ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4ನೇ ಬಾರಿ ಐತಿಹಾಸಿಕ ಮಧ್ಯರಾತ್ರಿ ಅಧಿವೇಶನಕ್ಕೆ ಸಜ್ಜಾದ ಸೆಂಟ್ರಲ್ ಹಾಲ್

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜೂನ್ 30: ಭಾರತದ ಇತಿಹಾಸದಲ್ಲಿ ಕೇವಲ 4ನೇ ಬಾರಿಗೆ ಐತಿಹಾಸಿಕ ಮಧ್ಯರಾತ್ರಿಯ ಅಧಿವೇಶನಕ್ಕೆ ಸಂಸತ್ ಭವನದ ಸೆಂಟ್ರಲ್ ಹಾಲ್ ಸಾಕ್ಷಿಯಾಗುತ್ತಿದೆ. ಮಧ್ಯರಾತ್ರಿ ಜಿಎಸ್ಟಿ ಜಾರಿ ಹಿನ್ನಲೆಯಲ್ಲಿ ಹೊಸ ಕಾರ್ಪೆಟ್ ಗಳನ್ನೆಲ್ಲಾ ಹಾಕಿ ಸೆಂಟ್ರಲ್ ಹಾಲ್ ನ್ನು ಒಪ್ಪ ಓರಣ ಮಾಡಲಾಗಿದೆ.

ಇಂದು ಅಂದರೆ ಜೂನ್ 30ರ ಮಧ್ಯರಾತ್ರಿ ಐತಿಹಾಸಿಕ ಜಿಎಸ್ಟಿ ಜಾರಿಗೆ ಬರಲಿದೆ. ಈ ಸಂದರ್ಭದಲ್ಲಿ ಸೆಂಟ್ರಲ್ ಹಾಲಿನ ಸ್ಪೀಕರ್, ಮೈಕ್ರೋಫೋನ್, ಹೆಡ್ ಸೆಟ್ ಗಳನ್ನು ಬದಲಾಯಿಸಲಾಗಿದೆ. ಜಿಎಸ್ಟಿ ಚಾಲನೆಯನ್ನು ಕಣ್ತುಂಬಿಕೊಳ್ಳಲು ಸೆಂಟ್ರಲ್ ಹಾಲ್ ನಲ್ಲಿ ಕನಿಷ್ಠ800 ಜನರು ಉಪಸ್ಥಿತರಿರಲಿದ್ದಾರೆ.

30ರಂದು ನಡೆಯಲಿರುವ ಮಧ್ಯರಾತ್ರಿ ಸಂಸತ್ ಅಧಿವೇಶನದ ಮಹತ್ವ30ರಂದು ನಡೆಯಲಿರುವ ಮಧ್ಯರಾತ್ರಿ ಸಂಸತ್ ಅಧಿವೇಶನದ ಮಹತ್ವ

Ahead of GST launch, Parliament's Central Hall gets a makeover

ಎಲ್ಇಡಿ ಬಲ್ಬ್ ಗಳನ್ನು ಅಳವಡಿಸಿ ಇಡೀ ಸೆಂಟ್ರಲ್ ಹಾಲಿನ ಕಳೆಯನ್ನೇ ಬದಲಾಯಿಸಲಾಗಿದೆ. ಒಟ್ಟಾರೆ ಐತಿಹಾಸಿಕ ಕ್ಷಣಕ್ಕೆ ಹಬ್ಬದ ರೀತಿಯಲ್ಲಿ ಸಿದ್ಧತೆಗಳನ್ನು ಕೇಂದ್ರ ಸರಕಾರ ಮಾಡಿಕೊಂಡಿದೆ.

ಹಾಗೆ ನೋಡಿದರೆ ಸೆಂಟ್ರಲ್ ಹಾಲಿನಲ್ಲಿ ಮಧ್ಯ ರಾತ್ರಿ ಅಧಿವೇಶನ ನಡೆಯುತ್ತಿರುವ ನಾಲ್ಕನೇ ದೃಷ್ಟಾಂತ ಇದು.

Ahead of GST launch, Parliament's Central Hall gets a makeover

ಈ ಹಿಂದೆ ಸ್ವಾತಂತ್ರ್ಯ ಬಂದಾಗ 1947ರಂದು ಆಗಸ್ಟ್ 14ರಂದು ಮಧ್ಯರಾತ್ರಿ ಅಧಿವೇಶನ ಕರೆಯಲಾಗಿತ್ತು. ಆಗ ಅಧಿವೇಶನ ಉದ್ದೇಶಿಸಿ ಅಂದಿನ ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ಭಾಷಣ ಮಾಡಿದ್ದರು.

ಜುಲೈ 1ರಿಂದ ಜಿಎಸ್ಟಿ ಹೊರತಾಗಿ ಬದಲಾಗುವ 9 ಸಂಗತಿಜುಲೈ 1ರಿಂದ ಜಿಎಸ್ಟಿ ಹೊರತಾಗಿ ಬದಲಾಗುವ 9 ಸಂಗತಿ

ನಂತರ ಸ್ವಾತಂತ್ರ್ಯ ಸಿಕ್ಕಿದ 25ನೇ ವರ್ಷಾಚರಣೆ ವೇಳೆ 1972 ಆಗಸ್ಟ್ 14 ರಂದು ವಿಶೇಷ ಮಧ್ಯರಾತ್ರಿಯ ಅಧಿವೇಶನ ಕರೆಯಲಾಗಿತ್ತು. ಈ ಅಧಿವೇಶನ ಉದ್ದೇಶಿಸಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಭಾಷಣ ಮಾಡಿದ್ದರು.

Ahead of GST launch, Parliament's Central Hall gets a makeover

ಇದಾದ ಬಳಿಕ 1997ರ ಆಗಸ್ಟ್ 14ರಂದು ಸ್ವಾತಂತ್ರ್ಯ ಸಿಕ್ಕಿದ ಸುವರ್ಣ ವರ್ಷಾಚರಣೆ ಹಿನ್ನಲೆಯಲ್ಲಿ ವಿಶೇಷ ಅಧಿವೇಶನವನ್ನು ಇದೇ ಸೆಂಟ್ರಲ್ ಹಾಲ್ ನಲ್ಲಿ ಕರೆಯಲಾಗಿತ್ತು. ಅವತ್ತು ಅಂದಿನ ಪ್ರಧಾನಿ ಐಕೆ ಗುಜ್ರಾಲ್ ಭಾಷಣ ಮಾಡಿದ್ದರು.

ಇದಾದ ಬಳಿಕ ಇದೀಗ ಪ್ರಧಾನಿ ನರೇಂದ್ರ ಮೋದಿ ಮಧ್ಯರಾತ್ರಿಯ ಐತಿಹಾಸಿಕ ಭಾಷಣವನ್ನು ಇದೇ ಸೆಂಟ್ರಲ್ ಹಾಲ್ ನಲ್ಲಿ ಮಾಡಲಿದ್ದಾರೆ.

English summary
The central hall of Parliament has gone through an image make-over. The floors scrubbed, carpets re-laid, the Parliament's central hall is all decked up ahead of the historic June 30 midnight launch of GST.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X