• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಹಾರದ ಆಚೆಗೂ ತಲುಪುತ್ತಿರುವ AIR ದರ್ಬಾಂಗ್ ನ ಯಶೋಗಾಥೆಯಿದು

|

ಪಾಟ್ನಾ, ಸೆಪ್ಟೆಂಬರ್ 9: ಪ್ರಸಾರ ಭಾರತಿಯ ಮಹತ್ವ ಹೆಜ್ಜೆ ಇಡುವ ಮೂಲಕ 260ಕ್ಕೂ ಹೆಚ್ಚು ಆಲ್ ಇಂಡಿಯಾ ರೇಡಿಯೋ ಸ್ಟೇಷನ್ಸ್, ದೂರದರ್ಶನ ಕೇಂದ್ರಗಳು ಹಾಗೂ ಅವರ ಪ್ರಾದೇಶಿಕ ಸುದ್ದಿ ಶಾಖೆಗಳ ಜತೆಗೆ ಟ್ವಿಟ್ಟರ್ ನಲ್ಲಿ ಕಾಣಿಸಿಕೊಂಡಿದೆ. ಇವುಗಳೆಲ್ಲದರಲ್ಲಿ ಬಿಹಾರದಲ್ಲಿ ಸಣ್ಣ ಜಿಲ್ಲೆಯಾದ ದರ್ಬಾಂಗ್ ದಲ್ಲಿರುವ ಆಲ್ ಇಂಡಿಯಾ ರೇಡಿಯೋ ಸ್ಟೇಷನ್ ದೊಡ್ಡ ಸದ್ದು ಮಾಡಿದೆ.

ಮೂವತ್ನಾಲ್ಕು ವರ್ಷದ ರಣಧೀರ್ ಠಾಕೂರ್ ಇಲ್ಲಿನ ಕಾರ್ಯಕ್ರಮ ಸಮನ್ವಯಕಾರರು. ಹಳೆಯ ಪ್ರಸಾರ ಸಂಸ್ಥೆಯೊಂದನ್ನು ಸಾಮಾಜಿಕ ಮಾಧ್ಯಮದ ಮೂಲಕ ಯುವಜನತೆಗೆ ತಲುಪಿಸಿದ ಶ್ರೇಯ ಇವರದು. ಠಾಕೂರ್ ಹದಿನೈದು ವರ್ಷಗಳ ಕಾಲ ಭಾರತೀಯ ನೌಕಾಸೇನೆಯಲ್ಲಿ ಕೆಲಸ ಮಾಡಿದವರು. ಈಗ ಎಲ್ಲವನ್ನೂ ತಮ್ಮ ಸ್ಮಾರ್ಟ್ ಫೋನ್ ಮೂಲಕವೇ ಮಾಡಿ ತೋರಿಸಿದ್ದಾರೆ.

ದರ್ಬಾಂಗದ ಆಲ್ ಇಂಡಿಯಾ ರೇಡಿಯೋದ ಕೇಳುಗರಿಗೆ ಹೊಸ ಅನುಭವ ದೊರೆಯುವಂತೆ ಮಾಡಿದ್ದಾರೆ. ಸ್ಮಾರ್ಟ್ ಫೋನ್ ತಲೆಮಾರಿನ ಜತೆಗೆ ನಂಟು ಬೆಸೆಯುವಲ್ಲಿ ಸಾಮಾಜಿಕ ಮಾಧ್ಯಮದ ವೇದಿಕೆಯನ್ನು ರಣಧೀರ್ ಠಾಕೂರ್ ಬಳಸುತ್ತಿರುವ ಪರಿ ಎಂಥವರಿಗೂ ಪ್ರೋತ್ಸಾಹದಾಯಕ.

ಅವರ ಶ್ರಮದಿಂದಲೇ ಈ ಹೊಸ ಡಿಜಿಟಲ್ ಸೂತ್ರದ ಮೂಲಕ ಸ್ಥಳೀಯ ಸಂಗತಿಯನ್ನು ಬಿಹಾರದ ಆಚೆಗೂ ತಲುಪಿಸಲು ಸಾಧ್ಯವಾಗಿದೆ. ರೇಡಿಯೋ ಬಗ್ಗೆ ತಮಗಿರುವ ಉತ್ಕಟವಾದ ಪ್ರೀತಿಯನ್ನು ರಣಧೀರ್ ಠಾಕೂರ್ ಒನ್ ಇಂಡಿಯಾ ಜತೆಗೆ ಹಂಚಿಕೊಂಡಿದ್ದಾರೆ. ರೇಡಿಯೋ ಹಾಗೂ ಸಾಮಾಜಿಕ ಮಾಧ್ಯಮದ ಸಂಬಂಧ ಸೂತ್ರ ಹಾಗೂ ಸ್ಥಳೀಯ ಸುದ್ದಿಯನ್ನು ದೇಶದಲ್ಲೇ ಖ್ಯಾತಗೊಳಿಸಲು ಅನುಸರಿಸುವ ತಂತ್ರದ ಬಗ್ಗೆ ಹೇಳಿಕೊಂಡಿದ್ದಾರೆ.

