ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ವಾಜಪೇಯಿ ಶ್ರದ್ಧಾಂಜಲಿಗೆ ಒಲ್ಲೆ ಎಂದಿದ್ದಕ್ಕೆ ಬಿತ್ತು ಗೂಸಾ!

|
Google Oneindia Kannada News

Recommended Video

ಅಟಲ್ ಬಿಹಾರಿ ವಾಜಪೇಯಿ ಶ್ರದ್ಧಾಂಜಲಿಗೆ ಒಲ್ಲೆ ಎಂದವನಿಗೆ ಬಿತ್ತು ಗೂಸಾ

ಔರಂಗಾಬಾದ್, ಆಗಸ್ಟ್ 18: ಇಡೀ ದೇಶವೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದೆ. ಆದರೆ ಅಜಾತಶತ್ರುವಿಗೆ ಶ್ರದ್ಧಾಂಜಲಿ ಸಲ್ಲಿಸಲು ಎಐಎಂಐಎಂ(All India Majlis-e-Ittehadul Muslimeen) ಸದಸ್ಯನೊಬ್ಬ ಒಲ್ಲೆ ಎಂದಿದ್ದಕ್ಕಾಗಿ ಏಟುತಿಂದ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.



ಔರಂಗಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಸಭೆಯೊಂದರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆವರಿಗೆ ಶ್ರದ್ಧಾಂಜಲಿ ಅರ್ಪಿಸಲು ಬಿಜೆಪಿ ಮುಖಂಡರು ಮುಂದಾದರು. ಈ ಸಂದರ್ಭದಲ್ಲಿ ತಾನು ಶ್ರದ್ಧಾಂಜಲಿ ಅರ್ಪಿಸೋಲ್ಲ ಎಂದ ಸಯ್ಯದ್ ಮತೀನ್ ಎಂಬುವವರು ಏಟು ತಿನ್ನುವ ಸಂದರ್ಭ ಎದುರಾಯಿತು. ವಾಜಪೇಯಿ ಅವರು ಯಾವುದೇ ಒಂದುದ ಪಕ್ಷಕ್ಕೆ ಸೀಮಿತ ಎಂಬಂತೆ ಓಡಬೇಡಿ. ಅವರು ಪ್ರಧಾನಿಯಾಗಿದ್ದವರು, ಅವರ ನಿಧನಕ್ಕೆ ಇಡೀ ವಿಶ್ವವೇ ಮರುಗಿದೆ, ಅವರೊಬ್ಬ ಅಜಾತ ಶತ್ರು ಎಂಬು ಬಿಜೆಪಿ ಸದಸ್ಯರು ಎಐಎಂಐಎಂ ಸದಸ್ಯನಿಗೆ ತಿಳಿಸಿದರು.

ಹದಿನಾಲ್ಕು ವರ್ಷದಿಂದ ವಾಜಪೇಯಿ ಜತೆಗಿದ್ದವರು ಇವರು ಹದಿನಾಲ್ಕು ವರ್ಷದಿಂದ ವಾಜಪೇಯಿ ಜತೆಗಿದ್ದವರು ಇವರು

AIMIM member beaten by BJP members for opposing condolence resolution to Vajpayee

ಸಿಸಿಟಿವಿಯಲ್ಲಿ ದಾಖಲಾಗಿದ್ದ ಈ ಘಟನೆ ಇದೀಗ ವೈರಲ್ ಆಗಿದೆ. 93 ವರ್ಷ ವಯಸ್ಸಿನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಗಸ್ಟ್ 16 ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅನಾರೋಗ್ಯದ ಕಾರಣ ನಿಧನರಾದರು. ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಸಂಸ್ಕಾರ ರಾಜ್ ಘಾಟ್ ನ ಸ್ಮೃತಿ ಸ್ಥಳದಲ್ಲಿ ನಿನ್ನೆ(ಆ.17) ನಡೆದಿದೆ. ಅವರ ಅಗಲಿಕೆಗೆ ವಿಶ್ವದಾದ್ಯಂತ ಗಣ್ಯರು ಸಂತಾಪ ಸೂಚಿಸಿದ್ದಾರೆ.

English summary
Viral Video: Scuffle breaks out between members of BJP and AIMIM in Maharashtra's Aurangabad Municipal Corporation after an AIMIM corporator opposed the condolence proposal of former PM Atal Bihari Vajpayee
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X