ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನಯಾನಕ್ಕೂ ಮುನ್ನ weight ಚೆಕ್‌: ಏರ್‌ಇಂಡಿಯಾ ಸಿಬ್ಬಂದಿಗಳಿಂದ ಆಕ್ಷೇಪ

|
Google Oneindia Kannada News

ನವದೆಹಲಿ, ಜನವರಿ 24: ಏರ್ ಇಂಡಿಯಾದ ಕ್ಯಾಬಿನ್ ಕ್ರೂ ಯೂನಿಯನ್ ಹೊಸ ಕಂಪನಿಯ ಸುತ್ತೋಲೆಯಲ್ಲಿರುವ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ/Body mass index) ಮತ್ತು ವಿಮಾನಗಳನ್ನು ಪ್ರಾರಂಭಿಸುವ ಮೊದಲು ಕ್ಯಾಬಿನ್ ಸಿಬ್ಬಂದಿಯ ತೂಕ ತಪಾಸಣೆಯನ್ನು ಕಡ್ಡಾಯಗೊಳಿಸುವುದನ್ನು ವಿರೋಧಿಸಿದೆ. ಆಕ್ಷೇಪಣೆಯನ್ನು ವ್ಯಕ್ತಪಡಿಸಿ ಏರ್‌ಲೈನ್‌ನ ಇನ್‌ಫ್ಲೈಟ್ ಸರ್ವೀಸಸ್ ಡಿಪಾರ್ಟ್‌ಮೆಂಟ್ (ಐಎಸ್‌ಡಿ) ಕಾರ್ಯನಿರ್ವಾಹಕ ನಿರ್ದೇಶಕರಿಗೆ ಲಿಖಿತ ರೂಪದಲ್ಲಿ ಆಕ್ಷೇಪಣಾ ಪತ್ರ ನೀಡಲಾಗಿದೆ.

ಜನವರಿ 20 ರಂದು ಕಂಪನಿಗೆ ಈ ಬಗ್ಗೆ ಅಖಿಲ ಭಾರತ ಕ್ಯಾಬಿನ್ ಕ್ರ್ಯೂ ಅಸೋಸಿಯೇಷನ್ ​​(ಎಐಸಿಸಿಎ) ಗೆ ಮಾಹಿತಿ ನೀಡಿದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರತಿ ಕ್ಯಾಬಿನ್ ಸಿಬ್ಬಂದಿ ಸದಸ್ಯರು ಈಗ ತ್ರೈಮಾಸಿಕ ಆಧಾರದ ಮೇಲೆ ಬಿಎಂಐ ಮತ್ತು ತೂಕದ ತಪಾಸಣೆಗೆ ಒಳಪಡುತ್ತಾರೆ ಎಂದು ತಿಳಿಸಿದ್ದಾರೆ. "ಸಿಬ್ಬಂದಿಗಳು ವಿಮಾನ ಅಥವಾ ಸ್ಟ್ಯಾಂಡ್‌ಬೈ ಡ್ಯೂಟಿಗಾಗಿ ತೆರಳುವ ವೇಳೆ ಕ್ಯಾಬಿನ್ ಸಿಬ್ಬಂದಿಯ ಬಿಎಂಐ ನಿರ್ವಹಣೆಯ (ದೇಹದ ತೂಕ, ರೂಪ) ಬಗ್ಗೆ ಅವಲೋಕನ ಮಾಡಲು ಗ್ರೂಮಿಂಗ್ ಅಸೋಸಿಯೇಟ್‌ಗಳಿಗೆ ನಿಯೋಜಿಸಲಾಗಿದೆ. ಈ ಅವಲೋಕನಗಳನ್ನು ಅನುಸರಿಸಬೇಕು ಮತ್ತು ಕೆಳಗೆ ಸಹಿ ಮಾಡಿದವರ ಕಚೇರಿಗೆ ಕಳುಹಿಸಬೇಕು," ಎಂದು ಸುತ್ತೋಲೆಯಲ್ಲಿ ಉಲ್ಲೇಖ ಮಾಡಲಾಗಿದೆ.