ಪ್ರಶ್ನೆ: ರೇಡಿಯೋ ಜನಪ್ರಿಯತೆ ಬಗ್ಗೆ ನೀವೇನು ಆಲೋಚನೆ ಮಾಡುತ್ತೀರಿ?

ರಣಧೀರ್ ಠಾಕೂರ್: ರೇಡಿಯೋ ಜನಪ್ರಿಯತೆ ಕುಸಿತದ ಹಾದಿಯಲ್ಲಿದೆ. ಆದರೆ ಪೂರ್ತಿ ಮಾಯವಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಜನರು ರೇಡಿಯೋ ಕಾರ್ಯಕ್ರಮ ಕೇಳಲು ಇಷ್ಟಪಡುತ್ತಾರೆ. ಪ್ರಧಾನಮಂತ್ರಿಗಳ ಮನ್ ಕೀ ಬಾತ್ ಕಾರ್ಯಕ್ರಮವು ರೇಡಿಯೋವನ್ನು ಹೊಸ ಎತ್ತರಕ್ಕೆ ಒಯ್ದಿದೆ. ಈಗ ನಗರ ಪ್ರದೇಶದ ಕೇಳುಗರೂ ರೇಡಿಯೋಗೆ ವಾಪಸಾಗುತ್ತಿದ್ದಾರೆ.

ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಹೊಸ ಆಲೋಚನೆ ಮಾಡಿದೆವು. ನಮಗೆ ಮುಖ್ಯವಾಗಿ ಯುವ ಜನರನ್ನು ತಲುಪಬೇಕಿತ್ತು. ನಮ್ಮ ಪ್ರಧಾನಿ ಮಾತುಗಳು ಡಿಜಿಟಲ್ ಇಂಡಿಯಾಗೆ ದೊಡ್ಡ ಮಟ್ಟದ ಪ್ರೇರಣೆ ನೀಡಿದೆ. ಆದ್ದರಿಂದ ದೊಡ್ಡ ಮಟ್ಟದ ಓದುಗರನ್ನು ಸಾಮಾಜಿಕ ಮಾಧ್ಯಮದ ಮೂಲಕ ತಲುಪಲು ಆಯ್ಕೆ ಮಾಡಿಕೊಂಡೆವು.

ಪ್ರಶ್ನೆ: ರೇಡಿಯೋ ಕಾರ್ಯಕ್ರಮಗಳಿಗೆ ಕೇಳುಗರನ್ನು ಹೇಗೆ ಸೆಳೆಯುತ್ತಿದ್ದೀರಾ?

ರಣಧೀರ್ ಠಾಕೂರ್: ನಮ್ಮ ಪ್ರಯೋಗ ಸಾಮಾಜಿಕ ಮಾಧ್ಯಮಕ್ಕೆ ಅಷ್ಟೇ ಸೀಮಿತವಾಗಿಲ್ಲ. ನಾವು ಬೇರೆ ಡಿಜಿಟಲ್ ವೇದಿಕೆಗಳನ್ನು ಕೂಡ ಬಳಸುತ್ತಿದ್ದೇವೆ. ಸೌಂಡ್ ಕ್ಲೌಡ್, ಯುಟ್ಯೂಬ್ ಚಾನಲ್ ಮೂಲಕವೂ ಕಾರ್ಯಕ್ರಮಗಳ ಪ್ರಚಾರ ಮಾಡುತ್ತಾ ಇದ್ದೇವೆ. ಪ್ರಸಾರಕ್ಕೆ ಮುಚಿತವಾಗಿಯೇ ಸಣ್ಣ ಹಾಗೂ ಕ್ಲುಪ್ತವಾದ ವಿಡಿಯೋಗಳ ಮೂಲಕ ಕಾರ್ಯಕ್ರಮಗಳ ಪ್ರಚಾರ ನೀಡುವ ನಮ್ಮ ಆಲೋಚನೆಯಿಂದ ಸಹಾಯವಾಗಿದೆ.

ಇದರ ಜತೆಗೆ ಸ್ಲೈಡ್ ಗಳು, ಸಂಗೀತ ಮತ್ತು ಹಿನ್ನೆಲೆ ಸಂಗೀತ ಇವೆಲ್ಲದರಿಂದ ನಮ್ಮ ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಆಸಕ್ತಿ ತೋರಿಸುತ್ತಿದ್ದಾರೆ.

