ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಂಚದರಲ್ಲಿ ತಪ್ಪಿದ ಭಾರೀ ವಿಮಾನ ಅಪಘಾತ !

|
Google Oneindia Kannada News

ಲಖ್ನೋ, ಮೇ 19: ಏರ್ ಇಂಡಿಯಾ ವಿಮಾನ ಅಪಘಾತವೊಂದು ಕೊಂಚದರಲ್ಲಿ ತಪ್ಪಿದ್ದು ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಭುವನೇಶ್ವರದಿಂದ ನವದೆಹಲಿಗೆ ಹೊರಟಿದ್ದ ಏರ್ ಇಂಡಿಯಾದ ಎ ಐ 873 ವಿಮಾನ ಲಖ್ನೋದಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ.

ವಿಮಾನದಲ್ಲಿ 169 ಮಂದಿ ಪ್ರಯಾಣಿಸುತ್ತಿದ್ದರು. ವಿಮಾನದ ಹಿಂದಿನ ಕಿಟಕಿಯಲ್ಲಿ ಬಿರುಕು ಕಾಣಿಸಿಕೊಂಡ ತಕ್ಷಣ ಪೈಲಟ್ ಎಚ್ಚೆತ್ತುಕೊಂಡಿದ್ದಾರೆ. ಬೆಳಿಗ್ಗೆ 11.54 ಘಟನೆ ಸಂಭವಿಸಿದ್ದು ವಿಮಾನ ಮಧ್ಯಪ್ರದೇಶ್ ಖಜುರಾಹೋ ಮೇಲೆ ಹಾರಾಡುತ್ತಿತ್ತು.[ಏರ್ ಇಂಡಿಯಾ ಕ್ಯಾಪ್ಟನ್ -ಪೈಲಟ್ ಕಿತ್ತಾಟ ಮಾಡಿಕೊಂಡಿದ್ದು ಯಾಕೆ?]

air india

ತಕ್ಷಣ ವಿಮಾನವನ್ನು ಲಖ್ನೌ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. ತಾಂತ್ರಿಕ ದೋಷಗಳಿ ನಿರ್ದೇಶಕ ಎಸ್.ಸಿ.ಹೋಟಾ ಹೇಳಿದ್ದಾರೆ. ಕೊನೆಗೆ ಮಧ್ಯಾಹ್ನ 12.37ಕ್ಕೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಯಿತು.

ಪ್ರಯಾಣಿಕರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಅನುಭವ ಹಂಚಿಕೊಂಡಿದ್ದಾರೆ. ಅಲ್ಲದೇ ಪೈಲಟ್ ಕಾರ್ಯ ಕ್ಷಮತೆ ಮತ್ತು ಸಮಯ ಪ್ರಜ್ಞೆಗೆ ಮೆಚ್ಚುಗೆ ಸೂಚಿಸಿದ್ದಾರೆ.

English summary
A Delhi-Bhubaneswar Air India flight (AI 873) made an emergency landing at Lucknow airport with 169 passengers onboard at about 12.30 pm on Tuesday. All the passengers were safe after the landing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X