ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ನಿಪಥ್ ಯೋಜನೆ: ವಯೋಮಿತಿ ಹೆಚ್ಚಿಸಿದ್ದೂ ತೊಂದರೆಯೇ, ಕಾರಣ?

|
Google Oneindia Kannada News

ನವದೆಹಲಿ, ಜೂ. 18: ಸಶಸ್ತ್ರ ಪಡೆಗಳಿಗೆ ಅಲ್ಪಾವಧಿಯ ಅಗ್ನಿಪಥ್ ನೇಮಕಾತಿ ಯೋಜನೆಯ ಸಂದೇಹಗಳನ್ನು ನಿವಾರಿಸಲು ಮತ್ತು ಬೀದಿಗಳಲ್ಲಿ ಈಗಾಗಲೇ ರೈಲುಗಳನ್ನು ಸುಡುತ್ತಿರುವವರ ಕೋಪಾಗ್ನಿ ತಗ್ಗಿಸಲು, ಸರ್ಕಾರವು ಈ ವರ್ಷ ನೇಮಕಾತಿಯಲ್ಲಿ ಪಾಲ್ಗೊಲ್ಳುವವರಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಒಂದು ಬಾರಿ ಸಡಿಲಿಕೆಯನ್ನು ಘೋಷಿಸಿ 21 ರಿಂದ 23 ವರ್ಷಗಳಿಗೆ ಹೆಚ್ಚಿಸಿದೆ. ಆದರೆ ಈ ಒಂದು ಬಾರಿ ಸಡಿಲಿಕೆಯೂ ಸಮಸ್ಯೆ ಆಗಬಹುದು.

ನೇಮಕಾತಿ ಮಾಹಿತಿಯು ಈ ವರ್ಷ 46,000 ಸೈನಿಕರನ್ನು ನೇಮಕಾತಿ ಮಾಡಿಕೊಳ್ಳುತ್ತದೆ ಎಂದು ಹೇಳಿದೆ. ಇದು ಅಗ್ನಿಪಥ್ ಯೋಜನೆಯಡಿ ಮೊದಲ ವರ್ಷದಲ್ಲಿ ನೇಮಕಾತಿಗಾಗಿ ನಿರ್ದಿಷ್ಟಪಡಿಸಿದ ಸಂಖ್ಯೆಯಾಗಿದೆ. ಮೂರು ಪಡೆಗಳಿಗೆ ಒಟ್ಟಿಗೆ 2015 ರಿಂದ ಕಡಿಮೆ ನೇಮಕಾತಿ ನಡೆದಿದೆ. ಮೊದಲ ವರ್ಷದ ವಯೋಮಿತಿ ಸಡಿಲಿಕೆಯು ಎರಡು ವರ್ಷಗಳಲ್ಲಿ ಇಲ್ಲವಾಗಿದೆ. ಸದ್ಯ 46,000 ಹುದ್ದೆಗಳಿಗೆ ಹೆಚ್ಚಿನ ಅಭ್ಯರ್ಥಿಗಳು 2022ಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ಈ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರವು ಇನ್ನೂ ಯಾವುದೇ ಮುನ್ಸೂಚನೆಯನ್ನು ನೀಡಿಲ್ಲ.

ಅಗ್ನಿಪಥ್‌: ಜೂನ್ 30ರಂದು ದೇಶಾದ್ಯಂತ ಬಿಕೆಯು ಶಾಂತಿಯುತ ಧರಣಿ ಸತ್ಯಾಗ್ರಹಅಗ್ನಿಪಥ್‌: ಜೂನ್ 30ರಂದು ದೇಶಾದ್ಯಂತ ಬಿಕೆಯು ಶಾಂತಿಯುತ ಧರಣಿ ಸತ್ಯಾಗ್ರಹ

