ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಮ್ಯಾ, ಮೋದಿಯನ್ನು ನಂಬುವುದಿಲ್ಲವಂತೆ: "ಕತ್ತೆ ಬಾಲ ಕುದುರೆ ಜುಟ್ಟು" ಅಂದ್ರು ಟ್ವಿಟ್ಟಿಗರು

|
Google Oneindia Kannada News

Recommended Video

Lok Sabha Elections 2019 : ರಮ್ಯಾಗೆ 'ಕತ್ತೆ ಬಾಲ ಕುದುರೆ ಜುಟ್ಟು' ಅಂದ್ರು ಟ್ವಿಟ್ಟಿಗರು..! | Oneindia Kannada

ಒಂದೆಡೆ ಸೇನೆಯ ಮೇಲೆ ನಮಗೆ ಅಪಾರ ಗೌರವವಿದೆ, ನಂಬಿಕೆಯಿದೆ ಎನ್ನುವ ಕಾಂಗ್ರೆಸ್ ಮುಖಂಡರು, ಇನ್ನೊಂದೆಡೆ, ಉಗ್ರರ ತಲೆಯ ಲೆಕ್ಕವನ್ನು ಕೊಡಿ ಎಂದು ಕೇಳುತ್ತಿದ್ದಾರೆ.

ಕೊಟ್ಟ ಟಾರ್ಗೆಟ್ ಅನ್ನು ಮುಗಿಸಿದ್ದೇವೆ, ಎಷ್ಟು ಉಗ್ರರು ಫಿನಿಷ್ ಆದರು ಎನ್ನುವ ಲೆಕ್ಕ ಕೊಡುವುದು ನಮ್ಮ ಕೆಲಸವಲ್ಲ ಎಂದು ವಾಯುಸೇನಾ ಮುಖ್ಯಸ್ಥರು ಹೇಳಿಕೆ ನೀಡಿದ್ದರೂ, ನೀವು ಏರ್ ಸ್ಟ್ರೈಕ್ ನಲ್ಲಿ ಹೊಡೆದದ್ದು ಮರವನ್ನೋ ಅಥವಾ ಉಗ್ರರನ್ನೋ ಎನ್ನುವ ಹೇಳಿಕೆಯನ್ನು ಕಾಂಗ್ರೆಸ್ ಮುಖಂಡ ಸಿದ್ದು ನೀಡುತ್ತಾರೆ.

ಇದರ ಮಧ್ಯೆ, ಎಐಸಿಸಿ ಜಾಲತಾಣದ ಮುಖ್ಯಸ್ಥೆ ರಮ್ಯಾ, ಪ್ರಧಾನಿ ಮೋದಿಯವರನ್ನು ಟೀಕಿಸುವ ಪರಿಪಾಠ ಮುಂದುವರಿಸಿದ್ದಾರೆ. ನಮಗೆ ಸೇನೆಯ ಮೇಲೆ ನಂಬಿಕೆಯಿದೆ, ನಿಮ್ಮ ಮೇಲಿಲ್ಲ ಎಂದಿದ್ದಾರೆ.

ಹೆಣ ಎಣಿಸುವುದು ನಮ್ಮ ಕೆಲಸವಲ್ಲ, ಸರಕಾರದ್ದು : ಏರ್ ಚೀಫ್ ಮಾರ್ಷಲ್ ಹೆಣ ಎಣಿಸುವುದು ನಮ್ಮ ಕೆಲಸವಲ್ಲ, ಸರಕಾರದ್ದು : ಏರ್ ಚೀಫ್ ಮಾರ್ಷಲ್

ನೀವು ನಮ್ಮ ಹೆಮ್ಮೆಯ ಪ್ರಧಾನಿ ಮೋದಿವರನ್ನು ನಂಬಿದ್ರೆ ಎಷ್ಟು ಬಿಟ್ಟರೆ ಎಷ್ಟು, ಕತ್ತೆ ಬಾಲ ಕುದುರೆ ಜುಟ್ಟು ಅಂದ್ರು ಟ್ವಿಟ್ಟಿಗರು ರಮ್ಯಾಗೆ ಭರ್ಜರಿ ತಿರುಗೇಟು ನೀಡಿದ್ದಾರೆ. ಕೆಲವೊಂದು ಟ್ವೀಟ್ ಸ್ಯಾಂಪಲ್, ಮುಂದೆ ಓದಿ..

