ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಲಕರನ್ನು ಪೋಷಿಸದ ನೌಕರರ ಸಂಬಳ ಕಡಿತ: ಅಸ್ಸಾಂನಲ್ಲಿ ಹೊಸ ಕಾಯ್ದೆ

By Nayana
|
Google Oneindia Kannada News

ಗುವಾಹಟಿ, ಜು.28: ಪಾಲಕರ ಬಗ್ಗೆ ಕಾಳಜಿ ಮಾಡದ, ಅಂಗವಕಲ ಸಹೋದರ ಸಹೋದರಿಯನ್ನು ನೋಡಿಕೊಳ್ಳದ ಸರ್ಕಾರಿ ನೌಕರರ ಸಂಬಳದಲ್ಲಿ ಶೇ.10ರಿಂದ 15ರಷ್ಟು ಕಡಿತ ಮಾಡುವುದಾಗಿ ಅಸ್ಸಾಂ ಸರ್ಕಾರ ಘೋಷಿಸಿದೆ.

ಮಕ್ಕಳ ಮೇಲೆ ಅವಲಂಬಿತವಾಗಿರುವ ಯಾವುದೇ ಆದಾಯವಿಲ್ಲದ ಪಾಲಕರನ್ನು ಮಕ್ಕಳು ನಿರ್ಲಕ್ಷಿಸಬಾರದು ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಾಲಕರನ್ನಷ್ಟೇ ಅಲ್ಲದೆ ರಾಜ್ಯ ಸರ್ಕಾರ ನೌಕರರು ವಿಕಲಾಂಗ ಸೋದರ ಅಥವಾ ಸೋದರಿ ಹೊಂದಿದ್ದರೆ ಅವರ ಬಗ್ಗೆಯೂ ಸಂಪೂರ್ಣ ಕಾಳಜಿ ವಹಿಸಬೇಕು ಎಂದು ಹಣಕಾಸು ಸಚಿವ ಹಿಮಾಂತ ಬಿಸ್ವ ತಿಳಿಸಿದ್ದಾರೆ.

ದೊಮ್ಮಲೂರಿನ ಗಾರ್ಬೇಜ್ ಸ್ಟ್ರೀಟ್ ಈಗ ಅಜ್ಜ-ಅಜ್ಜಿ ರಸ್ತೆ!ದೊಮ್ಮಲೂರಿನ ಗಾರ್ಬೇಜ್ ಸ್ಟ್ರೀಟ್ ಈಗ ಅಜ್ಜ-ಅಜ್ಜಿ ರಸ್ತೆ!

ಯಾವುದೇ ಆದಾಯವಿಲ್ಲದ ಪೋಷಕರನ್ನು ಸರಕಾರಿ ನೌಕರಿಯಲ್ಲಿರುವ ಮಕ್ಕಳೇ ನೋಡಿಕೊಳ್ಳಬೇಕು. ಅಲ್ಲದೆ, ಸರಕಾರಿ ನೌಕರಿಯಲ್ಲಿರುವ ವ್ಯಕ್ತಿ ಮೇಲೆ ಅವಲಂಬಿತರಾಗಿರುವ ದಿವ್ಯಾಂಗ ಸಹೋದರ ಹಾಗೂ ಸಹೋದರಿಯರನ್ನು ನೌಕರರು ಸರಿಯಾಗಿ ನೋಡಿಕೊಳ್ಳಬೇಕೆಂದು ಈ ಕಾನೂನನ್ನು ಜಾರಿಗೆ ತರಲಿದ್ದೇವೆ ಎಂದಿದ್ದಾರೆ.

Aged parents negligence will be cost 10 to 15 percent salary deduction in Assam

ದೇಶದಲ್ಲೇ ಮೊದಲ ಬಾರಿಗೆ 2017ರ ಸೆಪ್ಟೆಂಬರ್​ನಲ್ಲಿ ರಾಜ್ಯ ಸರ್ಕಾರ, ಅಸ್ಸಾಂ ಎಂಪ್ಲಾಯೀಸ್​ ಪೇರೆಂಟಲ್​ ರೆಸ್ಪಾನ್ಸಿಬಿಲಿಟಿ ನಾರ್ಮ್ಸ್​ ಫಾರ್​ ಅಕೌಂಟೆಬಿಲಿಟಿ ಮಾನಿಟರಿಂಗ್​ ಆ್ಯಕ್ಟ್ 2017 (ಪ್ರಣಾಮ್) ಅ​ನ್ನು ಜಾರಿಗೊಳಿಸಿತ್ತು. ಪ್ರಣಾಮ್​ ಕಾಯಿದೆಯನ್ನು ಸೋಮವಾರ ಸದನದಲ್ಲಿ ಅಂಗೀಕರಿಸಿದ್ದು ಇದೇ ವರ್ಷ ಅಕ್ಟೋಬರ್​ 2 ರಿಂದ ಈ ನೂತನ ಕಾನೂನು ಜಾರಿಗೆ ಬರಲಿದೆ ಎಂದರು.

English summary
Government of Assam is implementing new law to ensure old age parents care by their children. The law has proposed to 10 to 15 percent salary deduction for the violation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X