ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ನಾಗರಿಕರಿಗೆ ಶೇ.50ರಷ್ಟು ರಿಯಾಯಿತಿ ಘೋಷಿಸಿದ ಏರ್ ಇಂಡಿಯಾ

|
Google Oneindia Kannada News

ನವದೆಹಲಿ, ಡಿಸೆಂಬರ್ 17: ಏರ್ ಇಂಡಿಯಾವು ಹಿರಿಯ ನಾಗರಿಕರಿಗೆ ಶೇ.50ರಷ್ಟು ರಿಯಾಯಿತಿಯನ್ನು ಘೋಷಿಸಿದೆ.

ಹಿರಿಯ ನಾಗರಿಕರಿಗೆ ಮೂಲ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತದೆ, ಈ ಯೋಜನೆ ದೇಶೀಯ ವಿಮಾನಗಳಿಗೆ ಮಾತ್ರ ಅನ್ವಯವಾಗಲಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.

ಏರ್ ಇಂಡಿಯಾ ಖರೀದಿಗೆ ಮುಂದಾದ ಟಾಟಾ ಸಮೂಹಏರ್ ಇಂಡಿಯಾ ಖರೀದಿಗೆ ಮುಂದಾದ ಟಾಟಾ ಸಮೂಹ

ಏರ್ ಇಂಡಿಯಾ ಅಧಿಕೃತ ವೆಬ್‌ಸೈಟ್‌ ನ ಪ್ರಕಾರ ಕೆಲವೊಂದು ಮಾನದಂಡಗಳಿದ್ದು, ಅದಕ್ಕೆ ಹೋಲಿಕೆಯಾಗುವವರಿಗೆ ಮಾತ್ರ ರಿಯಾಯಿತಿ ದೊರೆಯಲಿದೆ.ಭಾರತದಲ್ಲಿ ಶಾಶ್ವತವಾಗಿ ನೆಲೆಸಿರುವ ಭಾರತೀಯ, ಪ್ರಯಾಣ ಆರಂಭಿಸುವ ದಿನದಂದು 60 ವರ್ಷ ಆಗಿರಬೇಕು ಎಂದು ಉಲ್ಲೇಖಿಸಲಾಗಿದೆ.

 Air India Announces 50 Percent Concession For Senior Citizens

ಟಿಕೆಟ್‌ನ್ನು ನೀವು ಪ್ರಯಾಣಿಸುವ ಮೂರು ದಿನವಿರುವಾಗ ಪಡೆಯಬೇಕು, ಇದೇ ಆಫರ್ ಒಂದು ವರ್ಷದವರೆಗೆ ಲಭ್ಯವಿರಲಿದೆ.ಬುಕಿಂಗ್ ವೇಳೆ ಮತದಾರ ಗುರುತಿನ ಚೀಟಿ, ಪಾಸ್‌ಪೋರ್ಟ್, ಡಿಎಲ್, ಸೀನಿಯರ್ ಸಿಟಿಜನ್ ಐಡಿ ನೀಡಬೇಕು.

ಒಂದೊಮ್ಮೆ ವಿಮಾನ ಏರುವ ಮುನ್ನ ಈ ದಾಖಲೆಗಳನ್ನು ಸಲ್ಲಿಸದಿದ್ದರೆ ನೀವು ವಿಮಾನದೊಳಗೆ ಪ್ರಯಾಣಿಸುವಂತಿಲ್ಲ, ಹಾಗೂ ಹಣವನ್ನು ಹಿಂದಿರುಗಿಸುವುದಿಲ್ಲ ಎಂದು ತಿಳಿಸಿದೆ.

ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಸಂಪೂರ್ಣ ಖಾಸಗಿ ಅಥವಾ 100% ಖಾಸಗಿಗೆ ಒಪ್ಪಿಸುವ ಬಗ್ಗೆ ಸರಕಾರ ನಿರ್ಧಾರ ಮಾಡಲಿದೆ ನಾಗರಿಕ ವಿಮಾನ ಯಾನ ಖಾತೆ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಘೋಷಿಸಿದ್ದು ನೆನಪಿರಬಹುದು.

ಸಾಲದ ಭಾರಕ್ಕೆ ಕುಸಿಯುತ್ತಿರುವ ಉಕ್ಕಿನ ಹಕ್ಕಿಯ ಹೊಣೆಯನ್ನು ಹೊತ್ತುಕೊಳ್ಳಲು ಅನೇಕ ಸಂಸ್ಥೆಗಳು ಮುಂದೆ ಬಂದಿವೆ. ಈ ಪೈಕಿ ಏರ್ ಇಂಡಿಯಾವನ್ನು ಖರೀದಿಸಲು ಟಾಟಾ ಸಮೂಹ ಸಂಸ್ಥೆ ಮುಂದಾಗಿರುವ ಸುದ್ದಿ ಪ್ರಮುಖವಾಗಿದೆ.

1953ರ ಬಳಿಕ ಮತ್ತೊಮ್ಮೆ ಏರ್ ಇಂಡಿಯಾದ ಮೇಲೆ ಟಾಟಾ ಸಂಸ್ಥೆ ತನ್ನ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಟಾಟಾ ವಿಸ್ತಾರದ ಭಾಗವಾಗಿ ಏರ್ ಇಂಡಿಯಾ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲು ಸೂಚಿಸಲಾಗಿದೆ.

English summary
Air India has announced a special scheme for senior citizens offering a 50% concession on the base fare
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X