• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕಸಭೆ: ರಾಹುಲ್ ಗಾಂಧಿ ಮತ್ತೆ ಹಿಂದಿನ ಸಾಲಿನ ಹುಡುಗ

By Srinath
|

ನವದೆಹಲಿ, ಜೂನ್ 5: ಕಳೆದ ತಿಂಗಳು ಭರ್ಜರಿ ಜನಾದೇಶ ಪಡೆದ ಜನಪ್ರತಿನಿಧಿಗಳು ನಿಧಾನವಾಗಿ ತಮ್ಮ ತಮ್ಮ ಸೀಟುಗಳಲ್ಲಿ ಪ್ರತಿಷ್ಠಾಪಿಸುತ್ತಿದ್ದಾರೆ. ಆದರೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಕಾಂಗ್ರೆಸ್ ಪಕ್ಷದ ಬಲ 44ಕ್ಕೆ ಕುಂಠಿತವಾಗಿರುವುದರಿಂದ (ಕಳೆದ ಲೋಕಸಭೆಯಲ್ಲಿ 206 ಇತ್ತು) ಆ ಪಕ್ಷದ ಸಂಸದರು ಸದನದಲ್ಲಿ ಅನಿವಾರ್ಯವಾಗಿ ಹಿಂದಿನ ಸೀಟುಗಳಲ್ಲಿ ಆಸೀನರಾಗಿದ್ದಾರೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬ್ಯಾಕ್ ಬೆಂಚ್ ಹುಡುಗರಾಗಿದ್ದಾರೆ. ಲೋಕಸಭೆಯಲ್ಲಿ ಪಕ್ಷದ ನಾಯಕತ್ವವವನ್ನು ಕರ್ನಾಟಕದ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಟ್ಟುಕೊಟ್ಟ ಬಳಿಕ ರಾಹುಲ್ ಗಾಂಧಿಗೆ ಇದು ಅನಿವಾರ್ಯವಾಗಿದೆ. ಆಡಳಿತ ಪಕ್ಷದ ಸದಸ್ಯರು ಸ್ಪೀಕರ್ ಬಲ ಭಾಗಕ್ಕೆ ಟ್ರೆಷರಿ ಬೆಂಚುಗಳಲ್ಲಿ ಆಸೀನರಾಗುತ್ತಾರೆ.

ರಾಹುಲ್ ಗಾಂಧಿಗೆ ಬ್ಯಾಕ್ ಬೆಂಚ್ ಅಂದ್ರೆ ಬಲು ಇಷ್ಟ:

ಅಮೇಥಿಯ ಸಂಸದ ರಾಹುಲ್ ನಿನ್ನೆ ಮೊದಲ ದಿನ ಹಿಂದುಗಡೆ 9ನೇ ಸಾಲಿನಲ್ಲಿ ಶಶಿ ತರೂರ್ ಅವರೊಂದಿಗೆ ಕುಳಿತಿದ್ದರು. ಅಂದಹಾಗೆ ಹಿಂದಿನ ಲೋಕಸಭೆ ಅವಧಿಯಲ್ಲೂ, ಅವರದೇ ಸರಕಾರವಿದ್ದರೂ, ಮೂರನೆಯ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದರು. (ಖರ್ಗೆ ವಿಪಕ್ಷ ನಾಯಕ: ಸಿದ್ದರಾಮಯ್ಯ ಹಾಫ್ ಖುಷ್!)

ವಿರೋಧ ಪಕ್ಷಗಳಿಗೆ ಮೀಸಲಾದ ಜಾಗದಲ್ಲಿ ಮೊದಲ ಸಾಲಿನಲ್ಲಿ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಎಂ ವೀರಪ್ಪ ಮೊಯ್ಲಿ ಮತ್ತು ಕೆಎಚ್ ಮುನಿಯಪ್ಪ ಅವರು ಆಸೀನರಾಗಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha election results 2014 effect - AICC VP Rahul Gandhi takes Backbench in Lok Sabha. Rahul Gandhi, who is Congress vice president and the Lok Sabha MP from Amethi, was seated in the ninth row along with party colleagues Asrar-ul Haq and Shashi Tharoor. In the 15th Lok Sabha too, Mr Gandhi would sit in the third last row.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more