ಪ್ರಶ್ನೆ: ಸ್ಮಾರ್ಟ್ ಫೋನ್ ಮತ್ತು ರೇಡಿಯೋ ಮಧ್ಯೆ ಸಂಬಂಧ ಹೇಗಿದೆ?

ಠಾಕೂರ್: ನಮ್ಮ ಓದುಗರನ್ನು ತಲುಪಲು ಎಲ್ಲ ದಾರಿಗಳನ್ನು ಅನುಸರಿಸುತ್ತಿದ್ದೇವೆ. ಚೀನಾದ ನಂತರ ಮೊಬೈಲ್ ಫೋನ್ ಬಳಸುವ ದೇಶ ಭಾರತ. ಬಿಹಾರದಲ್ಲಿ ಪ್ರತಿ ಎರಡನೇ ವ್ಯಕ್ತಿ ಬಳಿ ಮೊಬೈಲ್ ಫೋನ್ ಇದೆ. ಆದ್ದರಿಂದ ಮೊಬೈಲ್ ಇರುವ ವ್ಯಕ್ತಿಗೆ ನಮ್ಮ ಕಾರ್ಯಕ್ರಮದ ಬಗ್ಗೆ ತಿಳಿಯುತ್ತದೆ ಎಂಬ ಆಲೋಚನೆಯ ಲಾಭ ಪಡೆದವು.

ಹೊರಾಂಗಣ ಪ್ರಸಾರ ಕಾರ್ಯಕ್ರಮದ ವೇಳೆಯಲ್ಲಿ ನಾವು ಗಮನಿಸಿದ್ದೇನೆಂದರೆ, ಜನರ ಹತ್ತಿರ ರೇಡಿಯೋ ಇರುವುದಿಲ್ಲ; ಆದರೆ ಮೊಬೈಲ್ ಇರುತ್ತದೆ. ಆದ್ದರಿಂದಲೇ ಸಾಮಾಜಿಕ ಮಾಧ್ಯಮ ಸೇರಿದಂತೆ ಇತರ ಹೊಸ ಮಾಧ್ಯಮಗಳ ಮೂಲಕ ಕೇಳುಗರನ್ನು ತಲುಪಲು ಯತ್ನಿಸಿದೆವು.

ಪ್ರಶ್ನೆ: ನಿಮ್ಮ್ ಸಾಮಾಜಿಕ ಮಾಧ್ಯಮದ ತಂತ್ರವೇನು?

ಠಾಕೂರ್: ನಮ್ಮ ಕಾರ್ಯಕ್ರಮಗಳನ್ನು ಮೊದಲಿಗೆ ಆದ್ಯತೆ ಮೇರೆಗೆ ವಿಂಗಡಿಸಬೇಕು. ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡುವ ಮುಂಚೆಯೇ ಚೆನ್ನಾಗಿ ಯೋಜನೆ ಮಾಡಿಕೊಳ್ಳಬೇಕು. ಇಲ್ಲಿ ಸಾಮಾಜಿಕ ಮಾಧ್ಯಮಕ್ಕೆ ಅಂತಲೇ ಪ್ರತ್ಯೇಕ ತಂಡ ಅಂತಿಲ್ಲ. ನಾನು ಸ್ಮಾರ್ಟ್ ಫೋನ್ ಮೂಲಕ ಆರಂಭಿಸಿದೆ. ಅದೂ ಇಬ್ಬರು ಯುವಕರ ಸಹಕಾರದೊಂದಿಗೆ. ಪ್ರಸಾರ ಭಾರತಿ ಸಿಇಒ ಹಾಗೂ ನನ್ನ ಹಿರಿಯರ ಸಹಕಾರ ಇಲ್ಲದಿದ್ದರೆ ದರ್ಬಾಂಗ್ ನಲ್ಲಿ ಇಂತಹ ಯಶಸ್ಸು ಸಾಧ್ಯವಿರಲಿಲ್ಲ.

ಪ್ರಶ್ನೆ: ಸಾಮಾಜಿಕ ಮಾಧ್ಯಮದಲ್ಲಿ ಕೇಳುಗರ ಪ್ರತಿಕ್ರಿಯೆ ಹಾಗೂ ಬೇಡಿಕೆ ಹೇಗಿದೆ?