ಮೋದಿ ಇಂದು ಬರುತ್ತಾನೆ, ನಾಳೆ ಹೋಗುತ್ತಾನೆ, ಸೈನಿಕರನ್ನು ದಾರಿಗೆ ತರಬೇಡಿ

ಮೋದಿ ಇಂದು ಬರುತ್ತಾನೆ, ನಾಳೆ ಹೋಗುತ್ತಾನೆ, ಸೈನಿಕರನ್ನು ದಾರಿಗೆ ತರಬೇಡಿ

ಇತ್ತೀಚಿನ ದಿನಗಳಲ್ಲಿ ಮೋದಿಯವರ ಭಾಷಣವನ್ನು ಅವಲೋಕಿಸುವುದಾದರೆ ಒಂದು ಮಾತನ್ನು ಪ್ರಧಾನಿ ಹೇಳುತ್ತಿರುತ್ತಾರೆ. 'ನೀವು ನನ್ನನ್ನು ದ್ವೇಷಿಸಿ, ಮೋದಿ ಇಂದು ಬರುತ್ತಾನೆ, ನಾಳೆ ಹೋಗುತ್ತಾನೆ. ಆದರೆ, ನನ್ನ ಮೇಲಿನ ದ್ವೇಷದಿಂದ, ದೇಶದ ಹೆಮ್ಮೆಯ ಸೈನಿಕರನ್ನು ದಾರಿಗೆ ತರಬೇಡಿ, ನಾನು ನಿಮ್ಮಲ್ಲಿ ಮಾಡುತ್ತಿರುವ ಕಳಕಳಿಯ ಮನವಿ' ಇದು ಮೋದಿಯವರ ಇತ್ತೀಚಿನ ಎಲ್ಲಾ ಸಾರ್ವಜನಿಕ ಸಭೆಯಲ್ಲಿ ಹೇಳುವ ಮಾತು.

ಏರ್ ಸ್ಟ್ರೈಕ್ ನಲ್ಲಿ ನೀವು ಬೀಳಿಸಿದ್ದು ಮರವನ್ನೋ, ಉಗ್ರರನ್ನೋ? ಸಿಧು ಪ್ರಶ್ನೆ ಏರ್ ಸ್ಟ್ರೈಕ್ ನಲ್ಲಿ ನೀವು ಬೀಳಿಸಿದ್ದು ಮರವನ್ನೋ, ಉಗ್ರರನ್ನೋ? ಸಿಧು ಪ್ರಶ್ನೆ

ಸೇನೆ ದಾಳಿ ನಡೆಸಿದ್ದು, ಮರಗಳನ್ನು ಉರುಳಿಸುವುದಕ್ಕಾ, ಉಗ್ರರನ್ನು ಉರುಳಿಸುವುದಕ್ಕಾ?

ಸೇನೆ ದಾಳಿ ನಡೆಸಿದ್ದು, ಮರಗಳನ್ನು ಉರುಳಿಸುವುದಕ್ಕಾ, ಉಗ್ರರನ್ನು ಉರುಳಿಸುವುದಕ್ಕಾ?

ಸರ್ಜಿಕಲ್ ಸ್ಟ್ರೈಕ್ - 2 ನಂತರ ವಿರೋಧ ಪಕ್ಷದ ಮುಖಂಡರು, ಒಂದೇ ಸಮನೆ ಬಿಜೆಪಿ ವಿರುದ್ದ ತಿರುಗಿಬೀಳುತ್ತಿದ್ದಾರೆ. ಈ ಹಿಂದೆ ಕೂಡಾ ಇದೇ ಕೆಲಸವನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಮಾಡಿದ್ದವು. ಆದರೆ, ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿದ್ದು ನೀಡಿದ ಹೇಳಿಕೆ, ಸೈನಿಕರ ಸ್ವಾಭಿಮಾನಕ್ಕೆ ಪೆಟ್ಟು ಬೀಳುವಂತದ್ದು. "ಭಾರತೀಯ ವಾಯಸೇನೆ ದಾಳಿ ನಡೆಸಿದ್ದು, ಮರಗಳನ್ನು ಉರುಳಿಸುವುದಕ್ಕಾ ಅಥವಾ ಉಗ್ರರನ್ನು ಉರುಳಿಸುವುದಕ್ಕಾ?" ಎಂದು ಸಿಧು ಪ್ರಶ್ನಿಸಿದ್ದರು.

ಭಾರತೀಯ ವಾಯು ಸೇನೆ, ನೌಕಾ ಸೇನೆ ಮುಖ್ಯಸ್ಥರಿಗೆ ಝೆಡ್-ಪ್ಲಸ್ ಭದ್ರತೆ ಭಾರತೀಯ ವಾಯು ಸೇನೆ, ನೌಕಾ ಸೇನೆ ಮುಖ್ಯಸ್ಥರಿಗೆ ಝೆಡ್-ಪ್ಲಸ್ ಭದ್ರತೆ

