ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಹಿರಿಯ ನಾಯಕನ ಹೆಸರು ಉಲ್ಲೇಖಿಸಿದ ಅಗಸ್ಟಾ ಆರೋಪಿ ಮೈಕಲ್

|
Google Oneindia Kannada News

ನವದೆಹಲಿ, ಏಪ್ರಿಲ್ 5: ಅಗಸ್ಟಾ ವೆಸ್ಟ್‌ಲ್ಯಾಂಡ್ ಐಷಾರಾಮಿ ಹೆಲಿಕಾಪ್ಟರ್ ಖರೀದಿ ಹಗರಣದ ಮಧ್ಯವರ್ತಿಯಾಗಿದ್ದ ಬ್ರಿಟನ್ ಮೂಲದ ಆರೋಪಿ ಕ್ರಿಶ್ಚಿಯನ್ ಮೈಕಲ್‌ನ ವಿರುದ್ಧ ಜಾರಿ ನಿರ್ದೇಶನಾಲಯ ಉಪ ಆರೋಪಪಟ್ಟಿ ಸಲ್ಲಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಿಕ್‌ಬ್ಯಾಕ್‌ನ ವಿವರಗಳನ್ನು ಮೈಕಲ್ ಸಂಕ್ಷಿಪ್ತ ಸಂಕೇತಗಳಲ್ಲಿ ತನ್ನ 'ಬಜೆಟ್ ಶೀಟ್‌'ನಲ್ಲಿ ಬರೆದಿಟ್ಟಿದ್ದಾನೆ. ಇದರಲ್ಲಿ 'ಎಪಿ' ಎಂದು ಬರೆಯಲಾಗಿದ್ದು, ಇದು ಕಾಂಗ್ರೆಸ್‌ನ ಪ್ರಮುಖ ನಾಯಕನ ಹೆಸರಾಗಿದೆ ಎಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ನಾಲ್ಕನೆಯ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಕ್ರಿಶ್ಚಿಯನ್ ಮೈಕಲ್ ನ ಮತ್ತಷ್ಟು ವಿಚಾರಣೆಗೆ ಸಿಬಿಐ ಕೋರ್ಟ್ ಅನುಮತಿ ಕ್ರಿಶ್ಚಿಯನ್ ಮೈಕಲ್ ನ ಮತ್ತಷ್ಟು ವಿಚಾರಣೆಗೆ ಸಿಬಿಐ ಕೋರ್ಟ್ ಅನುಮತಿ

ಮೈಕಲ್ ಪ್ರಕಾರ 'Fam' ಎಂದರೆ ಫ್ಯಾಮಿಲಿ. ಈ ಸಂಕೇತಾಕ್ಷರಗಳು 'ವಾಯು ಪಡೆ ಅಧಿಕಾರಿಗಳು', 'ಅಧಿಕಾರಿಗಳು', 'ರಕ್ಷಣಾ ಸಚಿವಾಲಯದ ಅಧಿಕಾರಿಗಳು' ಮತ್ತು 'ಆಡಳಿತಾರೂಢ ಪಕ್ಷದ ಪ್ರಮುಖ ರಾಜಕೀಯ ನಾಯಕ'ರಿಗೆ 30 ಮಿಲಿಯನ್ ಯುರೋ ಕಿಕ್ ಬ್ಯಾಕ್ ನೀಡಲಾಗಿರುವುದನ್ನು ಸೂಚಿಸುತ್ತವೆ ಎನ್ನಲಾಗಿದೆ.

ಕ್ರಿಶ್ಚಿಯನ್ ನಿಂದ ಕುಟುಂಬಕ್ಕೆ ಹಣ ಸಂದಾಯ! ಆ 'ಕುಟುಂಬ' ಯಾವುದು?ಕ್ರಿಶ್ಚಿಯನ್ ನಿಂದ ಕುಟುಂಬಕ್ಕೆ ಹಣ ಸಂದಾಯ! ಆ 'ಕುಟುಂಬ' ಯಾವುದು?

Agusta westland deal ED chargesheet christian michel named congress leader AP

ಸಂಕೀರ್ಣವಾದ ವ್ಯವಸ್ಥೆಯ ಮೂಲಕ ಹಣದ ಪಾವತಿಯನ್ನು ಮಾಡಲಾಗಿದ್ದು, ಹವಾಲಾ ಮೂಲಕ ನಗದನ್ನು ಪಡೆದುಕೊಳ್ಳಲಾಗಿದೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಐಎಎಫ್‌ನ ಮಾಜಿ ಮುಖ್ಯಸ್ಥ ಎಸ್‌ ಪಿ ತ್ಯಾಗಿ ಅವರೂ ಇಲ್ಲಿ ಆರೋಪಿಯಾಗಿರುವುದರಿಂದ ಇದರ ಬಗ್ಗೆ ಇ.ಡಿ. ಮತ್ತು ಸಿಬಿಐ ಪರಿಶೀಲನೆ ನಡೆಸುತ್ತಿವೆ.