 ಈ ಮಾರ್ಗಗಳಲ್ಲಿ ಯುಎಸ್‌ಗೆ ಏರ್‌ಇಂಡಿಯಾ ವಿಮಾನಯಾನ ಸ್ಥಗಿತ ಈ ಮಾರ್ಗಗಳಲ್ಲಿ ಯುಎಸ್‌ಗೆ ಏರ್‌ಇಂಡಿಯಾ ವಿಮಾನಯಾನ ಸ್ಥಗಿತ

"ಏಕರೂಪದ ಮಾನದಂಡಗಳು ಮತ್ತು ನಿಯಮಗಳ ಪ್ರಕಾರ ಚೆನ್ನಾಗಿ ಬಟ್ಟೆ ಧರಿಸಿರುವ ಹಾಗೂ ಚೆನ್ನಾಗಿ ಶೃಂಗಾರ, ಅಲಂಕಾರ ಮಾಡಿಕೊಂಡಿರುವ ಕ್ಯಾಬಿನ್ ಸಿಬ್ಬಂದಿಯು ವೃತ್ತಿಪರ ಚಿತ್ರಣವನ್ನು ಪ್ರಸ್ತುತಪಡಿಸುತ್ತಾರೆ," ಎಂದು ಕೂಡಾ ಈ ಸುತ್ತೋಲೆಯು ಹೊಂದಿದೆ. ಸಾಮಾನ್ಯವಾಗಿ ವಿಮಾನದಲ್ಲಿ ಕಾರ್ಯ ನಿರ್ವಹಣೆ ಮಾಡುವ ಸಿಬ್ಬಂದಿಗಳು ಅಲಂಕಾರ ಮಾಡಿಕೊಳ್ಳುವುದು ಕಡ್ಡಾಯವೆಂಬಂತೆ ಆಗಿದೆ.

Air India Flight Attendants Object to New Pre-flight ‘BMI, Weight Check’ Rule

ಗ್ರೂಮಿಂಗ್ ಅಸೋಸಿಯೇಟ್‌ಗಳ ನಿಯೋಜನೆಗೆ ಆಕ್ಷೇಪ

ಕ್ಯಾಬಿನ್ ಸಿಬ್ಬಂದಿಯ ಬಿಎಂಐ ನಿರ್ವಹಣೆಯ (ದೇಹದ ತೂಕ, ರೂಪ) ಬಗ್ಗೆ ಅವಲೋಕನ ಮಾಡಲು ಗ್ರೂಮಿಂಗ್ ಅಸೋಸಿಯೇಟ್‌ಗಳಿಗೆ ನಿಯೋಜನೆ ಮಾಡುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ) ಹೊರಡಿಸಿದ ನಾಗರಿಕ ವಿಮಾನಯಾನ ಅಗತ್ಯತೆಗಳ (ಸಿಎಆರ್) ಪ್ರಕಾರ ಕ್ರಮವಾಗಿ 2008 ಮತ್ತು 1998 ರಿಂದ ಬಿಎಂಐ ಮತ್ತು ತೂಕ ತಪಾಸಣೆಗೆ ಒಳಗಾಗಿದ್ದೇವೆ ಎಂದು ಏರ್ ಇಂಡಿಯಾದ ಕ್ಯಾಬಿನ್ ಸಿಬ್ಬಂದಿ ಒಕ್ಕೂಟದ ಸದಸ್ಯರು ಹೇಳುತ್ತಾರೆ. ಆದರೂ ಈ ತಪಾಸಣೆಗಳನ್ನು ವೈದ್ಯಕೀಯ ವೃತ್ತಿಪರರು ಅಥವಾ ವೈದ್ಯರು ಮಾತ್ರ ನಡೆಸುತ್ತಾರೆ.

ಎಚ್.ವಿಶ್ವನಾಥ್ ಪುತ್ರ ಅಮಿತ್ ಸ್ಥಾನಕ್ಕೂ ಬಂತು ಕುತ್ತು! ಎಚ್.ವಿಶ್ವನಾಥ್ ಪುತ್ರ ಅಮಿತ್ ಸ್ಥಾನಕ್ಕೂ ಬಂತು ಕುತ್ತು!

