ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಎಂಬುದು ದೇಶದ ಜನರ ಧ್ವನಿ : ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಮಾರ್ಚ್ 18 : 'ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅಧಿಕಾರಕ್ಕಾಗಿ ಕೌರವರಂತೆ ಹೋರಾಟ ಮಾಡುತ್ತಾರೆ. ಕಾಂಗ್ರೆಸ್ ಪಾಂಡವರಂತೆ ಸತ್ಯಕ್ಕಾಗಿ ಹೋರಾಟ ಮಾಡುತ್ತದೆ' ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ನವದೆಹಲಿಯ ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ಕಾಂಗ್ರೆಸ್ ಪಕ್ಷದ 84ನೇ ಮಹಾಧಿವೇಶನ ನಡೆಯುತ್ತಿದೆ. ಅಧಿವೇಶನದ ಕೊನೆಯ ದಿನವಾದ ಭಾನುವಾರ ರಾಹುಲ್ ಗಾಂಧಿ ಅವರು ಸಮಾರೋಪ ಭಾಷಣ ಮಾಡಿದರು.

ಇದು ಹೊಸ ಅಧ್ಯಾಯದ ಆರಂಭ, ಮಹಾಧಿವೇಶನದಲ್ಲಿ ಸೋನಿಯಾ ರಣಕಹಳೆಇದು ಹೊಸ ಅಧ್ಯಾಯದ ಆರಂಭ, ಮಹಾಧಿವೇಶನದಲ್ಲಿ ಸೋನಿಯಾ ರಣಕಹಳೆ

AICC President Rahul Gandhi addresses Congress Plenary Session highlights

ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶಗಳು ಇಲ್ಲಿವೆ...

Newest FirstOldest First
5:26 PM, 18 Mar

ಗೌರಿ ಲಂಕೇಶ್, ಎಂ.ಎಂ.ಕಲಬುರಗಿ ಹತ್ಯೆ
5:25 PM, 18 Mar

ಜಿಎಸ್‌ಟಿ ಬಗ್ಗೆ ಸಂಸತ್‌ನಲ್ಲಿ ಪ್ರಶ್ನಿಸಿದಾಗ ಪ್ರಧಾನಿಗಳು ನಮ್ಮ ಗಮನ ಬೇರೆ ಕಡೆ ಸೆಳೆದರು. ಗಬ್ಬರ್ ಸಿಂಗ್ ಟ್ಯಾಕ್ಸ್ ಬಗ್ಗೆ ಮಾತನಾಡಲು ಅವರು ಸಿದ್ಧರಿಲ್ಲ
5:23 PM, 18 Mar

ಭಾರತ ದೇಶ ಸುಳ್ಳನ್ನು ನಂಬಲಿದೆಯೇ?, ಅಧಿಕಾರ ಮತ್ತು ಭಯದಿಂದಾಗಿ ಇಂದು ದೇಶದಲ್ಲಿ ಬಲವಂತದ ಮತಾಂತರ ಆಗುತ್ತಿದೆ.
5:20 PM, 18 Mar

ಬಿಜೆಪಿಯಂತೆ ಕಾಂಗ್ರೆಸ್ ಪಕ್ಷ ಎಂದಿಗೂ ಇರುವುದಿಲ್ಲ.ಕೊಲೆ ಪ್ರಕರಣದಲ್ಲಿ ಆರೋಪಿಯಾದವನನ್ನು ಪಕ್ಷದ ಅಧ್ಯಕ್ಷ ಎಂದು ಮಾಡಲಾಗಿದೆ. ದೇಶದ ಹಲವಾರು ಜನರು ಇದನ್ನು ಒಪ್ಪಿಕೊಂಡಿದ್ದಾರೆ.
5:16 PM, 18 Mar

ಬಿಜೆಪಿ ದೇಶದಲ್ಲಿ ಭಯವನ್ನು ಬಿತ್ತುವ ಕೆಲಸವನ್ನು ಮಾಡುತ್ತಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ನ್ಯಾಯಕ್ಕಾಗಿ ಜನರ ಮುಂದೆ ಬಂದರು.
5:12 PM, 18 Mar

ಜನರ ಕೈಯಲ್ಲಿ ಉದ್ಯೋಗವಿಲ್ಲ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಮೋದಿ ಜಿ ಯೋಗ ಮಾಡೋಣ ಬನ್ನಿ ಎಂದು ಹೇಳುತ್ತಾರೆ.
5:08 PM, 18 Mar

ನಾವು ಜನಗತ್ತಿನಲ್ಲಿ ಅತ್ಯಂತವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿದ್ದೇವೆ. ಆದರೆ, ದೇಶದ ಲಕ್ಷಾಂತರ ಯುವಕರು ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ.
Advertisement
5:07 PM, 18 Mar

ಬಿಜೆಪಿ ಸಂಘಟನೆಯ ಧ್ವನಿ, ಕಾಂಗ್ರೆಸ್ ಪಕ್ಷದ್ದು ದೇಶದ ಧ್ವನಿ. ಕಾಂಗ್ರೆಸ್ ಪಕ್ಷದ ಸತ್ಯಕ್ಕಾಗಿದೆ. ಬೇರೆ ಎಲ್ಲಾ ಪಕ್ಷಗಳಿಗಿಂತ ಹೆಚ್ಚಿನ ಇತಿಹಾಸವನ್ನು ಪಕ್ಷ ಹೊಂದಿದೆ.

English summary
The All India Congress Committee (AICC) president Rahul Gandhi addressed Congress Plenary Session on Sunday, March 18, 2018. Here are the highlights of the Rahul Gandhi speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X