ಎಲ್ಲಾ ವಿಚಾರದಲ್ಲೂ ಸುಳ್ಳು ಹೇಳಿಕೊಂಡು ಬಂದಿದ್ದೀರಾ ಎನ್ನುವ ಟ್ವೀಟ್

ನಮಗೆ ಸೇನೆಯ ಮೇಲೆ ನಂಬಿಕೆಯಿದೆ, ಅವರ ಬಗ್ಗೆ ಹೆಮ್ಮೆಯೂ ಇದೆ. ಆದರೆ ನಾವು ನಿಮ್ಮನ್ನು ನಂಬುವುದಿಲ್ಲ. ಸ್ವಾತಂತ್ರ್ಯಾನಂತರ ಸೇನೆ ಉತ್ತಮ ಟ್ರ್ಯಾಕ್ ರೆಕಾರ್ಡ್ ಅನ್ನು ಹೊಂದಿದೆ, ದೇಶಕ್ಕಾಗಿ ಹಲವು ಯುದ್ದವನ್ನೂ ಗೆದ್ದಿದೆ. ಇನ್ನೊಂದು ಕಡೆ ನೀವು, ಎಲ್ಲಾ ವಿಚಾರದಲ್ಲೂ ಸುಳ್ಳು ಹೇಳಿಕೊಂಡು ಬಂದಿದ್ದೀರಾ ಎನ್ನುವ ಟ್ವೀಟ್ ಅನ್ನು ರಮ್ಯಾ ಮಾಡಿದ್ದರು.

ಪಾಕಿಸ್ತಾನಕ್ಕೆ ಹೋಗಿ ಶರೀಫ್ ಅವರನ್ನು ಆಲಂಗಿಸಿ, ಬಿರಿಯಾನಿ ತಿಂದು ಬಂದ್ರಿ

ಇದಾದ ಮೇಲೆ ಇನ್ನೊಂದು ಟ್ವೀಟ್ ಮಾಡಿರುವ ರಮ್ಯಾ, 2014ರ ಚುನಾವಣೆಯ ವೇಳೆ ಉಗ್ರರನ್ನು ಮಟ್ಟಹಾಕುವುದಾಗಿ ಹೇಳಿದ್ದಿರಿ. ಆದರೆ, ಪಾಕಿಸ್ತಾನಕ್ಕೆ ಹೋಗಿ ಶರೀಫ್ ಅವರನ್ನು ಆಲಂಗಿಸಿ, ಬಿರಿಯಾನಿ ತಿಂದು ಬಂದ್ರಿ. ಈ ಬಾರಿ ಯಾಕೆ ನಾವು ನಿಮ್ಮನ್ನು ನಂಬಬೇಕು. ಅಪನಗದೀಕರಣದಿಂದ ಉಗ್ರಕೃತ್ಯ ನಿಲ್ಲುತ್ತದೆ ಎಂದು ಹೇಳಿದ್ರಿ, ಅದೂ ಆಗಲಿಲ್ಲ. ಈಗ ಏರ್ ಸ್ಟ್ರೈಕ್ ನಿಂದ ಎಲ್ಲಾ ಉಗ್ರರು ಹತರಾದರೆ, ಅದೂ ಇಲ್ಲ - ರಮ್ಯಾ ಮಾಡಿರುವ ಟ್ವೀಟ್.

ಮೋದಿ ಎಲ್ಲಾ ಸುಳ್ಳು ಹೇಳುತ್ತಾರೆಂದರೆ, ಅದನ್ನೂ ಪ್ರೂವ್ ಮಾಡಿ

ಮೋದಿ ಎಲ್ಲಾ ಸುಳ್ಳು ಹೇಳುತ್ತಾರೆಂದರೆ, ಅದನ್ನೂ ಪ್ರೂವ್ ಮಾಡಿ

ಮೊದಲನೇ ಸರ್ಜಿಕಲ್ ಸ್ಟ್ರೈಕ್ ನಡೆದಾಗ ಸೇನೆಯೇ ಎಲ್ಲಾ ಹೇಳಿಕೆಯನ್ನು ನೀಡಿತ್ತು. ಆದರೂ, ಸಾಕ್ಷಿ ಕೇಳಿದವರು ನೀವು, ಈಗ ಸೇನೆಯ ಮೇಲೆ ನಂಬಿಕೆಯಿದೆ ಎಂದು ಹೇಳುತ್ತಿದ್ದೀರಾ? ಮೋದಿ ಎಲ್ಲಾ ಸುಳ್ಳು ಹೇಳುತ್ತಾರೆಂದರೆ, ಅದನ್ನೂ ಪ್ರೂವ್ ಮಾಡುವ ತಾಕತ್ ನಿಮಗ್ಯಾಕೆ ಇಲ್ಲ ಎನ್ನುವ ಟ್ವೀಟ್.

English summary
AICC Social Media head Divya Spandana alias Ramya said, they will not believe PM Modi, but they will believe Indian Force. Twitterite said, who cares for your believing or not believing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X