• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ : 34 ಮಂದಿ ವಿರುದ್ಧ ಚಾರ್ಜ್ ಶೀಟ್

By Mahesh
|

ನವದೆಹಲಿ ಜುಲೈ 18: ವಾಯುಪಡೆಯ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ವು ಇಂದು ಸ್ಥಳೀಯ ನ್ಯಾಯಾಲಯದಲ್ಲಿ ಸುಮಾರು 34 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.

ಇಟಲಿ ಮೂಲದ ಅಗಸ್ಟಾ ವೆಸ್ಟ್ಲ್ಯಾಂಡ್ ಕಂಪನಿ ಜತೆಗಿನ 3,600 ಕೋಟಿ ರುಪಾಯಿ ಮೌಲ್ಯದ ಒಪ್ಪಂದವನ್ನು ಭಾರತ ಸರ್ಕಾರವು 2014ರಲ್ಲೇ ರದ್ದುಪಡಿಸಿದೆ.

ಭಾರತವನ್ನು ಕಾಡುವ 25 ಭ್ರಷ್ಟಾಚಾರ ಪ್ರಕರಣಗಳು

ವಿವಿಐಪಿಗಳ ಪ್ರಯಾಣಕ್ಕಾಗಿ ವಾಯುಪಡೆಗೆ 12 ಹೆಲಿಕಾಪ್ಟರ್ ಖರೀದಿಗೆ ಸರ್ಕಾರ ಟೆಂಡರ್ ಕರೆಯಲಾಗಿತ್ತು. ಅಮೆರಿಕ, ಇಟಲಿ ಸೇರಿದಂತೆ ಪ್ರತಿಷ್ಠಿತ ರಾಷ್ಟ್ರಗಳ ಕಂಪನಿಗಳು ಟೆಂಡರ್ನಲ್ಲಿ ಪಾಲ್ಗೊಂಡಿದ್ದವು. ಆದರೆ. ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿ ಕೆಲ ರಾಜಕಾರಣಿಗಳಿಗೆ 360 ಕೋಟಿ ರೂಪಾಯಿ ಲಂಚ ನೀಡಿ ಟೆಂಡರ್ ಪಡೆದಿತ್ತು.

ಫೆಬ್ರವರಿ 2013ರಂದು ಇಟಲಿ ಪೊಲೀಸರು ಆಗಸ್ಟಾ ಕಂಪನಿ ಸಿಇಒರನ್ನು ಭ್ರಷ್ಟಾಚಾರದ ಆರೋಪದಡಿ ಬಂಧಿಸಿದ್ದರು. ಇದೇ ಸಂದರ್ಭ ಭಾರತ ಸರ್ಕಾರ ಸಹ ಒಪ್ಪಂದದಂತೆ ಕಂಪನಿಗೆ ಪಾವತಿಸಬೇಕಾದ 3,600 ಕೋಟಿ ರೂಪಾಯಿಯನ್ನ ತಡೆಹಿಡಿದಿತ್ತು. ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ. ತ್ಯಾಗಿ ವಿರುದ್ಧವೂ ಕಿಕ್ ಬ್ಯಾಕ್ ಆರೋಪ ಕೇಳಿ ಬಂದಿತ್ತು.

ಮೊದಲಿಗೆ ಸಿಬಿಐ ಸಲ್ಲಿಸಿದ್ದ ಚಾರ್ಜ್ ಶೀಟ್

ಮೊದಲಿಗೆ ಸಿಬಿಐ ಸಲ್ಲಿಸಿದ್ದ ಚಾರ್ಜ್ ಶೀಟ್

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಸಿಬಿಐ ಕಳೆದ ಸೆಪ್ಟೆಂಬರ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಈ ಹಗರಣದಿಂದ ಸರ್ಕಾರಕ್ಕೆ 398.1 ಮಿಲಿಯನ್ ಯುರೋಸ್ ನಷ್ಟವಾಗಿದೆ. ಐಎಎಫ್ ನ ಮಾಜಿ ಮುಖ್ಯಸ್ಥ ಎಸ್ಪಿ ತ್ಯಾಗಿ ಹಾಗೂ ಅವರ ಕಸಿನ್ ಗಳು ಪ್ರಮುಖ ಆರೋಪಿಗಳಾಗಿದ್ದಾರೆ.

ಒಟ್ಟಾರೆ, ನಾಲ್ವರು ಭಾರತೀಯರು, ಐವರು ವಿದೇಶಿಯರ ಹೆಸರು ದೋಷಾರೋಪಣ ಪಟ್ಟಿಯಲ್ಲಿದೆ. ಸುಮಾರು 30,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.

