ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇದಾರನಾಥದಲ್ಲಿ 180 ಕೋಟಿ ರೂ ಮೌಲ್ಯ ಹಲವು ಯೋಜನೆಗಳಿಗೆ ಮೋದಿ ಚಾಲನೆ

|
Google Oneindia Kannada News

ರುದ್ರಪ್ರಯಾಗ್, ನವೆಂಬರ್ 3: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇನ್ನೆರೆಡೇ ದಿನಗಳಲ್ಲಿ ಕೇದಾರನಾಥಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಹಿಂದೂಗಳ ಪವಿತ್ರ ಯಾತ್ರಾ ಸ್ಥಳದಲ್ಲಿ ಭರದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ನವೆಂಬರ್ 5ರಂದು ಕೇದಾರನಾಥಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಕೇದಾರನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ತದನಂತರದಲ್ಲಿ ಶ್ರೀ ಆದಿ ಶಂಕರಾಚಾರ್ಯ ಸಮಾಧಿ ಉದ್ಘಾಟನೆ ಮತ್ತು ಆದಿ ಶಂಕರಾಚಾರ್ಯದ ಮೂರ್ತಿ ಅನಾವರಣಗೊಳಿಸಲಿದ್ದಾರೆ.

 6 ತಿಂಗಳ ನಂತರ ಬಾಗಿಲು ತೆರೆದ ಕೇದಾರನಾಥ ದೇಗುಲ; ಆನ್‌ಲೈನ್‌ನಲ್ಲೇ ದರ್ಶನ 6 ತಿಂಗಳ ನಂತರ ಬಾಗಿಲು ತೆರೆದ ಕೇದಾರನಾಥ ದೇಗುಲ; ಆನ್‌ಲೈನ್‌ನಲ್ಲೇ ದರ್ಶನ

ಉತ್ತರಾಖಂಡದಲ್ಲಿ ಬದ್ರಿನಾಥ್, ಕೇದಾರನಾಥ, ಯಮುನೋತ್ರಿ ಹಾಗೂ ಗಂಗೋತ್ರಿ ಸೇರಿದಂತೆ ಹಿಂದೂ ಪವಿತ್ರ ದೇವಾಲಯಗಳಿಗೆ ಪ್ರತಿವರ್ಷ ಸಾವಿರಾರು ಭಕ್ತಾದಿಗಳು ಪ್ರವಾಸ ಮಾಡುತ್ತಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯದ ಅಭಿವೃದ್ಧಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಆಶ್ವಾಸನೆ ನೀಡಿತ್ತು. ಇದರ ಮಧ್ಯೆ ಶುಕ್ರವಾರ ಕೇದಾರನಾಥಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಲಿದ್ದಾರೆ.

Ahead of PM Modis visit on Nov 5, Preparations in full swing in Kedarnath

ಕೇದಾರನಾಥ ಅಭಿವೃದ್ಧಿ ಬಗ್ಗೆ ಭಕ್ತರ ಮಾತು:

2013ರ ನಂತರ ಕೇದಾರನಾಥ ಪ್ರದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕೇದಾರನಾಥ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೋಟೆಲ್ ಅನ್ನು ತೆರೆಯುವುದು ಬಹುಮುಖ್ಯವಾಗಿದೆ ಎಂದು ಭಕ್ತರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2013ರ ನಂತರ ಉತ್ತರಾಖಂಡದಲ್ಲಿ ಅಭಿವೃದ್ಧಿ:

"ನಾನು ಪ್ರತಿವರ್ಷ 2011ರಿಂದ ಕೇದಾರನಾಥಕ್ಕೆ ಪ್ರವಾಸ ಬರುತ್ತೇನೆ. 2013ರಿಂದ ಇಲ್ಲಿ ನಿರಂತರವಾಗಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಜನರಿಗೆ ಉದ್ಯೋಗವೂ ಸಿಗುತ್ತಿದೆ," ಎಂದು ಮತ್ತೊಬ್ಬ ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

180 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿಚಾಲನೆ:

ಉತ್ತರಾಖಂಡಕ್ಕೆ ನವೆಂಬರ್ 5ರಂದು ಭೇಟಿ ನೀಡಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 180 ಕೋಟಿ ರೂಪಾಯಿ ಮೌಲ್ಯದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಚಾಲನೆ ನೀಡಲಿದ್ದಾರೆ. ಸಂಗಮ್ ಘಾಟ್ ಪುನರ್ ಅಭಿವೃದ್ಧಿ, ಪ್ರಾಥಮಿಕ ಚಿಕಿತ್ಸೆ ಮತ್ತು ಪ್ರವಾಸಿ ಸೌಲಭ್ಯ ಕೇಂದ್ರ, ಆಡಳಿತ ಕಚೇರಿ ಮತ್ತು ಆಸ್ಪತ್ರೆ, ಎರಡು ಅತಿಥಿ ಗೃಹ, ವಿಚಾರಣೆ ಕೇಂದ್ರ, ಮಂದಾಕಿನಿ ಅಷ್ಟಪಥ ಸಾಲು ನಿರ್ವಹಣೆ, ಮಳೆ ನಿರಾಶ್ರಿತರ ಕೇಂದ್ರ, ಸರಸ್ವತಿ ನಾಗರಿಕ ಸೌಕರ್ಯ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ಸರಸ್ವತಿ ಅಷ್ಟಪಥದಲ್ಲಿ ನಡೆಯುತ್ತಿರುವ ಯೋಜನೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಪರಿಶೀಲನೆ ನಡೆಸಲಿದ್ದಾರೆ. ಇದರ ಜೊತೆಗೆ ಈಗಾಗಲೇ ಪೂರ್ಣಗೊಂಡ ಮಂದಾಕಿನಿ ತಡೆಗೋಡೆ ಅಷ್ಟಪಥ, ಸರಸ್ವತಿ ತಡೆಗೋಡೆ ಅಷ್ಟಪಥ, ಮಂದಾಕಿನಿ ನದಿಯ ಮೇಲೆ ತೀರ್ಥ ಪುರೋಹಿತ್ ಮನೆ ಮತ್ತು ಗರುಡ ಚಟ್ಟಿ ಸೇತುವೆ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

Recommended Video

45 ವರ್ಷ ಸಿನಿ ಪಯಣ, 46 ವರ್ಷ ಬದುಕಿನ ಪಯಣ:ಅಪ್ಪು ಲೈಫ್ ಸ್ಟೋರಿ | Oneindia Kannada

English summary
Ahead of PM Modi's visit on Nov 5, Preparations in full swing in Kedarnath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X