ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗ ನಿರಾಕರಿಸಿದ್ದಕ್ಕೆ ತೃತೀಯ ಲಿಂಗಿಯಿಂದ ದಯಾ ಮರಣಕ್ಕೆ ಮನವಿ

|
Google Oneindia Kannada News

ತೃತೀಯಲಿಂಗಿಯೊಬ್ಬರು ರಾಷ್ಟ್ರಪತಿಗಳಿಗೆ ದಯಾ ಮರಣಕ್ಕಾಗಿ ಪತ್ರ ಬರೆದಿದ್ದಾರೆ. ಅವರ ಹೆಸರು ಶಾನವಿ. ಅವರಿಗೆ ಉದ್ಯೋಗ ನೀಡಲು ಏರ್ ಇಂಡಿಯಾ ನಿರಾಕರಿಸಿದ್ದರಿಂದ ಮನ ನೊಂದ ಆವರು ದಯಾ ಮರಣಕ್ಕಾಗಿ ಕೋರಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಗೆ ಪತ್ರವನ್ನು ಬರೆದಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಂಗಳೂರು : ರೇಡಿಯೊ ಜಾಕಿ ಆದ ಮಂಗಳಮುಖಿಮಂಗಳೂರು : ರೇಡಿಯೊ ಜಾಕಿ ಆದ ಮಂಗಳಮುಖಿ

"ಅವರು ಎರಡೇ ವಿಭಾಗ ಇದೆ ಎನ್ನುತ್ತಾರೆ. ತೃತೀಯ- ಮಹಿಳೆ ಎಂಬ ಕ್ಯಾಟಗರಿ ನಮಗಿಲ್ಲ. ಆದರೆ ತೆರಿಗೆಯಲ್ಲಿ ನಮಗೆ ಯಾವುದಾದರೂ ವಿನಾಯಿತಿ ಇದೆಯಾ? ನಾವು ಸಹ ಪಾವತಿಸಲೇಬೇಕು, ಅಲ್ಲವಾ? ನನಗೆ ಶೈಕ್ಷಣಿಕ ಅರ್ಹತೆ ಇದೆ. ಅನುಭವ ಇದೆ. ಇನ್ನು ತಕರಾರು ಇರುವುದು ಲಿಂಗದ ವಿಚಾರವಾಗಿ" ಎಂದು ಅವರು ಹೇಳಿದ್ದಾರೆ.

Air India refused job : Transgender writes letter to President for mercy-killing

ಆ ನಂತರ ನಾನು ಯಾವುದೇ ಏರ್ ಲೈನ್ಸ್ ನಲ್ಲಿ ಕೆಲಸಕ್ಕಾಗಿ ಪ್ರಯತ್ನಿಸಿಲ್ಲ. ಏಕೆಂದರೆ ಸರಕಾರಿ ಏರ್ ಲೈನ್ಸ್ ನಲ್ಲೇ ನಿಮಗೆ ಕ್ಯಾಟಗರಿ ಇಲ್ಲ ಅಂತಾರೆ. ಇನ್ನು ಖಾಸಗಿ ಏರ್ ಲೈನ್ಸ್ ನವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ನನ್ನ ಬದುಕೋ ಅಥವಾ ಸಾವೋ ರಾಷ್ಟ್ರಪತಿಗಳ ಕೈಯಲ್ಲಿದೆ ಎಂದು ಏರ್ ಇಂಡಿಯಾದಲ್ಲಿ ನೌಕರಿ ನೀಡಲು ನಿರಾಕರಿಸಿದ್ದಕ್ಕೆ ದಯಾಮರಣಕ್ಕಾಗಿ ಶಾನವಿ ಮನವಿ ಮಾಡಿದ್ದಾರೆ.

English summary
Shanavi, transgender who alleges Air India refused job due to her gender, after that she writes letter to president for mercy-killing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X