ಪ್ರತಿ ವರ್ಷ 50,000ಕ್ಕೂ ಹೆಚ್ಚು ಸೈನಿಕರ ನೇಮಕ

ಪ್ರತಿ ವರ್ಷ 50,000ಕ್ಕೂ ಹೆಚ್ಚು ಸೈನಿಕರ ನೇಮಕ

ಈ ವರ್ಷದ ಮಾರ್ಚ್‌ನಲ್ಲಿ ರಕ್ಷಣಾ ಸಚಿವಾಲಯವು ಸಂಸತ್ತಿನಲ್ಲಿ ತಿಳಿಸಿದ ನೇಮಕಾತಿ ಪ್ರಕ್ರಿಯೆ ಮಾಹಿತಿಯ ಪ್ರಕಾರ, ಕಳೆದ ಏಳು ವರ್ಷಗಳಲ್ಲಿ ನೇಮಕಾತಿ ರ್‍ಯಾಲಿಗಳ ಮೂಲಕ ಅಧಿಕಾರಿ ಶ್ರೇಣಿಗಿಂತ ಕೆಳಗಿರುವ ಸೈನ್ಯಕ್ಕೆ ಸೈನಿಕರ ನೇಮಕಾತಿ 2019 -2020ರಲ್ಲಿ 80,572 ರಷ್ಟಿದೆ. ಆದರೆ ಅದರ ನಂತರ ಇಷ್ಟು ವರ್ಷ ಕಳೆದರೂ ನೇಮಕಾತಿ ನಡೆದಿಲ್ಲ. 2015 ಮತ್ತು 2020 ರ ನಡುವೆ, ಸೇನೆಯು ಪ್ರತಿ ವರ್ಷ 50,000ಕ್ಕೂ ಹೆಚ್ಚು ಸೈನಿಕರನ್ನು ನೇಮಿಸಿಕೊಂಡಿದೆ ಎಂದು ದತ್ತಾಂಶಗಳನ್ನು ತೋರಿಸುತ್ತದೆ.

50,026 ಇನ್ನೂ ಕಡಿಮೆ ಜನರ ನೇಮಕ

50,026 ಇನ್ನೂ ಕಡಿಮೆ ಜನರ ನೇಮಕ

2015- 2016ರ ಸಾಲಿನಲ್ಲಿ ಸೇನೆಯು ದೇಶಾದ್ಯಂತ 71,804 ಸೈನಿಕರನ್ನು ನೇಮಕ ಮಾಡಿಕೊಂಡಿದ್ದು, 2016- 2017ರಲ್ಲಿ 52,447ಕ್ಕೆ ಇಳಿದಿದೆ. 2017-2018 ರಲ್ಲಿ ಸೈನ್ಯವು 50,026 ಇನ್ನೂ ಕಡಿಮೆ ಜನರನ್ನು ನೇಮಿಸಿಕೊಂಡಿದೆ. ಇದು 2018- 2019 ರಲ್ಲಿ 53,431 ನೇಮಕಾತಿಗಳಿಗೆ ಏರಿದೆ. 2019-2020 ರಲ್ಲಿ ಸೇನೆಯು ತನ್ನ ರ್‍ಯಾಲಿಗಳ ಮೂಲಕ 80,572 ನೇಮಕಾತಿಗಳನ್ನು ಮಾಡಿಕೊಂಡಾಗ ಇದು ಅತಿದೊಡ್ಡ ನೇಮಕಾತಿ ಎನಿಸಿದೆ. ಸದ್ಯ ಈ ವರ್ಷ 46,000 ಅಗ್ನಿವೀರ್‌ಗಳು ಎಲ್ಲಾ ಮೂರು ಪಡೆಗಳಿಗೆ ನೇಮಕಾತಿ ಆಗುತ್ತದೆ.

ಅಗ್ನಿಪಥ್ ಪ್ರತಿಭಟನೆ: ಒಟ್ಟು 2 ಬಲಿ- ಸಿಕಂದರಾಬಾದ್‌ನಲ್ಲಿ ಪ್ರಕರಣ ದಾಖಲುಅಗ್ನಿಪಥ್ ಪ್ರತಿಭಟನೆ: ಒಟ್ಟು 2 ಬಲಿ- ಸಿಕಂದರಾಬಾದ್‌ನಲ್ಲಿ ಪ್ರಕರಣ ದಾಖಲು

