ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಯ್ಲೆಟ್ ಕ್ಲೀನ್ ಇಲ್ಲ ಅಂದಿದ್ದಕ್ಕೆ ಏರ್ ಏಷ್ಯಾ ಸಿಬ್ಬಂದಿಯಿಂದ ಅತ್ಯಾಚಾರದ ಬೆದರಿಕೆ!

|
Google Oneindia Kannada News

ನವದೆಹಲಿ, ನವೆಂಬರ್ 11: ರಾಂಚಿಯಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಏಷ್ಯಾ ವಿಮಾನವೊಂದರಲ್ಲಿ ಟಾಯ್ಲೆಟ್ ಕ್ಲೀನ್ ಇಲ್ಲ ಎಂದು ಮಹಿಳಾ ಪ್ರಯಾಣಿಕರೊಬ್ಬರು ದೂರು ಹೇಳಿದ್ದಕ್ಕಾಗಿ ಮೂವರು ಏರ್ ಏಷ್ಯಾ ಸಿಬ್ಬಂದಿಗಳು ಮಹಿಳೆಗೆ ಅತ್ಯಾಚಾರದ ಬೆದರಿಕೆ ಒಡ್ಡಿದ ಘಟನೆ ನಡೆದಿದೆ.

ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದ ಇಂಡಿಗೋ ಉದ್ಯೋಗಿಗಳ ವಜಾ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದ ಇಂಡಿಗೋ ಉದ್ಯೋಗಿಗಳ ವಜಾ

ಘಟನೆ ನವೆಂಬರ್ 3 ರಂದೇ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ. ಸದ್ಯಕ್ಕೆ ಮೂವರು ಏರ್ ಏಷ್ಯಾ ಸಿಬ್ಬಂದಿಗಳ ಮೇಲೆ ಅಸಭ್ಯ ವರ್ತನೆ ಮತ್ತು ಲೈಂಗಿಕ ದೌರ್ಜನ್ಯದ ದೂರು ನೀಡಿರುವುದರಿಂದ ಅವರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.

ಪತಿಯ ಅವ್ಯವಹಾರ ಪತ್ತೆ, ವಿಮಾನದಲ್ಲಿ ಪತ್ನಿ ಹಲ್ಲಾಗುಲ್ಲಾ ಪತಿಯ ಅವ್ಯವಹಾರ ಪತ್ತೆ, ವಿಮಾನದಲ್ಲಿ ಪತ್ನಿ ಹಲ್ಲಾಗುಲ್ಲಾ

ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಇಂಥ ಹಲವು ಮುಜುಗರದ ಸನ್ನಿವೇಶ ಅನುಭವಿಸುವಂತಾಗಿದ್ದು, ವಿಮಾನ ಪ್ರಯಾಣದ ಅಭದ್ರತೆಯ ಬಗ್ಗೆ ಯೋಚಿಸಬೇಕಾದ ಜರೂತರತ್ತನ್ನು ಕೂಗಿಹೇಳಿದೆ.

ಅಲ್ಲಿ ನಡೆದಿದ್ದೇನು?

ರಾಂಚಿಯಿಂದ ಬೆಂಗಳೂರಿಗೆ ಹೊರಟಿದ್ದ ಮಹಿಳೆಯೊಬ್ಬರು ವಿಮಾನದಲ್ಲಿರುವ ಟಾಯ್ಲೆಟ್ ಸ್ವಚ್ಛವಾಗಿಲ್ಲ ಎಂದು ವಿಮಾನದಲ್ಲಿದ್ದ ಸಿಬ್ಬಂದಿಯೊಬ್ಬರಿಗೆ ದೂರು ನೀಡಿದರು. ಮಹಿಳೆ ದೂರು ನೀಡುತ್ತಿದ್ದಂತೆಯೇ ಸಿಬ್ಬಂದಿ ಆಕೆಗೇ ಹಿಂತಿರುಗಿ ಬೈದು, ಆಕೆಯ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ಆ ಸಮಯದಲ್ಲಿ ಮಹಿಳೆಯ ಸಹಾಯಕ್ಕೆ ಇನ್ನೊಬ್ಬರು ಮಹಿಳೆ ಬಂದಿದ್ದಾರೆ. ಅವರಿಗೂ ಸಿಬ್ಬಂದಿ ಬೈದಿದ್ದಾರೆ.

