ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ನಂತರ ರಕ್ತದಲ್ಲಿನ ಸಕ್ಕರೆ ಅಂಶದಲ್ಲಿ ಅಸಹಜ ಏರಿಕೆ; ಏಮ್ಸ್

|
Google Oneindia Kannada News

ನವದೆಹಲಿ, ಜುಲೈ 01: ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ. ಕೊರೊನಾ ನೆಗೆಟಿವ್ ವರದಿ ಬಂದ ಮೇಲೂ ಆರೋಗ್ಯದಲ್ಲಿ ವ್ಯತ್ಯಾಸಗಳು ಕಂಡುಬರುತ್ತಿವೆ.

ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿಗೆ ತುತ್ತಾಗಿ ಗುಣಮುಖರಾದ ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಅಂಶ ಅಸಹಜವಾಗಿ ಹೆಚ್ಚಳವಾಗಿರುವುದಾಗಿ ಪಾಟ್ನಾದ ಏಮ್ಸ್‌ ಸಂಸ್ಥೆಯ ಸಮೀಕ್ಷೆ ವರದಿ ಮಾಡಿದೆ.

ಕೊರೊನಾ ನಂತರದ ಸಮಸ್ಯೆಗಳ ಪತ್ತೆಗೆ ಪಾಟ್ನಾದ ಏಮ್ಸ್‌ ಟೆಲಿಫೋನಿಕ್ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಸುಮಾರು ಮೂರು ಸಾವಿರ ಮಂದಿಯಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದವರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಮುಂದೆ ಓದಿ...

 ಸೋಂಕಿನಿಂದ ಚೇತರಿಸಿಕೊಂಡ ನಂತರ ಕಂಡುಬಂದ 11 ಸಮಸ್ಯೆಗಳು

ಸೋಂಕಿನಿಂದ ಚೇತರಿಸಿಕೊಂಡ ನಂತರ ಕಂಡುಬಂದ 11 ಸಮಸ್ಯೆಗಳು

"ಕೊರೊನಾದಿಂದ ಗುಣಮುಖರಾದ ನಂತರ ಆರೋಗ್ಯದಲ್ಲಿ ಕಂಡುಬಂದ ಏರುಪೇರಿನ ಕುರಿತು ಸುಮಾರು 3000 ಮಂದಿಯನ್ನು ಟೆಲಿಫೋನಿಕ್ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಮೀಕ್ಷೆಯಲ್ಲಿ ಕೊರೊನಾದಿಂದ ಗುಣಮುಖರಾದ ನಂತರ ಸುಮಾರು 11 ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬಂದಿವೆ" ಎಂದು ಪೋಸ್ಟ್ ಟ್ರೌಮಾ ಇಲಾಖೆ ಮುಖ್ಯಸ್ಥ ಡಾ. ಅನಿಲ್ ಕುಮಾರ್ ತಿಳಿಸಿದ್ದಾರೆ.

ಕೊರೊನಾ ಸೋಂಕಿಗೆ ಬಲಿಯಾದವರಲ್ಲಿ ಯಾವ ವಯಸ್ಸಿನವರ ಪ್ರಮಾಣ ಹೆಚ್ಚಿದೆ...ಕೊರೊನಾ ಸೋಂಕಿಗೆ ಬಲಿಯಾದವರಲ್ಲಿ ಯಾವ ವಯಸ್ಸಿನವರ ಪ್ರಮಾಣ ಹೆಚ್ಚಿದೆ...

 ರಕ್ತದಲ್ಲಿನ ಸಕ್ಕರೆ ಅಂಶದಲ್ಲಿ ಅಸಹಜ ಹೆಚ್ಚಳ

ರಕ್ತದಲ್ಲಿನ ಸಕ್ಕರೆ ಅಂಶದಲ್ಲಿ ಅಸಹಜ ಹೆಚ್ಚಳ

ಅತಿಯಾದ ಸುಸ್ತು, ಹಸಿವಾಗದಿರುವುದು ಸೇರಿದಂತೆ ಹನ್ನೊಂದು ರೀತಿಯ ಆರೋಗ್ಯ ಸಮಸ್ಯೆಗಳು ಈ ಸಮೀಕ್ಷೆಯಲ್ಲಿ ಕಂಡುಬಂದಿವೆ. 3000 ಮಂದಿಯಲ್ಲಿ 480 ಮಂದಿ ಅಥವಾ ಶೇ 16ರಷ್ಟು ಮಂದಿಮಧುಮೇಹಿಗಳು ಕೊರೊನಾದಿಂದ ಗುಣಮುಖರಾದ ನಂತರ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗಿರುವುದಾಗಿ ತಿಳಿಸಿದ್ದಾರೆ. 840 ಮಂದಿ, ಅಂದರೆ ಶೇ 28ರಷ್ಟು ಜನರಿಗೆ ಅತಿಯಾದ ಸುಸ್ತು, ಆಯಾಸ ಕಾಣಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.

 ಇನ್ನೂ ಏನೇನು ಸಮಸ್ಯೆ ಕಂಡುಬಂದಿದೆ?

ಇನ್ನೂ ಏನೇನು ಸಮಸ್ಯೆ ಕಂಡುಬಂದಿದೆ?

ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ಕೆಮ್ಮು (474 ಮಂದಿ, 15.8%) ಉಸಿರಾಟ ಸಮಸ್ಯೆ (150 ಮಂದಿ, 5%), ಗ್ಯಾಂಗ್ರಿನ್ (10 ಮಂದಿ, 0.33%) ಅಧಿಕ ಒತ್ತಡ (210 ಮಂದಿ, 7%), ಬ್ಲ್ಯಾಕ್ ಫಂಗಸ್ (5, 0.16%) ಮತ್ತು ಮಾನಸಿಕ ಸಮಸ್ಯೆಗಳಾದ ಆತಂಕ, ಉದ್ವೇಗ (120 ಮಂದಿ 4%) ಸಮಸ್ಯೆಗಳು ಕಂಡುಬಂದಿವೆ.

ಕೊರೊನಾ ಸೋಂಕಿನಿಂದ ಮಧುಮೇಹ ಬರುವುದೇ? ತಿಳಿಯಬೇಕಾದ ಸಂಗತಿಕೊರೊನಾ ಸೋಂಕಿನಿಂದ ಮಧುಮೇಹ ಬರುವುದೇ? ತಿಳಿಯಬೇಕಾದ ಸಂಗತಿ

"ಔಷಧವೂ ಪರಿಣಾಮ ಬೀರಬಹುದು"

ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ತಗ್ಗುತ್ತಿದ್ದರೂ, ಆಂಫೊಟೆರಿಸಿನ್ ಬಿ ಔಷಧದಿಂದ ಉಂಟಾಗುವ ಅಡ್ಡಪರಿಣಾಮಗಳಿಂದ ತೊಂದರೆ ಕಂಡುಬರುತ್ತಿದೆ. ಈ ಔಷಧಗಳೂ ಸಮಸ್ಯೆಗೆ ಕಾರಣವಾಗುತ್ತಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಕೊರೊನಾ ಸೋಂಕು ಇನ್ನೂ ಏನೇನು ಸಮಸ್ಯೆಗಳನ್ನು ಉಳಿಸಿ ಹೋಗುತ್ತಿದೆ ಎಂಬುದರ ಕುರಿತು ವೈದ್ಯರು ವಿಶ್ಲೇಷಣೆ ಮುಂದುವರೆಸಿದ್ದಾರೆ.

English summary
Survey done by the All India Institute of Medical Science in Patna has found abnormal rise in blood sugar level in people who were infected with coronavirus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X