ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಇಂಡಿಯಾ ಪೈಲಟ್ ಮತ್ತು ಸಿಬ್ಬಂದಿಗೆ 'ಜೈ ಹಿಂದ್' ಹೇಳಲು ಆದೇಶ

|
Google Oneindia Kannada News

ನವದೆಹಲಿ, ಮಾರ್ಚ್‌ 04: ಏರ್ ಇಂಡಿಯಾ ಸಂಸ್ಥೆಯು ತನ್ನ ವಿಮಾನ ಸೇವಾ ಸಿಬ್ಬಂದಿಗೆ ವಿಮಾನದಲ್ಲಿ ಪ್ರಯಾಣಿಕರಿಗೆ ಸೂಚನೆಗಳ ನಂತರ 'ಜೈ ಹಿಂದ್' ಎಂದು ಹೇಳುವಂತೆ ಆದೇಶ ಮಾಡಿದೆ.

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಏರ್ ಇಂಡಿಯಾ ಸಿಬ್ಬಂದಿಗೆ ಇಂಡಿಗೋ ಬಸ್ ಡಿಕ್ಕಿ, ಗಾಯ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಏರ್ ಇಂಡಿಯಾ ಸಿಬ್ಬಂದಿಗೆ ಇಂಡಿಗೋ ಬಸ್ ಡಿಕ್ಕಿ, ಗಾಯ

ಏರ್‌ ಇಂಡಿಯಾ ನಿರ್ದೇಶಕ ಅಮಿತಾಬ್ ಸಿಂಗ್ ಅವರು ಈ ಆದೇಶ ಹೊರಡಿಸಿದ್ದು, ವಿಮಾನ ಸೇವಾ ಸಿಬ್ಬಂದಿ ಮಾತ್ರವೇ ಅಲ್ಲದೆ ಕಾಕ್‌ಪೀಟ್‌ನಿಂದ ಹೊರಡುವ ಸೂಚನೆಗಳ ನಂತರವೂ 'ಜೈ ಹಿಂದ್' ಎಂದು ಹೇಳುವಂತೆ ಆದೇಶಿಸಲಾಗಿದೆ.

ಏರ್‌ಇಂಡಿಯಾ ವಿಮಾನ ವೇಳಾಪಟ್ಟಿ ಬದಲಾಯಿಸಲು ಕುವೈತ್‌ ತುಳುಕೂಟ ಮನವಿ ಏರ್‌ಇಂಡಿಯಾ ವಿಮಾನ ವೇಳಾಪಟ್ಟಿ ಬದಲಾಯಿಸಲು ಕುವೈತ್‌ ತುಳುಕೂಟ ಮನವಿ

ಆದೇಶವು ತತ್‌ಕ್ಷಣದಿಂದ ಪಾಲಿಸುವಂತೆ ಸೂಚಿಸಲಾಗಿದ್ದು, ಇನ್ನು ಮುಂದೆ ಏರ್‌ ಇಂಡಿಯಾದ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪ್ರತಿ ಸೂಚನೆಗಳ ನಂತರ 'ಜೈ ಹಿಂದ್' ಕೇಳಿಸಿಕೊಳ್ಳುತ್ತಾರೆ.

Air Andia directs crew to say jai hind after every announcement

ಇದೇ ರೀತಿಯ ಆದೇಶವನ್ನು 2016 ರಲ್ಲಿ ಏರ್‌ ಇಂಡಿಯಾದ ಚೇರ್‌ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಶ್ವಿನಿ ಲೋಹಾನಿ ಅವರು ಮಾಡಿದ್ದರು. ಆದರೆ ಅದು ವಿವಿಧ ಕಾರಣಗಳಿಗಾಗಿ ಪಾಲಿಸಲಾಗಿರಲಿಲ್ಲ. ಈಗ ಮತ್ತೆ ಆದೇಶ ಹೊರಡಿಸಲಾಗಿದೆ.

ವೈರಲ್ ವಿಡಿಯೋ: ಏರ್ ಇಂಡಿಯಾ ವಿಮಾನದಲ್ಲಿ ಐರಿಶ್ ಮಹಿಳೆಯ ರಂಪಾಟ ವೈರಲ್ ವಿಡಿಯೋ: ಏರ್ ಇಂಡಿಯಾ ವಿಮಾನದಲ್ಲಿ ಐರಿಶ್ ಮಹಿಳೆಯ ರಂಪಾಟ

ವಿಮಾನದ ಕ್ಯಾಪ್ಟನ್, ಸೇವಾ ಸಿಬ್ಬಂದಿಗಳು ಪ್ರಯಾಣಿಕರ ಜೊತೆ ಸದಾ ಪರಸ್ಪರ ಸಂಪರ್ಕ ಹೊಂದಿರಲೇಬೇಕಾಗಿರುತ್ತದೆ. ಪ್ರತಿ ಸೂಚನೆಯ ನಂತರ ಜೈ ಹಿಂದ್ ಹೇಳುವುದರಿಂದ ಉತ್ತಮ ವಾತಾವರಣ ವಿಮಾನದಲ್ಲಿ ಉಂಟಾಗುತ್ತದೆ. ಪ್ರಯಾಣಿಕರ, ವಿಮಾನ ಸಿಬ್ಬಂದಿಯ ನಡುವೆ ಬಂಧ ಏರ್ಪಡುತ್ತದೆ ಎಂದು ಏರ್‌ ಇಂಡಿಯಾ ಹೇಳಿದೆ.

English summary
Air India has issued a circular to all cabin crew and cockpit crew directing them to say 'Jai Hind' after any announcement onboard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X