ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಂಗ್‌ಕಾಂಗ್‌ಗೆ ಏರ್ ಇಂಡಿಯಾ ವಿಮಾನ ರದ್ದು

|
Google Oneindia Kannada News

ನವದೆಹಲಿ, ಏಪ್ರಿಲ್ 18; ಏರ್ ಇಂಡಿಯಾ ಹಾಂಗ್‌ಕಾಂಗ್‌ಗೆ ವಿಮಾನ ಸೇವೆಯನ್ನು ರದ್ದುಗೊಳಿಸಿದೆ. ಭಾರತದಿಂದ ಹಾಂಗ್‌ಕಾಂಗ್‌ಗೆ ತೆರಳುವ ಪ್ರವಾಸಿಗರು 48 ಗಂಟೆಗಳ ಮೊದಲಿನ ಕೋವಿಡ್ ಆರ್‌ಟಿಪಿಸಿಆರ್ ಪರೀಕ್ಷೆ ವರದಿ ಹೊಂದಿರುವುದು ಕಡ್ಡಾಯವಾಗಿದೆ.

ಕೋವಿಡ್ ನಿರ್ಬಂಧಗಳು ಮತ್ತು ಬೇಡಿಕೆ ಕುಸಿದಿರುವ ಕಾರಣ ಏರ್ ಇಂಡಿಯಾ ತನ್ನ ವಿಮಾನ ಸೇವೆಯನ್ನು ರದ್ದುಗೊಳಿಸಿದೆ. ಹಾಂಗ್‌ಕಾಂಗ್ ಸ್ಥಳೀಯ ಆಡಳಿತ ಕೋವಿಡ್ ನಿರ್ಬಂಧಗಳನ್ನು ಹೇರಿದೆ.

ಕರ್ನಾಟಕದಲ್ಲಿ ಕೋವಿಡ್ ಬೂಸ್ಟರ್ ಲಸಿಕೆ ಪಡೆದವರು ಎಷ್ಟು? ಕರ್ನಾಟಕದಲ್ಲಿ ಕೋವಿಡ್ ಬೂಸ್ಟರ್ ಲಸಿಕೆ ಪಡೆದವರು ಎಷ್ಟು?

ಏಪ್ರಿಲ್ 19 ಮತ್ತು 23ಕ್ಕೆ ಹಾರಾಟ ನಡೆಬೇಕಿದ್ದ ವಿಮಾನಗಳನ್ನು ಸಹ ರದ್ದುಗೊಳಿಸಲಾಗಿದೆ. ಹಾಂಗ್‌ಕಾಂಗ್‌ಗೆ ಸಂಚಾರ ನಡೆಸುವ ಜನರ ಸಂಖ್ಯೆಯಲ್ಲಿಯೂ ಸಹ ಕುಸಿತ ಕಂಡಿದ್ದು, ಈ ಹಿನ್ನಲೆಯಲ್ಲಿ ವಿಮಾನಗಳನ್ನು ರದ್ದುಗೊಳಿಸಲಾಗಿದೆ.

Sri Lanka Crisis; ವಿಮಾನ ಸಂಚಾರ ಕಡಿಮೆ ಮಾಡಿದ ಏರ್ ಇಂಡಿಯಾ Sri Lanka Crisis; ವಿಮಾನ ಸಂಚಾರ ಕಡಿಮೆ ಮಾಡಿದ ಏರ್ ಇಂಡಿಯಾ

Air India Cancelled Flight Services To Hong Kong

ಹಾಂಗ್‌ಕಾಂಗ್‌ನ ಹೊಸ ಕೋವಿಡ್ ಮಾರ್ಗಸೂಚಿ ಪ್ರಕಾರ ಭಾರತದಿಂದ ಸಂಚಾರ ನಡೆಸುವ ಪ್ರಯಾಣಿಕರು 48 ಗಂಟೆಗಳ ಮೊದಲ ಕೋವಿಡ್ ಆರ್‌ಟಿಪಿಸಿಆರ್ ಪರೀಕ್ಷೆ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ.

