ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಣಿ ಸಭೆ ನಡೆಸಿದ ಮೋದಿ, ಮೂರು ಸೇನೆಗಳಿಗೆ ಒಂದೇ ಸಂದೇಶ

|
Google Oneindia Kannada News

Recommended Video

ಮೋದಿ, ಮೂರು ಸೇನೆಗಳಿಗೆ ನೀಡಿದ್ದು ಒಂದೇ ಸಂದೇಶ..!

ನವದೆಹಲಿ, ಫೆಬ್ರವರಿ 27 : ಪುಲ್ವಮಾ ದಾಳಿ, ಭಾರತದ ವಾಯುಪಡೆಯ ಏರ್ ಸ್ಟ್ರೈಕ್, ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ. ಹಲವಾರು ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸರಣಿ ಸಭೆಗಳನ್ನು ನಡೆಸಿದರು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿರ್ ಧೋವಲ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಗುಪ್ತಚರ ಇಲಾಖೆ ಅಧಿಕಾರಿಗಳು, ಮೂರು ಸೇನೆಗಳ ಮುಖ್ಯಸ್ಥರ ಜೊತೆ ನರೇಂದ್ರ ಮೋದಿ ಸರಣಿ ಸಭೆಗಳನ್ನು ಮಾಡಿದರು.

ಪಾಕ್ ವಶದಲ್ಲಿ ಅಭಿನಂದನ್ ಸುರಕ್ಷಿತವಾಗಿದ್ದಾರೆ, ನಿರಾತಂಕವಾಗಿದ್ದಾರೆಪಾಕ್ ವಶದಲ್ಲಿ ಅಭಿನಂದನ್ ಸುರಕ್ಷಿತವಾಗಿದ್ದಾರೆ, ನಿರಾತಂಕವಾಗಿದ್ದಾರೆ

ಎಲ್ಲಾ ಸಭೆಗಳ ತೀರ್ಮಾನ ಒಂದೇ ಆಗಿತ್ತು. ಭೂ, ವಾಯು ಮತ್ತು ನೌಕಾಪಡೆಗೆ ಸಂಪೂರ್ಣ ಸ್ವತಂತ್ರ ನೀಡಲಾಗಿದೆ. ಮುಂದಿನ ನಡೆಗಳ ಬಗ್ಗೆ ಅವರು ತೀರ್ಮಾನವನ್ನು ಕೈಗೊಳ್ಳಬಹುದು. ಸರಿಯಾದ ಸಮಯದಲ್ಲಿ ತಕ್ಕ ಉತ್ತರ ನೀಡಬೇಕು.

ಪೈಲೆಟ್ ನಾಪತ್ತೆ ಬಗ್ಗೆ ಪಾಕಿಸ್ತಾನ ನೀಡಿದ ಉತ್ತರವೇನು?ಪೈಲೆಟ್ ನಾಪತ್ತೆ ಬಗ್ಗೆ ಪಾಕಿಸ್ತಾನ ನೀಡಿದ ಉತ್ತರವೇನು?

Narendra Modi

ಬುಧವಾರ ಬೆಳಗ್ಗೆಯಿಂದ ಹಲವಾರು ಬೆಳವಣಿಗೆಗಳು ನಡೆದವು. ಪಾಕಿಸ್ತಾನದ ವಿಮಾನಗಳು ಭಾರತವನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲು ಮುಂದಾಗಿದ್ದವು. ಪಾಕಿಸ್ತಾನದ ವಿಮಾನಗಳನ್ನು ಹಿಮ್ಮೆಟ್ಟಿಸಲು ಶ್ರೀನಗರದ ವಾಯುನೆಲೆಯಿಂದ 6 ಮಿಗ್ 21 ವಿಮಾನಗಳನ್ನು ಕಳುಹಿಸಲಾಗಿತ್ತು.

ಒಬ್ಬ ಪೈಲೆಟ್ ನಮ್ಮ ವಶದಲ್ಲಿ ಎಂದು ಹೇಳಿದ ಪಾಕಿಸ್ತಾನಒಬ್ಬ ಪೈಲೆಟ್ ನಮ್ಮ ವಶದಲ್ಲಿ ಎಂದು ಹೇಳಿದ ಪಾಕಿಸ್ತಾನ

ಆದರೆ, 5 ವಿಮಾನಗಳು ಮಾತ್ರ ವಾಪಸ್ ಆದವು. ಒಂದು ವಿಮಾನ ಕಳೆದುಕೊಳ್ಳಲಾಯಿತು. ಭಾರತದ ವಾಯುಪಡೆಯ ಪೈಲೆಟ್‌ ಅನ್ನು ಪಾಕಿಸ್ತಾನ ವಶಕ್ಕೆ ಪಡೆಯಿತು. ಪಾಕಿಸ್ತಾನದ ಎಫ್ -16 ವಿಮಾನವನ್ನು ಭಾರತ ಹೊಡೆದುರುಳಿಸಿದೆ.

English summary
Prime Minister Narendra Modi held day-long back-to-back meetings with National Security Advisor Ajit Doval, Defence Minister Nirmala Sitharaman. The key takeaways from the meetings were: "India will not buckle under pressure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X