ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ನಿಪಥ್ ಖಂಡಿಸಿ ಪ್ರತಿಭಟನೆ, ಹಿಂಸಾಚಾರ: 34 ರೈಲುಗಳ ಸಂಚಾರ ರದ್ದು

|
Google Oneindia Kannada News

ನವದೆಹಲಿ, ಜೂ. 17: ಕೇಂದ್ರ ಸರ್ಕಾರ ಪ್ರಸ್ತುತಪಡಿಸಿರುವ ಅಗ್ನಿಪಥ್‌ ಹೆಸರಿನ ನೂತನ ಅಲ್ಪಾವಧಿ ಯೋಜನೆ ಖಂಡಿಸಿ ಬಿಹಾರದಲ್ಲಿ ರೈಲುಗಳು ಪ್ರತಿಭಟನಾಕಾರರು ಇಟ್ಟ ಬೆಂಕಿಗೆ ರೈಲುಗಳು ಆಹುತಿಯಾದ ಹಿನ್ನೆಲೆಯಲ್ಲಿ 34 ರೈಲುಗಳನ್ನು ರದ್ದುಗೊಳಿಸಲಾಗಿದೆ.

ಸಶಸ್ತ್ರ ಪಡೆಗಳಿಗೆ ಯುವಕರನ್ನು ನೇಮಿಸಿಕೊಳ್ಳುವ 'ಅಗ್ನಿಪಥ್' ಯೋಜನೆ ವಿರುದ್ಧ ಪ್ರತಿಭಟನೆ ಹಿನ್ನೆಲೆ ಮತ್ತು ರೈಲ್ವೇ ನೇಮಕಾತಿ ಮಂಡಳಿ ಪರೀಕ್ಷೆಗಳ ವಿಳಂಬದಿಂದಾಗಿ ಗುರುವಾರ 34 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ ಎಂಟು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಪ್ರತಿಭಟನೆಯಿಂದಾಗಿ 72 ರೈಲುಗಳು ತಡವಾಗಿ ಓಡುತ್ತಿದ್ದು, ಐದು ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳು ಮತ್ತು 29 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಅಗ್ನಿಪಥ್ ಯೋಜನೆ ಸತ್ಯ, ಮಿಥ್ಯೆ, ಸಂದೇಹ ಪರಿಹಾರಕ್ಕೆ ಅಧಿಕಾರಿಗಳ ಪ್ರಯತ್ನ ಅಗ್ನಿಪಥ್ ಯೋಜನೆ ಸತ್ಯ, ಮಿಥ್ಯೆ, ಸಂದೇಹ ಪರಿಹಾರಕ್ಕೆ ಅಧಿಕಾರಿಗಳ ಪ್ರಯತ್ನ

 ನಂಗ್ಲೋಯ್ ರೈಲು ನಿಲ್ದಾಣ 15-20 ಜನರ ದಾಳಿ

ನಂಗ್ಲೋಯ್ ರೈಲು ನಿಲ್ದಾಣ 15-20 ಜನರ ದಾಳಿ

ಅಗ್ನಿಪಥ್ ಯೋಜನೆ ವಿರುದ್ಧ ದೇಶಾದ್ಯಂತ ಹಲವು ರಾಜ್ಯಗಳಿಂದ ಪ್ರತಿಭಟನೆಗಳು ಮುಂದುವರಿದಿವೆ. ನಂಗ್ಲೋಯ್‌ನಲ್ಲಿ ಪ್ರತಿಭಟನಾಕಾರರು ರೈಲ್ವೆ ಹಳಿಯನ್ನು ತಡೆದು ಅಗ್ನಿಪಥ್‌ ಯೋಜನೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಗ್ನಿಪಥ್ ಯೋಜನೆ ಮತ್ತು ಆರ್‌ಆರ್‌ಬಿ ಪರೀಕ್ಷೆಗಳ ವಿಳಂಬದ ವಿರುದ್ಧ ಪ್ರತಿಭಟನೆ ಮಾಡಲು 15-20 ಜನರು ನಂಗ್ಲೋಯ್ ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದಾರೆ ಎಂದು ದೆಹಲಿ ಪೊಲೀಸರು ಬೆಳಿಗ್ಗೆ 9.45 ರ ಸುಮಾರಿಗೆ ಮಾಹಿತಿ ಪಡೆದಿದ್ದರು.

