ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಶಾಂತ್ ರಜಪೂತ್ ಪ್ರಕರಣ: ಸಿಬಿಐಗೆ ವರದಿ ಸಲ್ಲಿಸಿದ ಏಮ್ಸ್ ಸಮಿತಿ, ಸಾವಿಗೆ ನಿಜವಾದ ಕಾರಣ ಬಹಿರಂಗ ಸಾಧ್ಯತೆ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 29: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಏಮ್ಸ್ ಸಮಿತಿ ತನ್ನ ವರದಿಯನ್ನು ಸಿಬಿಐಗೆ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಈಗ ಸಿಬಿಐ ಏಮ್ಸ್ ವರದಿಯ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ.

ಇದುವರೆಗಿನ ಸಾಕ್ಷ್ಯಗಳ ಆಧಾರದ ಮೇಲೆ ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆ ಎಂದು ನಂಬಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನಲ್ಲಿ ಬೇರೆ ಯಾವುದೇ ಅಂಶಗಳಿವೆಯೇ ಎಂದು ಸಿಬಿಐ ಈಗ ಏಮ್ಸ್ ವರದಿಯನ್ನು ನೋಡಲಿದೆ. ಸಿಬಿಐ ವರದಿಯನ್ನು ಇತರ ಸಾಕ್ಷ್ಯಗಳೊಂದಿಗೆ ಹೊಂದಿಸುತ್ತದೆ.

ಸುಶಾಂತ್ ಸಿಂಗ್ ರಜಪೂತ್ ಸಾವು: ಬಹುನಿರೀಕ್ಷಿತ ವರದಿ ಬಹಿರಂಗಕ್ಕೆ ದಿನ ನಿಗದಿ ಸುಶಾಂತ್ ಸಿಂಗ್ ರಜಪೂತ್ ಸಾವು: ಬಹುನಿರೀಕ್ಷಿತ ವರದಿ ಬಹಿರಂಗಕ್ಕೆ ದಿನ ನಿಗದಿ

ಸುಶಾಂತ್ ಸಾವಿಗೆ ಕಾರಣ ಪತ್ತೆಹಚ್ಚುತ್ತಾ ಏಮ್ಸ್‌ ವರದಿ?

ಸುಶಾಂತ್ ಸಾವಿಗೆ ಕಾರಣ ಪತ್ತೆಹಚ್ಚುತ್ತಾ ಏಮ್ಸ್‌ ವರದಿ?

ಸುಶಾಂತ್ ಸಾವು ಕುರಿತು ಹಲವು ಆಯಾಮಗಳಿಂದ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಡೆಸಿತ್ತು. ಏಮ್ಸ್ ಸಂಸ್ಥೆಗೆ, ವರದಿ ಮತ್ತು ತಮ್ಮ ಅಭಿಪ್ರಾಯವನ್ನು ತಿಳಿಸುವಂತೆ ಈ ಹಿಂದೆ ಸಿಬಿಐ ಸೂಚಿಸಿತ್ತು.

ಮರಣೋತ್ತರ ಪರೀಕ್ಷೆ ಮತ್ತು ಒಳಾಂಗಗಳ ವರದಿಯನ್ನು ಅಧ್ಯಯನ ಮಾಡಲು ಕೇಂದ್ರ ತನಿಖಾ ದಳದ ಕೋರಿಕೆಯ ಮೇರೆಗೆ ಡಾ. ಸುಧೀರ್ ಗುಪ್ತಾ ನೇತೃತ್ವದ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯಲ್ಲಿ ಏಮ್ಸ್‌ನ ವಿಧಿವಿಜ್ಞಾನ ತಂಡ ಮತ್ತು ಸಿಬಿಐ ತಂಡದ ನಡುವೆ ನಡೆಯಿತು.

ಏಮ್ಸ್ ವರದಿ ತನಿಖೆಗೆ ತಿರುವು ಕೊಡಲಿದೆಯೇ?

ಏಮ್ಸ್ ವರದಿ ತನಿಖೆಗೆ ತಿರುವು ಕೊಡಲಿದೆಯೇ?

