ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವ ಜನತೆಗೆ ಆಶಾಕಿರಣ- ಅಗ್ನಿಪಥ್ ನೇಮಕಾತಿ ಯೋಜನೆ

|
Google Oneindia Kannada News

ನವದಹಲಿ, ಜೂನ್ 14: ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಪದೇ ಪದೇ ಟೀಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಬೃಹತ್ ಉದ್ಯೋಗ ಯೋಜನೆಯನ್ನು ಘೋಷಿಸಿದೆ. ವಿವಿಧ ಸರ್ಕಾರಿ ವಲಯಗಳಲ್ಲಿ ಬಾಕಿ ಉಳಿದಿರುವ ಹುದ್ದೆಗಳನ್ನು ಮೊದಲಿಗೆ ಭರ್ತಿ ಮಾಡಲು ಸೂಚನೆ ನೀಡಲಾಗುತ್ತದೆ. ಜೊತೆಗೆ ಸೇನೆಗೆ ಯುವ ಜನತೆ ಭರ್ತಿ ಮಾಡಲು ಅಗ್ನಿಪಥ್ ಯೋಜನೆಯನ್ನು ಇಂದು ಪ್ರಕಟಿಸಲಾಗಿದೆ.

ಮೂರು ಸೇವಾ ಮುಖ್ಯಸ್ಥರು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಅಗ್ನಿಪಥ್ ಸೇನಾ ನೇಮಕಾತಿ ಆರಂಭದ ಬಗ್ಗೆ ಅಧಿಕೃತವಾಗಿ ಘೋಷಿಸಿದರು. ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೂಡಾ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.

ಮುಖ್ಯವಾಗಿ ರಕ್ಷಣಾ ಪಡೆಗಳಿಗೆ ನಾಲ್ಕು ವರ್ಷಗಳ ಅವಧಿಯ ಯೋಜನೆಯನ್ನು ಜಾರಿಗೆ ತರಲು ಭಾರತ ಸರ್ಕಾರವು ಪರಿಗಣಿಸುತ್ತಿದೆ.ಅಗ್ನಿಪಥ್ ನೇಮಕಾತಿ ಯೋಜನೆಯಡಿ ನೇಮಕಗೊಂಡ ಅಭ್ಯರ್ಥಿಗಳು ರಕ್ಷಣಾ ಪಡೆಗಳಲ್ಲಿ ನಾಲ್ಕು ವರ್ಷಗಳ ಕಾಲ ಮಾತ್ರ ಸೇವೆ ಸಲ್ಲಿಸಬೇಕಾಗುತ್ತದೆ.

Agnipath scheme announced by the chiefs of the three services

''ಮುಂದಿನ 1.5 ವರ್ಷಗಳಲ್ಲಿ 10 ಲಕ್ಷ ಯುವಕರನ್ನು ನೇಮಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯು ಯುವಜನರಲ್ಲಿ ಹೊಸ ಭರವಸೆ ಮತ್ತು ಆತ್ಮವಿಶ್ವಾಸವನ್ನು ತರುತ್ತದೆ'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ.

Job Alert: 10 ಲಕ್ಷ ನೇಮಕಾತಿ ಬಗ್ಗೆ ಘೋಷಣೆ ಮಾಡಿದ ಕೇಂದ್ರ ಸರ್ಕಾರJob Alert: 10 ಲಕ್ಷ ನೇಮಕಾತಿ ಬಗ್ಗೆ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ಏನಿದು ಅಗ್ನಿಪಥ್ ಯೋಜನೆ?:

ಹೊಸ ಯೋಜನೆಯಡಿಯಲ್ಲಿ, 17.5 ವರ್ಷದಿಂದ 21 ವರ್ಷದೊಳಗಿನ ಸುಮಾರು 45,000 ಜನರನ್ನು ಸೇವೆಗಳಿಗೆ ಸೇರಿಸಿಕೊಳ್ಳಲಾಗುವುದು ಮತ್ತು ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾರೆ.