 ಒಟ್ಟು 22 ರೈಲುಗಳನ್ನು ರದ್ದು

ಒಟ್ಟು 22 ರೈಲುಗಳನ್ನು ರದ್ದು

ಎರಡು- ಮೂರು ವರ್ಷಗಳ ಹಿಂದೆ ಕೆಲವು ಸರ್ಕಾರಿ ನೇಮಕಾತಿಗಳಿಗೆ ಅರ್ಜಿಗಳನ್ನು ಸಲ್ಲಿಸಿದ್ದೇವೆ. ಆದರೆ ಪರೀಕ್ಷೆಗಳು ನಡೆಯಲಿಲ್ಲ ಇದರಿಂದಾಗಿ ಉದ್ಯೋಗಾಕಾಂಕ್ಷಿಗಳಿಗೆ ಈಗ ವಯೋಮಿತಿ ಮೀರಿದೆ ಎಂದು ಪ್ರತಿಭಟನಾಕಾರರು ಪೊಲೀಸರಿಗೆ ತಿಳಿಸಿದರು. ಮಧ್ಯಾಹ್ನದ ವೇಳೆಗೆ ಪ್ರತಿಭಟನಾಕಾರರನ್ನು ಪೊಲೀಸರು ಸಮಾಧಾನಪಡಿಸಿ ಕಳುಹಿಸಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುಂಚಿತವಾಗಿ ಪೂರ್ವ ಕೇಂದ್ರ ರೈಲ್ವೇ ವಲಯವೊಂದರಲ್ಲೇ ಒಟ್ಟು 22 ರೈಲುಗಳನ್ನು ರದ್ದುಗೊಳಿಸಲಾಗಿದೆ. ಅಲ್ಪಾವಧಿ ಒಪ್ಪಂದದ ಆಧಾರದ ಮೇಲೆ ಸೇನೆ, ನೌಕಾಪಡೆ ಮತ್ತು ವಾಯುಸೇನೆಯಲ್ಲಿ ಸೈನಿಕರ ನೇಮಕಾತಿಗಾಗಿ ಕೇಂದ್ರವು ಮಂಗಳವಾರ ಅಗ್ನಿಪಥ್ ಯೋಜನೆಯನ್ನು ಘೋಷಿಸಿತು. ಇದರಲ್ಲಿ ಸೇನಾಕಾಂಕ್ಷಿಗಳಿಗೆ ಅಲ್ಪಾವಧಿ ಸೇವೆ, ಕಡಿಮೆ ಸೌಲಭ್ಯಗಳು, ಆರೋಗ್ಯ ವಿಮೆ ಸೇರಿದಂತೆ ಇನ್ನಿತರ ಸೇನಾ ಸೌಲಭ್ಯಗಳಿಂತ ವಂಚಿತರಾಗುವ ಅಪಾಯವನ್ನು ಯೋಜನೆಯಲ್ಲಿ ಕಂಡು ಬಂಡಿದೆ.