ಇಡಿ ಸಲ್ಲಿಸಿರುವ ಚಾರ್ಜ್ ಶೀಟ್

ಇಡಿ ಸಲ್ಲಿಸಿರುವ ಚಾರ್ಜ್ ಶೀಟ್

ಐಎಎಫ್ ಮಾಜಿ ಮುಖ್ಯಸ್ಥ ತ್ಯಾಗಿ ಹಾಗು ಅವರ ಬೇನಾಮಿ ಕಂಪನಿಗಳಾದ ಕೃಷ್ಣನೀಲ್, ತ್ಯಾಗಿ ಇಶಾನ್, ಕೃಷ್ನೋಮ್, ಕೃಷ್ಣಮಾಯೆ, ಕೃಷ್ನಾಯನ್ ಸೇರಿದಂತೆ 15 ಕಂಪನಿಗಳು,

ತ್ಯಾಗಿ ಕುಟುಂಬದ ಲಾಯರ್ ಗೌತಮ್ ಖೇತಾನ್, ಖೇತಾನ್ ಅವರ ಪತ್ನಿ ರಿತು ಖೈತಾನ್, ಶಿವಾನಿ ಹಾಗೂ ಅವರ ಪತ್ನಿ ರಾಜೀವ್ ಸಕ್ಸೇನ, ದುಬೈನ ಮ್ಯಾಟ್ರಿಕ್ಸ್ ಹೋಲ್ಡಿಂಗ್ಸ್ , ಅಗಸ್ಟಾ ವೆಸ್ಟ್ ಲ್ಯಾಂಡ್ ಇಂಟರ್ ನ್ಯಾಷನಲ್ ಲಿಮಿಟೆಡ್,ಇಟಲಿಯ ಫಿನ್ ಮೆಕಾನಿಕಾ, ಮಧ್ಯವರ್ತಿ ಗೈಡೋ ರಾಫ್ ಹಶ್ಕೆ ಹೆಸರು ಸೇರಿಸಲಾಗಿದೆ.

ತ್ಯಾಗಿ ಹಾಗೂ ಅವರ ಸಹೋದರರು ಆರೋಪಿಗಳು

ತ್ಯಾಗಿ ಹಾಗೂ ಅವರ ಸಹೋದರರು ಆರೋಪಿಗಳು

ತ್ಯಾಗಿ ಹಾಗೂ ಅವರ ಸಹೋದರರಾದ ಜೂಲಿ, ಡೋಸ್ಕಾ ತ್ಯಾಗಿ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿತ್ತು. ಯುರೋಪ್‌ನ ಮಧ್ಯವರ್ತಿಗಳಾದ ಕಾರ್ಲೋ ಗೆರೋಸಾ ಮತ್ತು ಗಿಡೋ ಹಷ್ಕೆ ಜತೆಗಿನ ಸಂಬಂಧದ ಕುರಿತು ಸಿಬಿಐ ಅಧಿಕಾರಿಗಳು ಪ್ರಶ್ನೆ ಮಾಡಿದ್ದರು. ಲಂಚದ ಹಣವನ್ನು ವರ್ಗಾಯಿಸುವಲ್ಲಿ ಪ್ರಮುಖ ಪಾತ್ರವಹಿಸಿತ್ತು ಎನ್ನಲಾದ ಭಾರತೀಯ ಕಂಪನಿಗಳಾದ ಏರೋಮ್ಯಾಟ್ರಿಕ್ಸ್, ಐಡಿಎಸ್ ಇನ್ಫೋಟೆಕ್ ಕಂಪನಿಗಳ ಅಧಿಕಾರಿಗಳ ವಿಚಾರಣೆಯನ್ನು ಈಗಾಗಲೇ ನಡೆಸಲಾಗಿದೆ. ಇಟಲಿಯ ಡಿಫೆನ್ಸ್ ಕಂಪನಿ ಫಿನ್ ಮೆಕ್ಯಾನಿಕಾ(SIFI.MI) ಹಾಗೂ ಭಾರತದ ಆಂಗ್ಲೋ ಇಟಾಲಿಯನ್ ಘಟಕ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಸರು ಕೂಡಾ ಎಫ್ ಐಆರ್ ನಲ್ಲಿ ದಾಖಲಿಸಲಾಗಿದೆ.

ವಿದೇಶಿ ಕಂಪನಿಗಳ ಮೇಲೂ ದೋಷಾರೋಪಣೆ

ವಿದೇಶಿ ಕಂಪನಿಗಳ ಮೇಲೂ ದೋಷಾರೋಪಣೆ

ಯುರೋಪಿನ ವ್ಯವಹಾರ ಕುದುರಿಸಿದ ಮಧ್ಯವರ್ತಿ ಕಾರ್ಲೊ ಗೆರೊಸಾ, ಮಿಚೆಲ್ ಜೇಮ್ಸ್, ಗೈಡೋ ಹಷ್ಕೆ, ಅಗಸ್ಟಾ ವೆಸ್ಟ್ ಲ್ಯಾಂಡ್ ಮಾಜಿ ಸಿಇಒ ಬ್ರುನೋ ಸ್ಪಗ್ನೋಲಿನಿ, ಫಿನ್ ಮೆಕಾನಿಕಾ ಮಾಜಿ ಚೇರ್ಮನ್ ಗಿಯುಸೆಪ್ಪೆ ಓರ್ಸಿ, ಮಾರಿಷಸ್, ಸಿಂಗಪುರ, ಯುಎಇ, ಟುನೀಷಿಯಾ, ಯುಕೆ, ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ಗಳಿಗೆ 62 ಮಿಲಿಯನ್ ಯುರೋಸ್ ವಹಿವಾಟು ನಡೆದಿದೆ ಎಂದು ಉಲ್ಲೇಖಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
New Delhi : A comprehensive charge sheet against those allegedly involved in the Agusta Westland VVIP chopper scandal filed by the Enforcement Directorate (ED) today(July 18) in a local court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more