ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಏರ್ ಏಷ್ಯಾ ಸ್ವಾಧೀನಕ್ಕೆ ಮುಂದಾದ ಏರ್ ಇಂಡಿಯಾ

|
Google Oneindia Kannada News

ನವದೆಹಲಿ, ಏಪ್ರಿಲ್ 27; ಟಾಟಾ ಒಡೆತನದ ಏರ್ ಇಂಡಿಯಾ ಏರ್‌ಏಷ್ಯಾ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳಲು ಚಿಂತನೆ ನಡೆಸಿದೆ. ಮಲೇಷ್ಯಾ ಮೂಲಕ ಏರ್‌ಏಷ್ಯಾ ಸಮೂಹ 16.33ರಷ್ಟು ಪಾಲನ್ನು ಹೊಂದಿದೆ.

ಕಡಿಮೆ ದರದಲ್ಲಿ ವಿಮಾನ ಸೇವೆ ನೀಡುವ ಉದ್ದೇಶದಿಂದ 2014ರಲ್ಲಿ ಆರಂಭವಾದ ಏರ್‌ಏಷ್ಯಾ ಇಂಡಿಯಾ ಕಾರ್ಗೋ, ಚಾರ್ಟರ್‌ ವಿಮಾನ ಸೇವೆಗಳನ್ನು ಒಳಗೊಂಡಿದೆ.

Sri Lanka Crisis; ವಿಮಾನ ಸಂಚಾರ ಕಡಿಮೆ ಮಾಡಿದ ಏರ್ ಇಂಡಿಯಾ Sri Lanka Crisis; ವಿಮಾನ ಸಂಚಾರ ಕಡಿಮೆ ಮಾಡಿದ ಏರ್ ಇಂಡಿಯಾ

ಆದರೆ ಇದು ಅಂತರಾಷ್ಟ್ರೀಯ ವಿಮಾನ ಸೇವೆಗಳನ್ನು ಹೊಂದಿಲ್ಲ. ಏರ್‌ಏಷ್ಯಾ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಟಾಟಾ ಒಡೆತನದ ಏರ್ ಇಂಡಿಯಾ ಈ ಕುರಿತು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ)ಗೆ ಮನವಿಯನ್ನು ಸಲ್ಲಿಸಿದೆ.

Breaking: ಟಾಟಾ ಗ್ರೂಪ್‌ಗೆ ಏರ್ ಇಂಡಿಯಾ ಅಧಿಕೃತ ಹಸ್ತಾಂತರ Breaking: ಟಾಟಾ ಗ್ರೂಪ್‌ಗೆ ಏರ್ ಇಂಡಿಯಾ ಅಧಿಕೃತ ಹಸ್ತಾಂತರ

Air India Proposes To Acquire AirAsia India

ಕಳೆದ ವರ್ಷ ಏರ್ ಇಂಡಿಯಾ ಲಿಮಿಟೆಡ್ (ಎಐಎಲ್), ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅನ್ನು ಟಾಟಾ ಸನ್ಸ್ ಪ್ರವೇಟ್‌ ಲಿಮಿಟೆಡ್‌ನ ಅಂಗ ಸಂಸ್ಥೆ ತಾಲೇಸ್ ಪ್ರವೇಟ್‌ ಲಿಮಿಟೆಡ್ ಸ್ವಾಧೀನ ಮಾಡಿಕೊಂಡಿತ್ತು.

ವ್ಯಕ್ತಿಚಿತ್ರ: ಏರ್ ಇಂಡಿಯಾ ನೂತನ ಅಧ್ಯಕ್ಷ ವಿಕ್ರಮ್ ದೇವ್ ದತ್ ವ್ಯಕ್ತಿಚಿತ್ರ: ಏರ್ ಇಂಡಿಯಾ ನೂತನ ಅಧ್ಯಕ್ಷ ವಿಕ್ರಮ್ ದೇವ್ ದತ್

ಟಾಟಾ ಸಮೂಹ ಈ ವರ್ಷದ ಜನವರಿ 27ರಂದು ಏರ್ ಇಂಡಿಯಾವನ್ನು ತನ್ನ ವಶಕ್ಕೆ ಪಡೆದಿತ್ತು. ಈಗ ಸಮೂಹ ನಾಲ್ಕು ವಿಮಾನಯಾನ ಸಂಸ್ಥೆಗಳನ್ನು ಒಂದೇ ಸೂರಿನಲ್ಲಿ ತರಲು ಬಯಸಿದೆ.

ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ವಿಸ್ತಾರ, ಏರ್‌ಏಷ್ಯಾ ಇಂಡಿಯಾವನ್ನು ಒಂದೇ ಸೂರಿನಡಿ ತರುವ ಪ್ರಯತ್ನವನ್ನು ಆರಂಭಿಸಲಾಗಿದೆ. ಇದಕ್ಕಾಗಿ ಒಂದೇ ಕಚೇರಿ ನಿರ್ಮಾಣವಾಗಲಿದ್ದು, ಗುರುಗ್ರಾಮದಲ್ಲಿ ಇದಕ್ಕಾಗಿ ಸ್ಥಳ ಸಹ ಗುರುತಿಸಲಾಗಿದೆ.

English summary
Tata owned Air India proposed to acquire AirAsia India. AirAsia has 16.33 per cent of the share.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X