ಚ್‌ನಿಂದ ಸರಕು / ವಾಪಸಾತಿ / ಪರಿಹಾರ ಸೇವೆಗಳನ್ನು ಹೊರತುಪಡಿಸಿ ಭಾರತಕ್ಕೆ ಬರುವ ನಿಗದಿತ ಅಂತರರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಪ್ರಾಧಿಕಾರವು 2021 ರ ಜುಲೈ 31 ರಂದು ಭಾರತದಿಂದ ಹೊರ ಹೋಗುವ ಹಾಗೂ ಭಾರತಕ್ಕೆ ಬರುವ ನಿಗದಿತ ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗಳಿಗೆ ಸಂಬಂಧಿಸಿದಂತೆ ವಿಸ್ತರಿಸರಣೆಯನ್ನು ಸುತ್ತೋಲೆಯ ಮೂಲಕ ತಿಳಿಸಿದೆ.

English summary
Airlines can now operate a maximum of 65 per cent of their pre-Covid domestic flights instead of the 50 per cent allowed till date, the civil aviation ministry said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X