ವಿಮಾನದಿಂದ ಆಚೆ ಹಾಕುವುದಾಗಿ ಬೆದರಿಕೆ!

"ಹೆಚ್ಚು ಮಾತನಾಡಿದರೆ ವಿಮಾನದಿಂದ ಆಚೆ ಹಾಕುವುದಾಗಿ ನನ್ನನ್ನು ಬೆದರಿಸಿದ್ದಾರೆ. ಬಾಯಿಮುಚ್ಚಿಕೊಂಡಿರದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದೂ ಜೋರು ದನಿಯಲ್ಲಿ ಮಾತನಾಡಿದ್ದಾರೆ" ಎಂದು ಮಹಿಳೆ ಪೊಲೀಸರ ಮುಂದೆ ಅಲವತ್ತುಕೊಂಡಿದ್ದಾರೆ. ಸಿಬ್ಬಂದಿಗಳು ಪೊಲೀಸರ ಮುಂದೆಯೂ ಆಕೆಯನ್ನು ಹಿಯಾಳಿಸಿ ಮಾತನಾಡಿದ್ದಾರೆ.

ಬೆಂಗಳೂರಿನಲ್ಲೂ ಕಿರುಕುಳ

ಬೆಂಗಳೂರಿನಲ್ಲೂ ಕಿರುಕುಳ

"ವಿಮಾನ ಬೆಂಗಳೂರು ತಲುಪಿದ ನಂತರ ಅಲ್ಲಿಯೂ ನನಗೆ ಕಿರುಕುಳ ನೀಡಿದ್ದಾರೆ. ಬೆಂಗಳೂರಿನ ಏರ್ ಏಷ್ಯಾ ಸಿಬ್ಬಂದಿಯೊಬ್ಬರು ತನ್ನನ್ನು ಅತ್ಯಾಚಾರ ಮಾಡುವುದಾಗಿಯೂ ಬೆದರಿಸಿದ್ದಾರೆ. ಮೂವರು ಸಿಬ್ಬಂದಿಗಳು ನನ್ನ ಸುತ್ತ ನಿಂತುಕೊಂಡು, ನಾವ್ಯಾರು ಅನ್ನೋದು ನಿನಗಿನ್ನೂ ಗೊತ್ತಿಲ್ಲ ಎಂದು ರೌಡಿಗಳಂತೆ ಪೋಸ್ ಕೊಟ್ಟಿದ್ದರು" ಎಂದೂ ಆಕೆ ಹೇಳಿಕೊಂದಿದ್ದಾರೆ.

ಮರುಕಳಿಸುತ್ತಿವೆ ಇಂಥ ಘಟನೆಗಳು

ಮರುಕಳಿಸುತ್ತಿವೆ ಇಂಥ ಘಟನೆಗಳು

ಇತ್ತೀಚೆಗೆ ತಾನೇ, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಿಬ್ಬಂದಿಯೊಬ್ಬ ಹಲ್ಲೆ ಮಾಡಿದ ಘಟನೆ ನಡೆದಿತ್ತು. ಹಲ್ಲೆಗೊಳಗಾದ ವಿನಯ್ ಕತಿಯಾಲ್ ಎಂಬುವವರ ದೂರಿನ ಮೇಲೆ ಇಂಡಿಗೂ ವಿಮಾನ ಯಾನ ಆಡಳಿತ ಮಂಡಳಿ ಇಬ್ಬರು ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಿತ್ತು.

English summary
A woman, who took a Ranchi-Bengaluru flight, has filed an FIR against 3 Air Asia staff members under charges of misbehavior and harassment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X