ಪ್ರತಿ ವರ್ಷ ಸುಮಾರು 50,000 ಅಗ್ನಿವೀರ್‌ ನೇಮಕ

ಪ್ರತಿ ವರ್ಷ ಸುಮಾರು 50,000 ಅಗ್ನಿವೀರ್‌ ನೇಮಕ

ಅಗ್ನಿಪಥ್ ಯೋಜನೆಯ ಅಡಿಯಲ್ಲಿ ಮೊದಲ ನಾಲ್ಕು ವರ್ಷಗಳಲ್ಲಿ ಮೂರು ಪಡೆಗಳಲ್ಲಿ ಒಟ್ಟು ಸೇರ್ಪಡೆ 2 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಅಂದರೆ 2,02,900 ಅಗ್ನಿವೀರ್‌ಗಳು, ಅದರಲ್ಲಿ ಸುಮಾರು 1,75,000 ಸೇನೆಗೆ ಸೇರಿದೆ ಎಂದು ಮೂಲಗಳು ತಿಳಿಸಿವೆ. ಇದು ಮುಂದಿನ ನಾಲ್ಕು ವರ್ಷಗಳಲ್ಲಿ ಎಲ್ಲಾ ಮೂರು ಪಡೆಗಳಿಗೆ ಪ್ರತಿ ವರ್ಷ ಸುಮಾರು 50,000 ಅಗ್ನಿವೀರ್‌ಗಳನ್ನು ಮಾತ್ರ ನೇಮಿಸಿಕೊಳ್ಳುತ್ತದೆ. ಇಲ್ಲಿ ಸಂಸತ್ತಿಗೆ ತಿಳಿಸಿದ ದತ್ತಾಂಶದ ಪ್ರಕಾರ 2015 ರಿಂದ ಸೇನೆಯಲ್ಲಿನ ಎಲ್ಲಾ ನೇಮಕಾತಿಗಳಲ್ಲಿ ಕೇವಲ ಎಂಟು ರಾಜ್ಯಗಳು ಶೇಕಡಾ 60ಕ್ಕಿಂತ ಹೆಚ್ಚು ನೇಮಕಾತಿ ಆಗಿದೆ.

ಕೆಲವು ರಾಜ್ಯಗಳಿಂದ ಒಟ್ಟು ನೇಮಕಾತಿ 3,08,280

ಕೆಲವು ರಾಜ್ಯಗಳಿಂದ ಒಟ್ಟು ನೇಮಕಾತಿ 3,08,280

ಅಂಕಿಅಂಶಗಳ ಪ್ರಕಾರ 2015 ರಿಂದ ಪಂಜಾಬ್, ಹರಿಯಾಣ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಿಂದ 1,86,795 ಮಂದಿಯನ್ನು ಸೇನೆಗೆ ನೇಮಿಸಿಕೊಳ್ಳಲಾಗಿದೆ. ಈ ವರ್ಷಗಳಲ್ಲಿ ಸೇನೆಯಲ್ಲಿ ಒಟ್ಟು ನೇಮಕಾತಿ 3,08,280 ಆಗಿತ್ತು. ಒಟ್ಟು ನೇಮಕಾತಿಯಲ್ಲಿ ಈ ರಾಜ್ಯಗಳ ಪಾಲು ಶೇಕಡಾ 60ಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಸದ್ಯ ಹೊಸ ಯೋಜನೆಯ ವಿರುದ್ಧದ ಯುವಕರ ಕೋಪವು ರೈಲುಗಳನ್ನು ಹೆಚ್ಚು ಧ್ವಂಸಗೊಳಿಸುವ ಸಾಧ್ಯತೆಯಿದೆ. ಏಕೆಂದರೆ ಸೇನೆಯ ನೇಮಕಾತಿ ಅಂಕಿ ಅಂಶಗಳು 2018-2019 ರಲ್ಲಿ ಮುಕ್ಕಾಲು ಭಾಗದಷ್ಟು ನೇಮಕಾತಿಗಳು ಸದರಿ ರಾಜ್ಯಗಳಿಂದಲೇ ಬಂದಿವೆ ಎಂದು ತೋರಿಸುತ್ತದೆ. ಸದರಿ ರಾಜ್ಯದಿಂದ ನೇಮಕಗೊಂಡವರು ಸೇನೆಯ ಒಟ್ಟು ಶೇಕಡಾ 78.32 ರಷ್ಟಿದ್ದರು ಮತ್ತು 2019-2020 ರಲ್ಲಿ ಈ ಪಾಲು ಶೇಕಡಾ 77.20 ರಷ್ಟಿತ್ತು.

ಜುಲೈ 2021 ರಿಂದ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ನೇಮಕಾತಿ ರ್‍ಯಾಲಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ರಕ್ಷಣಾ ಸಚಿವಾಲಯವು ಸಂಸತ್ತಿಗೆ ತಿಳಿಸಿತ್ತು. 2020-2021 ರಲ್ಲಿ ಸೇನೆಯು ದೇಶಾದ್ಯಂತ 47 ರ್‍ಯಾಲಿಗಳನ್ನು ನಡೆಸಿತ್ತು. ಆದರೆ ಮತ್ತೆ ಸಾಂಕ್ರಾಮಿಕ ರೋಗದಿಂದಾಗಿ ನೇಮಕಾತಿ ಪ್ರಕ್ರಿಯೆಯು ಆಗಿರಲಿಲ್ಲ. ರ್‍ಯಾಲಿಗಳು ಆ ವರ್ಷವೂ ಯಾವುದೇ ನೇಮಕಾತಿಗೆ ಕಾರಣವಾಗಲಿಲ್ಲ ಎಂದು ದಾಖಲೆಗಳು ತೋರಿಸಿದೆ.

English summary
The government has announced a one-year relaxation in the maximum age limit for recruits this year, from 21 to 23 years. But this can be a one time problem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X