ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ನಡುವೆ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚಳ; ಏಮ್ಸ್ ವೈದ್ಯೆ ಎಚ್ಚರಿಕೆ

|
Google Oneindia Kannada News

ನವದೆಹಲಿ, ಮೇ 19: ದೇಶದಲ್ಲಿ ಕೊರೊನಾ ಎರಡನೇ ಅಲೆ ನಡುವೆ ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್‌ ಫಂಗಸ್ (mucormycosis-ಕಪ್ಪು ಶಿಲೀಂಧ್ರ) ಪ್ರಕರಣಗಳು ಹೆಚ್ಚಾಗುತ್ತಿವೆ. ದಿನೇ ದಿನೇ ಪ್ರಕರಣಗಳು ಏರಿಕೆಯಾಗುತ್ತಿದ್ದು, ಇದರ ಸಂಖ್ಯೆ ಮೂರಂಕಿ ಮೀರುತ್ತಿದೆ ಎಂದು ದೆಹಲಿ ಏಮ್ಸ್‌ ನ್ಯೂರಾಲಜಿ ವಿಭಾಗದ ಪ್ರೊ. ಎಂ.ವಿ. ಪದ್ಮ ಶ್ರೀವಾತ್ಸವ ಆತಂಕ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ದಿನೇ ದಿನೇ ಬ್ಲಾಕ್ ಫಂಗಸ್‌ನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ದಿನನಿತ್ಯ ಸುಮಾರು 20 ಹೊಸ ಪ್ರಕರಣಗಳು ಕಂಡುಬರುತ್ತಿವೆ. ಪ್ರತ್ಯೇಕ ವಾರ್ಡ್ ಕೂಡ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಬ್ಲ್ಯಾಕ್ ಫಂಗಸ್ ಅನ್ನು ನಿರ್ಲಕ್ಷಿಸುವಂತೆಯೇ ಇಲ್ಲ ಎಂದು ಹೇಳಿದ್ದಾರೆ. ಮುಂದೆ ಓದಿ...

ಬ್ಲಾಕ್‌ ಫಂಗಸ್ ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ರಾಜಸ್ಥಾನಬ್ಲಾಕ್‌ ಫಂಗಸ್ ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ರಾಜಸ್ಥಾನ

"ಹೆಚ್ಚಿನ ಸ್ಟೆರಾಯ್ಡ್ ಬಳಕೆಯೂ ಕಾರಣವಾಗಿರಬಹುದು"

ದೆಹಲಿಯ ಶ್ರೀಗಂಗಾ ಆಸ್ಪತ್ರೆಯಲ್ಲಿ ಮೇ 7ರಿಂದ ಇದುವರೆಗೂ ನೂರು ಬ್ಲಾಕ್ ಫಂಗಸ್ ಪ್ರಕರಣಗಳು ದಾಖಲಾಗಿವೆ. 69 ರೋಗಿಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕೊರೊನಾ ಸೋಂಕಿನ ಚಿಕಿತ್ಸೆಗೆ ಹೆಚ್ಚಿನ ಸ್ಟೆರಾಯ್ಡ್‌ಗಳನ್ನು ಬಳಸುತ್ತಿರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಈ ಸಮಸ್ಯೆ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.

"ಮಧುಮೇಹಿಗಳು ಕೊಂಚ ಜಾಗ್ರತೆಯಿಂದಿರಿ"

ಮಧುಮೇಹವಿರುವ ಕೊರೊನಾ ರೋಗಿಗಳು ಈ ಸಮಯದಲ್ಲಿ ಜಾಗ್ರತೆಯಿಂದಿರುವುದು ತುಂಬಾ ಮುಖ್ಯ. ಅವರು ತಮ್ಮ ರಕ್ತದಲ್ಲಿನ ಸಕ್ಕರೆ ಅಂಶದ ಕುರಿತು ನಿಗಾ ವಹಿಸಬೇಕಿದೆ. ಸಕ್ಕರೆ ಅಂಶವನ್ನು ನಿಯಂತ್ರಿಸುವುದು ಅವಶ್ಯಕ. ಕೊರೊನಾದಿಂದ ಗುಣಮುಖರಾಗಿ ಮತ್ತೊಂದು ಸಮಸ್ಯೆಗೆ ತುತ್ತಾಗಬೇಡಿ ಎಂದು ಸಲಹೆ ನೀಡಿದ್ದಾರೆ.

ಬ್ಲ್ಯಾಕ್‌ ಫಂಗಸ್‌ಗೆ ರಾಜ್ಯದ ಆರು ಕಡೆ ಉಚಿತ ಚಿಕಿತ್ಸೆಬ್ಲ್ಯಾಕ್‌ ಫಂಗಸ್‌ಗೆ ರಾಜ್ಯದ ಆರು ಕಡೆ ಉಚಿತ ಚಿಕಿತ್ಸೆ

 ಬ್ಲ್ಯಾಕ್ ಫಂಗಸ್ ಲಕ್ಷಣಗಳೇನು?

ಬ್ಲ್ಯಾಕ್ ಫಂಗಸ್ ಲಕ್ಷಣಗಳೇನು?

ಕಣ್ಣು ಕೆಂಪಾಗುವುದು, ಮೂಗಿನ ಸುತ್ತ ಕೆಂಪಾಗುವುದು, ಜ್ವರ, ತಲೆ ನೋವು, ಕೆಮ್ಮು, ಉಸಿರಾಟದಲ್ಲಿ ತೊಂದರೆ, ರಕ್ತ ವಾಂತಿ ಇವು ಬ್ಲ್ಯಾಕ್ ಫಂಗಸ್‌ನ ಲಕ್ಷಣಗಳು. ಮಧುಮೇಹಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

 ಯಾವ ರಾಜ್ಯಗಳಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳಿವೆ?

ಯಾವ ರಾಜ್ಯಗಳಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳಿವೆ?

ಕರ್ನಾಟಕ, ಉತ್ತರಾಖಂಡ, ತೆಲಂಗಾಣ, ಮಧ್ಯಪ್ರದೇಶ, ಆಂಧ್ರ ಪ್ರದೇಶ, ಹರಿಯಾಣ, ಬಿಹಾರ ರಾಜ್ಯಗಳಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಕಂಡುಬರುತ್ತಿವೆ. ರಾಜಸ್ಥಾನದಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬಂದಿರುವ ಕಾರಣ ಬುಧವಾರ ಬ್ಲ್ಯಾಕ್ ಫಂಗಸ್ ಅನ್ನು ಸಾಂಕ್ರಾಮಿಕ ಸೋಂಕು ಎಂದು ರಾಜಸ್ಥಾನ ಸರ್ಕಾರ ಬುಧವಾರ ಘೋಷಣೆ ಮಾಡಿದೆ.

English summary
Delhi AIIMS neurologist Prof MV Padma Srivastava warns over increasing black fungus cases,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X