ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂತ್ರಾಂಶದಲ್ಲಿ ದೋಷ, ಏರ್ ಇಂಡಿಯಾ ವಿಮಾನ ವಿಳಂಬ

|
Google Oneindia Kannada News

ನವದೆಹಲಿ, ಏಪ್ರಿಲ್ 28: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ವಿಮಾನಯಾನ ವ್ಯವಸ್ಥೆಯಲ್ಲಿ ಶನಿವಾರದಂದು ಐದು ಗಂಟೆಗಳಿಗೂ ಅಧಿಕ ಕಾಲ ವಿಳಂಬವಾಗಿತ್ತು. ಚೆಕ್ ಇನ್ ತಂತ್ರಾಂಶದ ದೋಷದಿಂದಾಗಿ ಅವ್ಯವಸ್ಥೆ ಉಂಟಾಗಿತ್ತು. ಇದರ ಪರಿಣಾಮ ಭಾನುವಾರದಂದು ಮುಂದುವರೆದಿದೆ.

ಇಂದು 137 ವಿಮಾನಗಳ ಹಾರಾಟ ತಡವಾಗಲಿದೆ.ಈ ವಿಮಾನಗಳು 197 ನಿಮಿಷ ತಡವಾಗಿ ಹಾರಾಟ ನಡೆಸಲಿವೆ ಎಂದು ಏರ್​ಲೈನ್ಸ್​ ಸಂಸ್ಥೆಯ ವಕ್ತಾರ ತಿಳಿಸಿದ್ದಾರೆ.

ಸರ್ವರ್ ಸಮಸ್ಯೆ: ಜಗತ್ತಿನಾದ್ಯಂತ ಏರ್ ಇಂಡಿಯಾ ವಿಮಾನ 5 ಗಂಟೆ ವಿಳಂಬ ಸರ್ವರ್ ಸಮಸ್ಯೆ: ಜಗತ್ತಿನಾದ್ಯಂತ ಏರ್ ಇಂಡಿಯಾ ವಿಮಾನ 5 ಗಂಟೆ ವಿಳಂಬ

ಶನಿವಾರದಂದು ಎಲ್ಲೆಡೆ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪರದಾಡುವಂತಾಗಿತ್ತು. ಪ್ರಯಾಣಿಕರ ಸರಕು ಮತ್ತು ರಿಸರ್ವೇಷನ್​ ಅನ್ನು ತಪಾಸಣೆ ಮಾಡುವ ಪ್ಯಾಸೆಂಜರ್ ಸರ್ವಿಸ್ ಸಿಸ್ಟಂ (ಪಿಎಸ್ಎಸ್​) ಸಾಫ್ಟ್​ವೇರ್​ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು ಇದಕ್ಕೆಲ್ಲ ಕಾರಣವಾಗಿತ್ತು.

Air India software shutdown effect: 137 flights to be delayed

ಶನಿವಾರದಂದು ಪಿಎಸ್ಎಸ್ ಬೆಳಗ್ಗೆ 3.30 ರಿಂದ 8.30 ರ ಅವಧಿಯಲ್ಲಿ ಕಾರ್ಯ ನಿರ್ವಹಿಸದ ಕಾರಣ, ಸುಮಾರು 149 ವಿಮಾನಗಳು ನಿಗದಿತ ಸಮಯದಲ್ಲಿ ಹಾರಾಟ ನಡೆಸಲು ಸಾಧ್ಯವಾಗಿರಲಿಲ್ಲ.

ರಿಪೇರಿ ವೇಳೆ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ: ವೈರಲ್ ವಿಡಿಯೋರಿಪೇರಿ ವೇಳೆ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ: ವೈರಲ್ ವಿಡಿಯೋ

ದೆಹಲಿ-ಮುಂಬೈ ಸೆಕ್ಟರ್ ಇನ್ನೊಂದು ಕಡೆ ಮುಂಬೈ-ಬೆಂಗಳೂರು ಸೆಕ್ಟರ್, ಬೆಂಗಳೂರು -ಚೆನ್ನೈ ಸೆಕ್ಟರ್ ಹೀಗೆ ಒಂದು ಸೆಕ್ಟರ್ ನಲ್ಲಿ ವಿಮಾನ ವಿಳಂಬವಾದೆ, ಉಳಿದ ಸೆಕ್ಟರ್ ಗಳಿಗೂ ತೊಂದರೆಯಾಗಲಿದೆ. ಏರ್ ಇಂಡಿಯಾ, ಅಲೈಯನ್ಸ್ ಏರ್, ಏರ್ ಇಂಡಿಯಾ ಎಕ್ಸ್ ಪ್ರೆಸ್ ಪ್ರತಿ ದಿನದ ಸರಾಸರಿ ವಿಮಾನಯಾನ ಸಂಖ್ಯೆ 674 ದಾಟುತ್ತದೆ.(ಪಿಟಿಐ)

English summary
The five-hour shutdown of Air India's check-in software, which occurred Saturday morning, is still causing its ripple effect as the airline said 137 flights will be running with a delay on Sunday. The average duration of delay -- on these 137 flights of Sunday -- would be of 197 minutes, the airline's spokesperson said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X