 ಬಿಹಾರದಾದ್ಯಂತ ಯೋಜನೆಯ ವಿರುದ್ಧ ಪ್ರತಿಭಟನೆ

ಬಿಹಾರದಾದ್ಯಂತ ಯೋಜನೆಯ ವಿರುದ್ಧ ಪ್ರತಿಭಟನೆ

ಹಾಗಾಗಿ ಈ ಕ್ರಮವು ರಕ್ಷಣಾ ಪಡೆಯ ಆಕಾಂಕ್ಷಿಗಳ ಕೋಪವನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಹಲವಾರು ಸ್ಥಳಗಳಲ್ಲಿ ವಿಶೇಷವಾಗಿ ಬಿಹಾರದಲ್ಲಿ ಬೀದಿಗಿಳಿದಿದ್ದಾರೆ. ಜೆಹಾನಾಬಾದ್, ಬಕ್ಸರ್ ಮತ್ತು ನವಾಡಾ ಜಿಲ್ಲೆಗಳಲ್ಲಿ ಪ್ರತಿಭಟನಾಕಾರರು ರೈಲ್ವೆ ಮತ್ತು ರಸ್ತೆ ಸಂಚಾರವನ್ನು ಅಡ್ಡಿಪಡಿಸಿ ಬಿಹಾರದಾದ್ಯಂತ ಯೋಜನೆಯ ವಿರುದ್ಧ ಪ್ರತಿಭಟನೆಗಳು ಮುಂದುವರೆದವು. ಜೆಹಾನಾಬಾದ್ ಮತ್ತು ಬಕ್ಸರ್ ಜಿಲ್ಲೆಗಳಲ್ಲಿ ರೈಲು ಹಳಿಗಳ ಮೇಲೆ ಮಲಗಿ ಜನರು ಪಾಟ್ನಾ-ಗಯಾ ಮತ್ತು ಪಾಟ್ನಾ-ಬಕ್ಸರ್ ಮಾರ್ಗಗಳಲ್ಲಿ ರೈಲುಗಳ ಸಂಚಾರವನ್ನು ತಡೆದರು. ಆದರೆ ಅಲ್ಲಿಂದ ಪ್ರತಿಭನಾಕಾರರನ್ನು ಪೊಲೀಸರು ಟ್ರ್ಯಾಕ್‌ನಿಂದ ತೆಗೆವು ಮಾಡಿದ್ದಾರೆ.

 ಸಾರ್ವಜನಿಕರು ಮತ್ತು ಪೊಲೀಸ್ ವಾಹನಗಳ ಮೇಲೆ ದಾಳಿ

ಸಾರ್ವಜನಿಕರು ಮತ್ತು ಪೊಲೀಸ್ ವಾಹನಗಳ ಮೇಲೆ ದಾಳಿ

ಹೊಸ ಸೇನಾ ನೇಮಕಾತಿ ಯೋಜನೆ ಅಗ್ನಿಪಥ್‌ ವಿರುದ್ಧದ ಪ್ರತಿಭಟನೆಗಳು ಸತತ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ಬೆಳಗ್ಗೆ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಜನಸಮೂಹ ರೈಲುಗಳಿಗೆ ಬೆಂಕಿ ಹಚ್ಚಿದೆ. ಸರ್ಕಾರವು ಯೋಜನೆಯನ್ನು ಸಮರ್ಥಿಸಿಕೊಂಡಿದೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಸತತ ಮೂರನೇ ದಿನ ಶುಕ್ರವಾರವೂ ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ, ಸಾರ್ವಜನಿಕರು ಮತ್ತು ಪೊಲೀಸ್ ವಾಹನಗಳ ಮೇಲೆ ದಾಳಿ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಬಲ್ಲಿಯಾದಲ್ಲಿ ಜನರ ಗುಂಪೊಂದು ರೈಲ್ವೇ ನಿಲ್ದಾಣಕ್ಕೆ ನುಗ್ಗಿ ರೈಲಿಗೆ ಬೆಂಕಿ ಹಚ್ಚಿದೆ. ಪೊಲೀಸರು ಅವರನ್ನು ಚದುರಿಸಲು ಬಲಪ್ರಯೋಗ ಮಾಡುವ ಮೊದಲು ರೈಲ್ವೆ ನಿಲ್ದಾಣದ ಆಸ್ತಿಯನ್ನು ಹಾನಿಗೊಳಿಸಿದ್ದಾರೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಸತತ ಮೂರನೇ ದಿನವಾದ ಶುಕ್ರವಾರ ಪೊಲೀಸ್ ವಾಹನಗಳು ಬೆಂಕಿಗೆ ಆಹುತಿಯಾಗಿದ್ದು, ಹೊಸ ನೇಮಕಾತಿ ಯೋಜನೆಯ ವಿರುದ್ಧ ಪ್ರತಿಭಟನೆಗಳ ನಡುವೆ ದಾಳಿ ನಡೆಸಿವೆ.

English summary
34 trains have been canceled after trains were set on fire by train protesters in Bihar condemning a new short-term project called 'Agnipath' presented by the central government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X