ಠಾಕೂರ್: ಕಾರ್ಯಕ್ರಮದ ವಿಷಯದ ಬಗ್ಗೆ ಈ ವರೆಗೆ ನಮಗೆ ಯಾವುದೇ ದೂರು ಬಂದಿಲ್ಲ. ಕೇಳುಗರ ಮನವಿ ಪೂರೈಸಲು ಉತ್ತಮವಾದ ಪ್ರಯತ್ನ ಹಾಕುತ್ತಿದ್ದೇವೆ. ನಾವು ಬಹಳ ಕಾಲದಿಂದ ಫೇಸ್ ಬುಕ್ ನಲ್ಲಿ ಇದ್ದೀವಿ. ಆದರೆ ಟ್ವಿಟ್ಟರ್ ಗೆ ಬಂದು ಮೂರು ತಿಂಗಳಾಯಿತು. ಏರ್ ದರ್ಬಾಂಗ್ ಗೆ ಎರಡೂವರೆ ಸಾವಿರ ಲೈಕ್ ಇದೆ.

ಫೇಸ್ ಬುಕ್ ಪುಟದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್ ಇವೆ. ಸೌಂಡ್ ಕ್ಲೌಡ್ ಖಾತೆಯಲ್ಲಿ ಎರಡುಸಾವಿರದ ಒಂಬೈನೂರು ಸಲ ಕೇಳಿದ್ದಾರೆ. ನಾವು ಬಳಸುವ ಟ್ವಿಟ್ಟರ್ ಹ್ಯಾಂಡಲ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಹಿರಿಯ ರೇಡಿಯೋ ಪತ್ರಕರ್ತರು ನಮ್ಮ ಶ್ರಮವನ್ನು ಮೆಚ್ಚಿಕೊಂಡಿದ್ದಾರೆ.

ಪ್ರಶ್ನೆ: ರೇಡಿಯೋ ಕಾರ್ಯಕ್ರಮಗಳು ಕೇಳುಗರನ್ನು ತಲುಪುವಲ್ಲಿ ಸಾಮಾಜಿಕ ಮಾಧ್ಯಮದ ಪ್ರಭಾವ ಹೇಗಿದೆ?

ಠಾಕೂರ್: ಎಲ್ಲ ಕಾರ್ಯಕ್ರಮಗಳನ್ನೂ ಯುವಕರಿಗಾಗಿಯೇ ಮಾಡುವುದಿಲ್ಲ. ಆದರೂ ಬೇರೆ ವಯೋಮಾನದವರಿಗೆ ಇಷ್ಟವಾಗುತ್ತಿದೆ. ಉತ್ತರ ಬಿಹಾರದ ಒಂಬತ್ತು ಜಿಲ್ಲೆಗಳ ಕೇಳುಗರು ಏರ್ ದರ್ಬಾಂಗ್ ವನ್ನು ಅನುಸರಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಹಾಗೂ ಡಿಜಿಟಲ್ ಟೂಲ್ ಗಳ ಸಹಾಯದಿಂದ ಮಿಥಿಲಾಂಚಲ್ ಎಂದು ಕರೆಯುವ ಈ ಭಾಗದಿಂದ ಆಚೆಗೂ ತಲುಪುತ್ತಿದೆ.

ಬೆಂಗಾಲ್, ಮುಂಬೈ ಹೀಗೆ ಬೇರೆ ರಾಜ್ಯಗಳಿಂದಲೂ ನಮಗೆ ಟ್ವೀಟ್ ಬರುತ್ತಿದೆ. ಹೈದರಾಬಾದ್ ಮ ಮೌಲಾನಾ ಅಬುಲ್ ಕಲಾಂ ವಿವಿಯ ನಮ್ಮ ಫಾಲೋವರ್ ಒಬ್ಬರು ಮೈಥಿಲಿ ಕಾರ್ಯಕ್ರಮದ ಮೆಚ್ಚುಗೆ ಸೂಚಿಸಿದ್ದಾರೆ. ವಿಶೇಷವಾಗಿ ಸಣ್ಣ ಕಥೆಗಳ ಬಗ್ಗೆ ಬಿಹಾರದಿಂದ ಹೊರಗಿರುವ ಜನ ಮೆಚ್ಚುಗೆ ತೋರಿಸುತ್ತಿದ್ದಾರೆ. ಸ್ಥಳೀಯ ಸಂಗತಿಗಳನ್ನು ರಾಷ್ಟ್ರೀಯ ಹಾಗೂ ಜಾಗತಿಕ ಕೇಳುಗರನ್ನು ತಲುಪುವಂತೆ ಮಾಡುವುದು ನಮ್ಮ ಗುರಿ.

English summary
In a major digital push, recently, Prasar Bharati got more than 260 of its all All India Radio Stations, Doordarshan Kendras and their regional news units on Twitter. Out of these, All India Radio station of Darbhanga, a small district in Bihar, is making the most of all social media platforms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X