ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಇಂಜಿನಿಯರಿಂಗ್ ಕಾಲೇಜುಗಳ ಪಟ್ಟಿ: ದೆಹಲಿ ನಂ 1, ಕರ್ನಾಟಕ ನಂ 4

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 02: ದೇಶದೆಲ್ಲೆಡೆ ಮಾನ್ಯತೆ ಪಡೆಯದೆ ನಡೆಸುತ್ತಿರುವ ನಕಲಿ ಇಂಜಿನಿಯರಿಂಗ್ ಕಾಲೇಜುಗಳ ಪಟ್ಟಿಯನ್ನು ಅಖಿಲ ಭಾರತ ಪರಿಷತ್(ಎಐಸಿಟಿಇ) ಪ್ರಕಟಿಸಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಅವರು ಲೋಕಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರು.

ಭಾರತದಲ್ಲಿ ಸದ್ಯದ ಲೆಕ್ಕದಂತೆ ಸುಮಾರು 277 ನಕಲಿ ಇಂಜಿನಿಯರಿಂಗ್ ಕಾಲೇಜುಗಳಿವೆ. ಈ ಪೈಕಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ 66 ನಕಲಿ ವಿದ್ಯಾಸಂಸ್ಥೆಗಳು, ಇಂಜಿನಿಯರಿಂಗ್ ಹಾಗೂ ತಾಂತ್ರಿಕ ಶಿಕ್ಷಣ ಕೋರ್ಸ್‌ಗಳನ್ನು ನೀಡುತ್ತಿವೆ.

ಎಂಜಿನಿಯರಿಂಗ್ ಕಾಲೇಜುಗಳಿಂದಲೇ ವಿದ್ಯಾರ್ಥಿಗಳ ಹುಡುಕಾಟ, ನಾನಾ ಆಫರ್!ಎಂಜಿನಿಯರಿಂಗ್ ಕಾಲೇಜುಗಳಿಂದಲೇ ವಿದ್ಯಾರ್ಥಿಗಳ ಹುಡುಕಾಟ, ನಾನಾ ಆಫರ್!

ದೆಹಲಿ ನಂತರದ ಸ್ಥಾನದಲ್ಲಿ ತೆಲಂಗಾಣ ಹಾಗೂ ಪಶ್ಚಿಮಬಂಗಾಳದಲ್ಲಿ ಕ್ರಮವಾಗಿ 35 ಹಾಗೂ 27 ನಕಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಹೊಂದಿವೆ. ಕರ್ನಾಟಕದಲ್ಲಿ 23 ಇಂಥ ವಿದ್ಯಾಸಂಸ್ಥೆಗಳಿದ್ದು, ನಾಲ್ಕನೇ ಸ್ಥಾನದಲ್ಲಿದೆ.

AICTE releases list of 277 fake engineering colleges

ಉತ್ತರಪ್ರದೇಶ(22), ಹರ್ಯಾಣ(18), ಮಹಾರಾಷ್ಟ್ರ(16) ಹಾಗೂ ತಮಿಳುನಾಡು(11)ರಾಜ್ಯಗಳು ನಂತರದ ಸ್ಥಾನದಲ್ಲಿವೆ.

ನಕಲಿ ವಿಶ್ವವಿದ್ಯಾಲಯ ಪಟ್ಟಿ ಪ್ರಕಟ, ದೆಹಲಿಯಲ್ಲೇ ಅಧಿಕ ನಕಲಿ ವಿಶ್ವವಿದ್ಯಾಲಯ ಪಟ್ಟಿ ಪ್ರಕಟ, ದೆಹಲಿಯಲ್ಲೇ ಅಧಿಕ

ಅಖಿಲ ಭಾರತ ಪರಿಷತ್(ಎಐಸಿಟಿಇ)ಯಿಂದ ತಾಂತ್ರಿಕ ಶಿಕ್ಷಣ ಬೋಧನೆ ಅನುಮೋದನೆ ಪಡೆಯದೆ, ಇಂಜಿನಿಯರಿಂಗ್ ಕೋರ್ಸ್‌ಗಳನ್ನು ನೀಡುತ್ತಿರುವ ನಿದರ್ಶನಗಳು ಸರಕಾರದ ಗಮನಕ್ಕೆ ಬಂದಿದೆ ಎಂದು ಕೇಂದ್ರ ಸಚಿವ ಸತ್ಯ ಪಾಲ್ ಸಿಂಗ್ ಹೇಳಿದ್ದರು. ಎಐಸಿಟಿಇಯಿಂದ ಅನುಮತಿಯನ್ನು ಪಡೆಯಬೇಕು ಇಲ್ಲದಿದ್ದರೆ, ಶಿಕ್ಷಣ ಸಂಸ್ಥೆ ಮುಚ್ಚಬೇಕು ಎಂದು ಇಲ್ಲವಾದರೆ ಅಂಥ ಸಂಸ್ಥೆ ಮುಚ್ಚಲಾಗುತ್ತದೆ ಎಚ್ಚರಿಕೆ ನೀಡಿದ್ದಾರೆ.

English summary
As many as 277 engineering colleges across the country are functioning without the approval from the All India Council for Technical Education (AICTE). The maximum number of ‘fake colleges’ are functioning in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X