ಈ ನಾಲ್ಕು ವರ್ಷಗಳ ಅಧಿಕಾರಾವಧಿಯು ಆರು ತಿಂಗಳ ತರಬೇತಿಯನ್ನು ಒಳಗೊಂಡಿರುತ್ತದೆ. ಈ ಅವಧಿಯಲ್ಲಿ ಅವರಿಗೆ 30,000 ರು ನಿಂದ 40,000 ರು ಮತ್ತು ಭತ್ಯೆಗಳ ನಡುವೆ ಮಾಸಿಕ ವೇತನವನ್ನು ನೀಡಲಾಗುತ್ತದೆ. ಅವರು ವೈದ್ಯಕೀಯ ಮತ್ತು ವಿಮೆ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ.

Agnipath scheme announced by the chiefs of the three services

ನಾಲ್ಕು ವರ್ಷಗಳ ನಂತರ, ಈ ಸೈನಿಕರಲ್ಲಿ ಕೇವಲ ಶೇ 25 ರಷ್ಟು ಮಾತ್ರ ಸೇವೆಯಲ್ಲಿ ಉಳಿಯಲಿದ್ದಾರೆ ಹಾಗೂ ಅವರನ್ನು ಸಾಮಾನ್ಯ ಕೇಡರ್‌ಗೆ ಸೇರಿಸಲಾಗುತ್ತದೆ. ಜೊತೆಗೆ ಪೂರ್ಣ 15 ವರ್ಷಗಳ ಕಾಲ ಅಧಿಕಾರಿಯೇತರ ಶ್ರೇಣಿಯಲ್ಲಿ ಸೇವೆ ಸಲ್ಲಿಸಬಹುದಾಗಿದೆ.

ತರಬೇತಿ ನಂತರ ಉಳಿದವರು 11 ಲಕ್ ರು ನಿಂದ 12 ಲಕ್ ರು ವರೆಗಿನ ಪ್ಯಾಕೇಜ್‌ನೊಂದಿಗೆ ಸೇವೆಗಳಿಂದ ನಿರ್ಗಮಿಸುತ್ತಾರೆ, ಆದರೆ ಅವರು ಪಿಂಚಣಿ ಪ್ರಯೋಜನಗಳಿಗೆ ಅರ್ಹರಾಗಿರುವುದಿಲ್ಲ.

ಅಗ್ನಿಪಥ್ ಯೋಜನೆಯು ಯಶಸ್ವಿಯಾದರೆ, ವಾರ್ಷಿಕ ಆದಾಯ ಮತ್ತು ಪಿಂಚಣಿ ಕಾಯ್ದೆಯಡಿಯಲ್ಲಿ ವಾರ್ಷಿಕ ರಕ್ಷಣಾ ಬಜೆಟ್‌ನ 5.2-ಲಕ್ಷ ಕೋಟಿ ರುಗಳ ಅರ್ಧದಷ್ಟು ಮೊತ್ತ ತಗ್ಗಲಿದೆ.

'ಅಗ್ನಿಪಥ'ದ ಪರಿವರ್ತನಾ ಯೋಜನೆಗೆ ಅನುಮೋದನೆ ನೀಡಲು ಭದ್ರತೆ ಕುರಿತ ಸಂಪುಟ ಸಮಿತಿ ಇಂದು ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಇದರಡಿಯಲ್ಲಿ, ಭಾರತೀಯ ಯುವಕರಿಗೆ ಸಶಸ್ತ್ರ ಸೇವೆಗಳಿಗೆ ಸೇರ್ಪಡೆಗೊಳ್ಳಲು ಅವಕಾಶ ನೀಡಲಾಗುವುದು: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

Recommended Video

ED ತೆಕ್ಕೆಯಲ್ಲಿ ರಾಹುಲ್ ಗಾಂಧಿ! | *Politics | OneIndia Kannada

English summary
The chiefs of the three services along with Defence Minister Rajnath Singh today announced that the recruitment of 10 lakh people will be done by the Centre over the course of the next 1.5 years under chiefs of the three services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X