• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಕಲಿಕೆಗೆ ಎಐಸಿಟಿಇ ಅವಕಾಶ

|
Google Oneindia Kannada News

ನವದೆಹಲಿ, ಮೇ 27: ಕನ್ನಡದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಕಲಿಕೆಗೆ ಎಐಸಿಟಿಇ ಅವಕಾಶ ನೀಡಿದೆ. ಕನ್ನಡದ ಜತೆಯಲ್ಲಿ ಹಿಂದಿ, ತಮಿಳು, ಬೆಂಗಾಲಿ, ಗುಜರಾತಿ, ಮಲಯಾಳಂ ಭಾಷೆಗಳಿಗೂ ಕೂಡ ಸಮ್ಮತಿ ದೊರೆತಿದೆ.

ಇದರಿಂದಾಗಿ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಕನಸು ನನಸು ಮಾಡಿಕೊಳ್ಳಲು ಸಹಾಯವಾಗಲಿದೆ, ಸಾಕಷ್ಟು ಮಂದಿಗೆ ಇಂಗ್ಲಿಷ್ ಭಾಷೆಯ ಭಯ ಇತ್ತು, ಈಗ ಅದರಿಂದ ಹೊರಬಂದು ಇನ್ನುಮುಂದೆ ಅವರು ತಮ್ಮ ಪ್ರಾದೇಶಿಕ ಭಾಷೆಯಲ್ಲೇ ಶಿಕ್ಷಣ ಪಡೆಯಲಿದ್ದಾರೆ.

ಕೊರೊನಾ ಸೋಂಕು: ಜೆಇಇ ಅಡ್ವಾನ್ಸ್ಡ್‌ಪರೀಕ್ಷೆ-2021 ಮುಂದೂಡಿಕೆಕೊರೊನಾ ಸೋಂಕು: ಜೆಇಇ ಅಡ್ವಾನ್ಸ್ಡ್‌ಪರೀಕ್ಷೆ-2021 ಮುಂದೂಡಿಕೆ

ಜರ್ಮನಿ, ಫ್ರಾನ್ಸ್, ರಷ್ಯಾ, ಜಪಾನ್, ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಅವರ ಪ್ರಾದೇಶಿಕ ಭಾಷೆಯಲ್ಲೇ ಶಿಕ್ಷಣ ಪಡೆಯಲು ಈಗಾಗಲೇ ಅವಕಾಶವಿದೆ. ಭಾರತದಲ್ಲಿಯೂ ಈ ನಿರ್ಧಾರ ಕೈಗೊಂಡಿರುವುದು ಸಾಕಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

'ನಮಗೆ ದೇಶದ ವಿವಿಧೆಡೆಯಿಂದ 500ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು, ಮುಂದಿನ ವರ್ಷಗಳಲ್ಲಿ 11 ಭಾಷೆಗಳಲ್ಲಿ ಯುಜಿ ಎಂಜಿನಿಯರಿಂಗ್ ಶಿಕ್ಷಣ ನೀಡುವ ಗುರಿ ಹೊಂದಿದ್ದೇವೆ' ಎಂದು ಎಐಸಿಟಿಇ ಚೇರ್‌ಮನ್ ಅನಿಲ್ ಸಹಸ್ರಬುದ್ಧೆ ತಿಳಿಸಿದ್ದಾರೆ.

ಹಾಗೆಯೇ ಉಪನ್ಯಾಸಕರನ್ನು ಕೂಡ ಬದಲಾಯಿಸಬೇಕಿದೆ, ಪ್ರಾದೇಶಿಕ ಭಾಷೆಯಲ್ಲಿ ಪಾಠ ಮಾಡುವಂತಹ ಉಪನ್ಯಾಸಕರ ನೇಮಕವಾಗಬೇಕಿದೆ. ವಿದ್ಯಾರ್ಥಿಗಳು ಯಾವ ಭಾಷೆಯಲ್ಲಿ ಪರೀಕ್ಷೆ ಬರೆಯಲು ಇಷ್ಟ ಪಡುತ್ತಾರೆ ಆ ಭಾಷೆಯ ಆಯ್ಕೆಯ ಸ್ವಾತಂತ್ರ್ಯ ಅವರಿಗಿರಲಿದೆ.

ಕರ್ನಾಟಕ: ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ಸುಳಿವು ನೀಡಿದ ಸರ್ಕಾರಕರ್ನಾಟಕ: ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ಸುಳಿವು ನೀಡಿದ ಸರ್ಕಾರ

ತಮಿಳುನಾಡಿನಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಇಂಗ್ಲಿಷ್ ಅಥವಾ ತಮಿಳು ಯಾವ ಭಾಷೆಯಲ್ಲಿ ಓದಲು ಇಷ್ಟಪಡುತ್ತಾರೆ ಎಂದು ಸಮೀಕ್ಷೆ ನಡೆಸಿದಾಗ ಶೇ.42ರಷ್ಟು ಮಂದಿ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಲು ಉತ್ಸುಕರಾಗಿದ್ದಾರೆ ಎಂಬುದು ತಿಳಿದುಬಂದಿದೆ.

ಎಐಸಿಟಿಇ ಸಾಫ್ಟ್‌ವೇರ್ ಇಂಗ್ಲಿಷ್ ಪುಸ್ತಕಗಳನ್ನು 22 ಭಾಷೆಗಳಲ್ಲಿ ಅನುವಾದ ಮಾಡಲಿದೆ. ಹಾಗಾಗಿ ಈಗ ಪ್ರಸ್ತುತ ಒಪ್ಪಿಗೆ ನೀಡಿರುವ 8 ಭಾಷೆಗಳಲ್ಲಿ ಅನುವಾದ ಸುಲಭವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

English summary
AICTE allowed colleges to offer engineering degree in eight regional Indian languages of kannadda, hindi, bengali, telugu, tamil, gujarat and malayalam languages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X