ಹೌದು, ಏಮ್ಸ್ ಸಮಿತಿಯ ಸದಸ್ಯರು ಮತ್ತು ತಜ್ಞರ ಅಭಿಪ್ರಾಯವನ್ನು ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಿ ತೆಗೆದುಕೊಳ್ಳಲಾಗುವುದು ಮತ್ತು ವೈದ್ಯರು ಪ್ರಾಸಿಕ್ಯೂಷನ್ ಸಾಕ್ಷಿಗಳಾಗಿರುತ್ತಾರೆ ಎಂದು ಮೂಲಗಳು ತಿಳಿಸಿವೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಸಿಬಿಐ ಮೊದಲ ಹೇಳಿಕೆಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಸಿಬಿಐ ಮೊದಲ ಹೇಳಿಕೆ

ಸಿಬಿಐ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ

ಸಿಬಿಐ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ

ಏಮ್ಸ್‌ ಸಮಿತಿ ವರದಿ ಬಂದ ತಕ್ಷಣ ಸಿಬಿಐ ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಏಮ್ಸ್ ಫೋರೆನ್ಸಿಕ್ ತಂಡದ ಮುಖ್ಯಸ್ಥ ಡಾ.ಸುಧೀರ್ ಗುಪ್ತಾ ಹೇಳಿದ್ದಾರೆ. ಫೋಟೋಗಳನ್ನು ನೋಡುವ ಮೂಲಕ ಯಾವುದೇ ನಿರ್ಣಾಯಕ ಅಭಿಪ್ರಾಯವನ್ನು ರಚಿಸಲಾಗುವುದಿಲ್ಲ. ನಮ್ಮ ಅಭಿಪ್ರಾಯವು ಸಾಕ್ಷ್ಯಗಳ ಆಧಾರದ ಮೇಲೆ ಸ್ಪಷ್ಟ ಮತ್ತು ನಿರ್ಣಾಯಕವಾಗಿರುತ್ತದೆ ಎಂದಿದ್ದಾರೆ.

ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದ ಸುಶಾಂತ್

ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದ ಸುಶಾಂತ್

ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಅವರ ಮುಂಬೈ ಫ್ಲ್ಯಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಮುಂಬೈ ಪೊಲೀಸರು ಇದನ್ನು ಆತ್ಮಹತ್ಯೆ ಪ್ರಕರಣ ಎಂದು ಕರೆದಿದ್ದರು. ನಂತರ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲಾಯಿತು. ಸಿಬಿಐ ಇದನ್ನು ಇನ್ನೂ ಆತ್ಮಹತ್ಯೆ ಎಂದು ಪರಿಗಣಿಸುತ್ತಿದೆ.

ವಾಸ್ತವವಾಗಿ, ಕೆಲವರು ಸೋಷಿಯಲ್ ಮೀಡಿಯಾದಲ್ಲಿ , ಟಿವಿ ಚಾನೆಲ್‌ಗಳಲ್ಲಿ ಸುಶಾಂತ್ ಸಿಂಗ್ ಕೊಲ್ಲಲ್ಪಟ್ಟಿರಬಹುದು ಎಂದು ತಿಳಿಸಲಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಸಿಬಿಐ ಎಂಟ್ರಿ ಕೊಟ್ಟಿತು. ಸಿಬಿಐ ಹೊರತಾಗಿ, ಇಡಿ ಮತ್ತು ಎನ್‌ಸಿಬಿ ಸಹ ಸುಶಾಂತ್ ಸಾವಿಗೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಸುತ್ತಿದೆ. ಇಲ್ಲಿಯವರೆಗೆ, ಸುಶಾಂತ್ ಕೊಲ್ಲಲ್ಪಟ್ಟಿರಬಹುದೆಂದು ಯಾವುದೇ ತನಿಖಾ ಸಂಸ್ಥೆ ಯಾವುದೇ ಅನುಮಾನವನ್ನು ವ್ಯಕ್ತಪಡಿಸಿಲ್ಲ. ಎನ್‌ಸಿಬಿ ತನಿಖೆಯು ಸುಶಾಂತ್ ಮಾದಕ ದ್ರವ್ಯಗಳ ಚಟವನ್ನು ಖಂಡಿತವಾಗಿ ಬಹಿರಂಗಪಡಿಸಿದೆ ಮತ್ತು ಆತನ ಮಾದಕವಸ್ತು ವಿತರಣೆಗೆ ಸಂಬಂಧಿಸಿದಂತೆ ಕೆಲವರನ್ನು ಈಗಾಗಲೇ ಬಂಧಿಸಿ ವಿಚಾರಣೆ ಕೂಡ ನಡೆಸಿದೆ.

English summary
The panel of Delhi's prestigious All-India Institute of Medical Sciences has submitted their findings on the death of actor Sushant Singh Rajput case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X