• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಯಮ ಉಲ್ಲಂಘನೆ: ಏರ್ ಇಂಡಿಯಾ ವಿಮಾನದ ಮೇಲೆ ಹಾಂಕಾಂಗ್ ನಿರ್ಬಂಧ

|
Google Oneindia Kannada News

ನವದೆಹಲಿ, ಅಕ್ಟೋಬರ್ 28: ಮುಂಬೈನಿಂದ ಹಾಂಕಾಂಗ್‌ಗೆ ತೆರಳುವ ಎಲ್ಲ ಏರ್ ಇಂಡಿಯಾ ವಿಮಾನಗಳನ್ನು ನವೆಂಬರ್ 10ರವರೆಗೂ ನಿರ್ಬಂಧಿಸಲಾಗಿದೆ. ವಾರದ ಆರಂಭದಲ್ಲಿ ವಿಮಾನದಲ್ಲಿ ಪ್ರಯಾಣಿಸಿದ ಕೆಲವು ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಕೊರೊನಾ ವೈರಸ್ ಸೋಂಕು ಹರಡಿದ ನಂತರ ವಿಮಾನ ಸಂಚಾರ ಪುನರಾರಂಭವಾದ ಬಳಿಕ ಏರ್ ಇಂಡಿಯಾ ವಿಮಾನಗಳ ಹಾರಾಟದ ಮೇಲೆ ಹಾಂಕಾಂಗ್ ನಿಷೇಧ ಹೇರುತ್ತಿರುವುದು ಇದು ನಾಲ್ಕನೆಯ ಬಾರಿ. ಇದಕ್ಕೂ ಮುನ್ನ ದೆಹಲಿ-ಹಾಂಕಾಂಗ್ ವಿಮಾನಗಳನ್ನು ಸೆ.20 ರಿಂದ ಅ.3ರವರೆಗೆ, ಆಗಸ್ಟ್ 18ರಿಂದ ಆಗಸ್ಟ್ 31ರಿಂದ ಮತ್ತು ಅ. 17ರಿಂದ ಅ. 30ರವರೆಗೆ ಹಾರಾಟವನ್ನು ನಿರ್ಬಂಧಿಸಲಾಗಿತ್ತು.

ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸಂಚಾರಕ್ಕಿಲ್ಲ ನಿರ್ಬಂಧಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸಂಚಾರಕ್ಕಿಲ್ಲ ನಿರ್ಬಂಧ

ಹಾಂಕಾಂಗ್ ಸರ್ಕಾರದ ನಿಯಮಾವಳಿಗಳ ಪ್ರಕಾರ ಪ್ರಯಾಣಕ್ಕೂ 72 ಗಂಟೆಗಳ ಒಳಗೆ ಕೋವಿಡ್ ನೆಗೆಟಿವ್ ಪರೀಕ್ಷೆ ವರದಿ ತಂದಿದ್ದರೆ ಮಾತ್ರವೇ ಪ್ರಯಾಣಿಕರು ಹಾಂಕಾಂಗ್‌ಗೆ ಪ್ರಯಾಣಿಸಬಹುದಾಗಿದೆ. ಹಾಂಕಾಂಗ್ ವಿಮಾನ ನಿಲ್ದಾಣದಲ್ಲಿ ಇಳಿಯುವ ಅಂತಾರಾಷ್ಟ್ರೀಯ ಪ್ರಯಾಣಿಕರು ಕೋವಿಡ್ ಪರೀಕ್ಷೆಗೆ ಒಳಗಾಗಬಹುದು.

ಮುಂಬೈನಿಂದ ಹಾಂಕಾಂಗ್‌ಗೆ ಏರ್ ಇಂಡಿಯಾ ವಿಮಾನದಲ್ಲಿ ಈ ವಾರದಲ್ಲಿ ಪ್ರಯಾಣಿಸಿದ ಕೆಲವು ಮಂದಿಯಲ್ಲಿ ಹಾಂಕಾಂಗ್ ವಿಮಾನ ನಿಲ್ದಾಣದಲ್ಲಿ ನಡೆಸಿದ ಕೋವಿಡ್ ತಪಾಸಣೆಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಹೀಗಾಗಿ ಹಾಂಕಾಂಗ್ ಸರ್ಕಾರದ ನಿಯಮದಂತೆ ಏರ್ ಇಂಡಿಯಾ ಸಂಚಾರದ ಮೇಲೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
Hong Kong has barred Mumbai-Hong Kong Air India flights till Nov 10 after a few passengers on its flight earlier this week tested positive for Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X