ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಸೋನಿಯಾ ಗಾಂಧಿ ಆರೋಗ್ಯಸ್ಥಿತಿ ಬಗ್ಗೆ ಕಾಂಗ್ರೆಸ್ ಅಧಿಕೃತ ಪ್ರಕಟಣೆ

|
Google Oneindia Kannada News

ನವದೆಹಲಿ, ಜೂನ್ 17: ಕೋವಿಡ್ ಸೋಂಕಿಗೊಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಸೋನಿಯಾ ಗಾಂಧಿ ಅವರ ಅರೋಗ್ಯದ ಬಗ್ಗೆ ಎಐಸಿಸಿ ಇಂದು ಶುಕ್ರವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಅವರ ಶ್ವಾಸನಾಳದ ಕೆಳಭಾಗದಲ್ಲಿ ಫಂಗಲ್ ಇನ್ಫೆಕ್ಷನ್ ಆಗಿದೆ. ಅವರಲ್ಲಿ ಕೋವಿಡೋತ್ತರ ರೋಗಲಕ್ಷಣಗಳು ಕಾಣಿಸಿವೆ ಎಂದು ಎಐಸಿಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸೋನಿಯಾ ಗಾಂದಿ ಅವರಿಗೆ ಜೂನ್ 2ರಂದು ಕೋವಿಡ್ ಸೋಂಕು ತಗುಲಿತ್ತು. ಮೂಗಿನಲ್ಲಿ ವಿಪರೀತ ರಕ್ತ ಸೋರತೊಡಗಿದ ಬಳಿಕ ಜೂನ್ 12ರಂದು ನವದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಫಂಗಲ್ ಸೋಂಕೂ ಇರುವುದು ಪತ್ತೆಯಾಗಿತ್ತು. ಪಂಗಸ್ ಸೋಂಕಿಗೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇತರ ಪೋಸ್ಟ್-ಕೋವಿಡ್ ರೋಗಲಕ್ಷಣಗಳೂ ಇದ್ದು ಅವಕ್ಕೂ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯಸ್ಥಿತಿಯ ಮೇಲೆ ನಿಗಾ ಇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಮುಖಂಡ ಮತ್ತು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನಿನ್ನೆ ಗುರುವಾರ ರಾತ್ರಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಆರೋಗ್ಯ ವಿಚಾರಿಸಲು ಗಂಗಾ ರಾಮ್ ಅಸ್ಪತ್ರೆಗೆ ಭೇಟಿ ನೀಡಿದ್ದರು. ಇಡೀ ರಾತ್ರಿ ರಾಹುಲ್ ಗಾಂಧಿ ಆಸ್ಪತ್ರೆಯಲ್ಲಿಯೇ ಇದ್ದರೆನ್ನಲಾಗಿದೆ.

AICC Official Statement on Sonia Gandhi Health Condition

ಪ್ರಿಯಾಂಕಾ ಗಾಂಧಿ ಕೂಡ ಜೂನ್ 13ರಿಂದಲೂ ಆಸ್ಪತ್ರೆಯಲ್ಲಿ ತಮ್ಮ ತಾಯಿಯ ಬಳಿಯೇ ಇದ್ದಾರೆ. ಇದೇ ಭಾನುವಾರದಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ ಹೇಳಿಕೆ ನೀಡಿ, ಸೋನಿಯಾ ಗಾಂಧಿ ಆರೋಗ್ಯಸ್ಥಿತಿ ಉತ್ತಮವಾಗಿದ್ದು ಅವರನ್ನು ಕೆಲ ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದಿದ್ದರು.

ಸೋನಿಯಾ ಗಾಂಧಿ ಅವರು ನ್ಯಾಷನಲ್ ಹೆರಾಲ್ಡ್ ಹಗರಣ ಸಂಬಂಧ ಜೂನ್ ೮ರಂದು ಇಡಿ ವಿಚಾರಣೆಗೆ ಹಾಜರಾಗಬೇಕಿತ್ತು. ಒಂದು ವಾರ ಮುಂಚೆ ಅವರಿಗೆ ಕೋವಿಡ್ ಸೋಂಕು ತಗುಲಿದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲಾಗಿದೆ. ಇದೀಗ ಜೂನ್ 23ರಂದು ವಿಚಾರಣೆಗೆ ಹಾಜರಾಗಬೇಕೆಂದು ಸೋನಿಯಾ ಗಾಂಧಿಗೆ ಇಡಿ ಸಮನ್ಸ್ ನೀಡಿದೆ.

AICC Official Statement on Sonia Gandhi Health Condition

Recommended Video

ಸರ್ಕಾರ ಬೀಳಿಸೋಕೆ ಸಿದ್ದು ಮಾಸ್ಟರ್ ಪ್ಲಾನ್ ರೆಡಿ! | OneIndia Kannada

ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಈಗಾಗಲೇ ಮೂರು ದಿನ ವಿಚಾರಣೆ ನಡೆಸಿದೆ. ಇಂದು ಶುಕ್ರವಾರವೂ ಅವರ ವಿಚಾರಣೆ ನಡೆಯಬೇಕಿತ್ತು. ಸೋನಿಯಾ ಗಾಂಧಿ ಆರೋಗ್ಯದ ವಿಚಾರವಾಗಿ ರಾಹುಲ್ ಗಾಂಧಿ ವಿಚಾರಣೆ ಮುಂದೂಡಲು ಮಾಡಿಕೊಂಡ ಮನವಿಯನ್ನು ಇಡಿ ತನಿಖಾಧಿಕಾರಿಗಳು ಪುರಸ್ಕರಿಸಿದ್ಧಾರೆ. ಜೂನ್ 20ರಂದು ಅವರ ವಿಚಾರಣೆಯನ್ನು ಮುಂದೂಡಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
AICC has officially released a statement on health status of Sonia Gandhi, who was admitted to Ganga Ram Hospital due to post covid complications and fungal infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X