ಎಐಸಿಸಿಎ ಪ್ರಧಾನ ಕಾರ್ಯದರ್ಶಿ ಸಂಜಯ್ ಲಾಜರ್ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಬರೆದ ಪತ್ರದಲ್ಲಿ, "ಆರಂಭದಲ್ಲಿ, ಜವಾಬ್ದಾರಿಯುತ ಟ್ರೇಡ್ ಯೂನಿಯನ್ ಆಗಿ, ಎಐಸಿಸಿಎ ಶಿಸ್ತು ಮತ್ತು ಸಮವಸ್ತ್ರದ ಪಾಲನೆ ಮಾಡುವ ಅಂಶವನ್ನು ಸ್ವಾಗತ ಮಾಡುತ್ತದೆ. ಏಕೆಂದರೆ ಅದು ನಮ್ಮ ಏರ್‌ಲೈನ್‌ನ ಗುರುತು ಮತ್ತು ಚಿಹ್ನೆಯಾಗಿದೆ. ಆದರೆ ಸದಸ್ಯರಿಂದ ವಿವಿಧ ದೂರುಗಳು ಬಂದಿರುವುದು ನಮ್ಮ ಕಳವಳಕ್ಕೆ ಕಾರಣವಾಗಿದೆ. ಇದು ತೂಕ ತಪಾಸಣೆ ಮತ್ತು ಬಿಎಂಐ (Body mass index) ನಿರ್ವಹಣೆ ಅನ್ನು ಒಳಗೊಂಡಿರುವ ಸುತ್ತೋಲೆಯ ಅಂಶಕ್ಕೆ ಸಂಬಂಧಿಸಿದೆ," ಎಂದು ಹೇಳಿದೆ.

'ಸಿಬ್ಬಂದಿಯ ಮಾನಸಿಕ ಸಿದ್ಧತೆಗೆ ತೊಂದರೆಯಾಗುತ್ತದೆ'

Recommended Video

Team India ಕಳೆದ ಸರಣಿಯ ಬೆಸ್ಟ್ ಕ್ಷಣಗಳು | Oneindia Kannada

ಇನ್ನು ಮಾಲೀಕತ್ವ ಹಸ್ತಾಂತರಕ್ಕಾಗಿ ಕಾಯುತ್ತಿರುವ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಹೊಸ ಮಾಲೀಕರಾದ ಸರ್ಕಾರ ಮತ್ತು ಟಾಟಾ ಸನ್ಸ್ ನಡುವಿನ ಷೇರು ಖರೀದಿ ಒಪ್ಪಂದದ ವಿರುದ್ಧವಾದ ವಿಚಾರವನ್ನು ಉಲ್ಲೇಖ ಮಾಡಲಾಗಿದೆ. ಎಐಸಿಸಿಎ ಪತ್ರವು ಹೊಸ ನಿಯಮವು ಕ್ಯಾಬಿನ್ ಸಿಬ್ಬಂದಿಗೆ ಮಾನಸಿಕವಾಗಿ ತೊಂದರೆ ಉಂಟುಮಾಡಬಹುದು ಎಂದು ಹೇಳುತ್ತದೆ. "ಸಿಸಿಎಂಸಿಒನಲ್ಲಿ ವರದಿ ಮಾಡುವಾಗ ಈ ಒತ್ತಡದ ಬಿಎಂಐ ತಪಾಸಣೆಯು ವಿಮಾನ ಸುರಕ್ಷತೆ ಸಮಸ್ಯೆಗಳಿಗೆ ಕಾರಣವಾಗುವ ಮೂಲಕ ಸಿಬ್ಬಂದಿಯ ಮಾನಸಿಕ ಸಿದ್ಧತೆಗೆ ತೊಂದರೆ ಉಂಟು ಮಾಡುತ್ತದೆ," ಎಂದು ಉಲ್ಲೇಖ ಮಾಡಿದೆ. (ಒನ್‌ಇಂಡಿಯಾ ಸುದ್ದಿ)

English summary
Air India Flight Attendants Object to New Weight Checks That Could Affect Their Mental Health Before a Flight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X