ಕಾಶ್ಮೀರಿ ಉಗ್ರರೊಂದಿಗೆ ಅಗಸ್ಟಾ ಆರೋಪಿ : ನ್ಯಾಯಾಧೀಶರಿಗೆ ಮೈಕಲ್ ಪತ್ರ ಕಾಶ್ಮೀರಿ ಉಗ್ರರೊಂದಿಗೆ ಅಗಸ್ಟಾ ಆರೋಪಿ : ನ್ಯಾಯಾಧೀಶರಿಗೆ ಮೈಕಲ್ ಪತ್ರ

ಕ್ರಿಶ್ಚಿಯನ್ ಮೈಕಲ್ ಉಲ್ಲೇಖಿಸಿರುವ 'ಎಪಿ' ಸಂಕೇತಾಕ್ಷರದ ಪೂರ್ಣ ವಿವರವನ್ನು ಆರೋಪಪಟ್ಟಿಯಲ್ಲಿ ನೀಡಲಾಗಿದೆ. ಆದರೆ, ಅದನ್ನು ಬಹಿರಂಗಪಡಿಸಲಾಗಿಲ್ಲ. 3,000ಕ್ಕೂ ಹೆಚ್ಚು ಪುಟಗಳ ಹೆಚ್ಚುವರಿ ದಾಖಲೆಗಳ ಜತೆಗೆ 52 ಪುಟಗಳ ಹೊಸ ಉಪ ಆರೋಪಪಟ್ಟಿಯನ್ನು ಒದಗಿಸಲಾಗಿದೆ. ಅದರಲ್ಲಿ ಮೂರು ಹೊಸ ಹೆಸರುಗಳಿವೆ. ಮೈಕಲ್‌ನ ವ್ಯವಹಾರ ಪಾಲುದಾರ ಡೇವಿಡ್ ಸಿಮ್ಸ್ ಮತ್ತು ಎರಡು ಕಂಪೆನಿಗಳಾದ ಯುಎಇ, ಎಫ್‌ಝೆಡ್ಇ ಹಾಗೂ ಗ್ಲೋಬಲ್ ಟ್ರೇಡ್ ಆಂಡ್ ಕಾಮರ್ಸ್ ಲಿಮಿಟೆಡ್. ಇದಕ್ಕೂ ಮುನ್ನ 38 ಕಂಪೆನಿಗಳು ಮತ್ತು ವ್ಯಕ್ತಿಗಳ ಹೆಸರನ್ನು ಆರೋಪಿಗಳನ್ನಾಗಿ ಉಲ್ಲೇಖಿಸಲಾಗಿತ್ತು.

ಭಾರತಕ್ಕೆ ವಂಚಿಸಿದವರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ: ಜೇಟ್ಲಿಭಾರತಕ್ಕೆ ವಂಚಿಸಿದವರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ: ಜೇಟ್ಲಿ

ಇಬ್ಬರು ಮಧ್ಯವರ್ತಿಗಳಾದ ಮೈಕಲ್ ಮತ್ತು ಗ್ಯುಡೊ ಹಷ್ಕೆ ಅವರ ಮೂಲಕ ಒಟ್ಟು 70 ಮಿಲಿಯನ್ ಯುರೋ ಮೊತ್ತವನ್ನು ಪಾವತಿಸಲಾಗಿದೆ ಎಂದು ಇ.ಡಿ ಪುನರುಚ್ಚರಿಸಿದೆ. ಇದರಲ್ಲಿ 42 ಮಿಲಿಯನ್ ಯುರೋ ಹಣವು ಮೈಕಲ್‌ನ ಗ್ಲೋಬಲ್ ಸರ್ವೀಸಸ್ ಎಫ್‌ಝೆಡ್‌ಇ, ಯುಎಇ ಮತ್ತು ಗ್ಲೋಬಲ್ ಟ್ರೇಡ್ ಆಂಡ್ ಕಾಮರ್ಸ್ ಲಿಮಿಟೆಡ್‌ನ ಬ್ಯಾಂಕ್ ಖಾತೆಗಳಿಗೆ ಪಾವತಿಯಾಗಿದೆ. ಉಳಿದ 28 ಮಿಲಿಯನ್ ಯುರೋ ಹಣವು ಹಷ್ಕೆ ಮಾಲೀಕತ್ವದ ಐಡಿಎಸ್ ಟ್ಯುನಿಷಿಯಾದ ಬ್ಯಾಂಕ್ ಖಾತೆಗೆ ಜಮಾವಣೆಯಾಗಿದೆ ಎಂದು ಆರೋಪಿಸಿದೆ.

English summary
Enforcement Directorate in its supplementary chargesheet disclosed that of various abbreviations mentioned by Christian Michel including a prominent Congress leader 'AP'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X