ಉಕ್ರೇನ್ ವಾಯು ಪ್ರದೇಶ ಬಂದ್: ಏರ್ ಇಂಡಿಯಾ ವಿಮಾನ ವಾಪಸ್ಉಕ್ರೇನ್ ವಾಯು ಪ್ರದೇಶ ಬಂದ್: ಏರ್ ಇಂಡಿಯಾ ವಿಮಾನ ವಾಪಸ್

ಈ ವರ್ಷದ ಜನವರಿಯಲ್ಲಿ ಓಮಿಕ್ರಾನ್ ಪ್ರಕರಣಗಳು ಪತ್ತೆಯಾದಾಗ ಹಾಂಗ್‌ಕಾಂಗ್ ಭಾರತ ಸೇರಿದಂತೆ 8 ದೇಶಗಳ ವಿಮಾನಗಳಿಗೆ ಎರಡು ವಾರಗಳ ಕಾಲ ನಿಷೇಧ ಹೇರಿತ್ತು. ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳ ವಿಮಾನ ಹಾರಾಟ ಸ್ಥಗಿತಗೊಂಡಿತ್ತು.

ಸ್ಥಳೀಯವಾಗಿ ಕೋವಿಡ್ ಪರಿಸ್ಥಿತಿ ಬದಲಾಗುತ್ತಿರುವ ಹಿನ್ನಲೆಯಲ್ಲಿ ವಿಮಾನ ಹಾರಾಟಕ್ಕೆ ನಿಷೇಧ ಹೇರಲಾಗಿದೆ ಎಂದು ಹೇಳಿತ್ತು. ಎರಡು ವಾರಗಳ ಬಳಿಕ ಮತ್ತೆ ವಿಮಾನ ಸೇವೆ ಆರಂಭವಾಗಿತ್ತು.

flight

ಮತ್ತಷ್ಟು ಪ್ರದೇಶದಲ್ಲಿ ಲಾಕ್‌ಡೌನ್; ಚೀನಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಮತ್ತಷ್ಟು ಪ್ರದೇಶಗಳಿಗೆ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಶಾಂಘೈನಲ್ಲಿ ಶನಿವಾರ ಅತಿ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗಿತ್ತು. ಭಾನುವಾರ ಸೋಂಕಿತನೊಬ್ಬ ಸಾವನ್ನಪ್ಪಿದ್ದಾರೆ. ಕೋವಿಡ್ ಲಾಕ್‌ಡೌನ್ ಆರಂಭವಾದ ಬಳಿಕ ಮೊದಲ ಸೋಂಕಿತ ಮೃತಪಟ್ಟಿದ್ದಾನೆ.

ಶಾಂಘೈನಲ್ಲಿ ಶುಕ್ರವಾರ 3,500 ಹೊಸ ಕೋವಿಡ್ ಪ್ರಕರಣ ದಾಖಲಾಗಿತ್ತು. ಜುಝವಾ ನಗರದಲ್ಲಿ ಸಹ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಜನರು ಮನೆಯಿಂದ ಹೊರಬಾರದು ಎಂದು ಸೂಚನೆ ನೀಡಲಾಗಿದೆ. ಮನೆಯಿಂದಲೇ ಕೆಲಸ ಮಾಡಲು ಆದ್ಯತೆ ನೀಡಬೇಕು ಎಂದು ತಿಳಿಸಲಾಗಿದೆ.

ಝೆಂಗ್‌ಝುವಾ ವಿಮಾನ ನಿಲ್ದಾಣ, ಆರ್ಥಿಕ ಪ್ರದೇಶಗಳಲ್ಲಿ ಸಹ 14 ದಿನಗಳ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಕ್ಸಿಯಾನ್ ನಗರದಲ್ಲಿಯೂ ಹಲವಾರು ಕೋವಿಡ್ ನಿರ್ಬಂಧಗಳನ್ನು ಹೇರಲಾಗಿದೆ.

English summary
Due to COVID-19 restrictions imposed by the Hong Kong authorities Air India has cancelled flight services to Hong Kong.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X