ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್: ಚುನಾವಣೆ ಮುನ್ನಾದಿನ ಮನೆಮನೆಗೆ ಡ್ರಗ್ಸ್ ಸರಬರಾಜು!

ಮತದಾನದ (ಫೆಬ್ರವರಿ 4) ಮುನ್ನಾದಿನವಾದ ಗುರುವಾರ, ಗುರುದಾಸ್ ಪುರ ಹಾಗೂ ಮತ್ತಿತರ ನಗರಗಳಲ್ಲಿ ಡ್ರಗ್ಸ್ ಗಳನ್ನು ಮನೆಮನೆಗೇ ಸರಬರಾಜು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

|
Google Oneindia Kannada News

ನವದೆಹಲಿ, ಫೆಬ್ರವರಿ 4: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಂಜಾಬ್ ನಲ್ಲಿ ನಾನಾ ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ರೀತಿಯ ಕಸರತ್ತನ್ನು ಆರಂಭಿಸಿರುವುದರ ಬೆನ್ನಿಗೇ ಈಗಾಗಲೇ ಆ ರಾಜ್ಯದಲ್ಲಿ ಸಾಮಾಜಿಕ ಪೀಡೆಯಾಗಿ ಪರಿಣಿಮಿಸಿರುವ ಡ್ರಗ್ಸ್ ಮಾಫಿಯಾ ಸಹ ತಾಂಡವವಾಡಲು ಶುರು ಮಾಡಿದೆ.

ಮತದಾನದ (ಫೆಬ್ರವರಿ 4) ಮುನ್ನಾದಿನವಾದ ಗುರುವಾರ, ಗುರುದಾಸ್ ಪುರ ಹಾಗೂ ಮತ್ತಿತರ ನಗರಗಳಲ್ಲಿ ಡ್ರಗ್ಸ್ ಗಳನ್ನು ಮನೆಮನೆಗೇ ಸರಬರಾಜು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾತನಾಡಿರುವ ಗುರುದಾಸ್ ಪುರದ ಆಫೀಮು ವ್ಯಸನಿಯೊಬ್ಬ ಪೈಸೆ ಖರ್ಚಿಲ್ಲದೇ ತನ್ನ ಮನೆಗೆ ನೇರವಾಗಿ ಡ್ರಗ್ಸ್ ಬಂದು ಬಿದ್ದಿರುವುದಕ್ಕೆ ಭಾರೀ ಸಂತಸ ವ್ಯಕ್ತಪಡಿಸಿದ್ದಾನೆ.

Ahead Of Punjab Voting, Drugs Being Home-Delivered

"ಯಾರೋ ಅಜ್ಞಾತ ವ್ಯಕ್ತಿಗಳು ಮನೆ ಬಾಗಿಲಿಗೆ ಬಂದು ಗಣನೀಯ ಪ್ರಮಾಣಲ್ಲಿ ಆಫೀಮು ತಂದಿಟ್ಟು ಹೋಗಿದ್ದಾರೆ. ಇದು ನನ್ನ ಪಾಲಿನ ಸುಕೃತ (!) ಇಂಥ ಉಪಯೋಗಗಳು ಇವೆ ಎಂದಾದರೆ, ಪಂಜಾಬ್ ನಲ್ಲಿ ಪ್ರತಿ ತಿಂಗಳೂ ಚುನಾವಣೆ ನಡೆಯಲಿ'' ಎಂದು ಹಾರೈಸಿದ್ದಾನೆ ಆ ಪುಣ್ಯಾತ್ಮ.

ಇದಿಷ್ಟೇ ಅಲ್ಲ, ಚುನಾವಣೆ ಹಿನ್ನೆಲೆಯಲ್ಲಿ ಕ್ಯಾಂಪೇನ್ ಹೆಸರಿನಲ್ಲಿ ಮದ್ಯದ ಬಾಟಲಿಗಳು, ಹಣ, ಉಡುಗೊರೆಗಳೂ ಎಗ್ಗಿಲ್ಲದಂತೆ ಬಿಕರಿಯಾಗಿವೆ ಎಂದು ಹೇಳಲಾಗಿದೆ.

ಇವುಗಳನ್ನು ಹತ್ತಿಕ್ಕಲು ಪೊಲೀಸರು, ಚುನಾವಣಾ ಭದ್ರತೆಗೆ ಆಗಮಿಸಿರುವ ಅರೆೇಸೇನಾ ಪಡೆಯ ಯೋಧರೂ ಬಹುವಾಗಿ ಶ್ರಮಿಸಿದ್ದರೂ ಡ್ರಗ್ಸ್ ಸರಬರಾಜು ಜಾಲವನ್ನು ಸಂಪೂರ್ಣವಾಗಿ ಹಕ್ಕಿಕ್ಕಲು ಸಾಧ್ಯವಾಗಿಲ್ಲ. ಅಲ್ಲಿನ ಜನತೆಯೇ ಡ್ರಗ್ಸ್ ಮಾಫಿಯಾಕ್ಕೆ ಬೆಂಬಲ ನೀಡುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಅಂದಹಾಗೆ, ಕಳೆದ ನಾಲ್ಕು ವಾರಗಳಲ್ಲಿ ಜಲಂಧರ್, ಗುರುದಾಸ್ ಪುರಗಳ ಹಲವೆಡೆ ದಾಳಿ ನಡೆಸಿರುವ ಭದ್ರತಾ ಪಡೆಗಳು ಸುಮಾರು 2.63 ಟನ್ ಗಳಷ್ಟು ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.

English summary
While inducing voters with household appliances, alcohol or cash is widespread in elections, electoral officials say candidates in Punjab try to woo addicts with free drugs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X