ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ ಸ್ವಚ್ಛತಾ ಅಭಿಯಾನ, ಹಿಂಬಾಲಕರನ್ನು ಕಳೆದುಕೊಂಡ ಮೋದಿ

By Mahesh
|
Google Oneindia Kannada News

Recommended Video

ಮೋದಿ ಟ್ವಿಟ್ಟರ್ ನಲ್ಲಿ ಎಷ್ಟು ನಕಲಿ ಹಿಂಬಾಲಕರನ್ನ ಹೊಂದಿದ್ದಾರೆ ಗೊತ್ತಾ ? | Oneindia Kannada

ಬೆಂಗಳೂರು, ಜುಲೈ 13: ನಕಲಿ ಹಾಗೂ ಸ್ವಯಂಚಾಲಿತ ಖಾತೆಗಳ ವಿರುದ್ಧ ಸ್ವಚ್ಛತಾ ಅಭಿಯಾನ ಆರಂಭಿಸಿರುವ ಟ್ವಿಟ್ಟರ್ ಅನೇಕ ಶಂಕಾಸ್ಪದ ಖಾತೆಗಳನ್ನು ರದ್ದುಗೊಳಿಸಿದೆ. ಟ್ವಿಟ್ಟರ್ ನ ಈ ಕ್ರಮದಿಂದಾಗಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಅನೇಕ ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ.

ಹಲವಾರು ಟ್ವಿಟ್ಟರ್ ಬಳಕೆದಾರರು ತಮ್ಮ ಹಿಂಬಾಲಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಅನೇಕ ವಾಮಮಾರ್ಗವನ್ನು ಅನುಸರಿಸಿದ್ದಾರೆ. ಹೀಗಾಗಿ, ಗಣ್ಯರು ಸೇರಿದಂತೆ ಅನೇಕರ ಖಾತೆಗೆ ನಕಲಿ ಖಾತೆಗಳ ಸಂಖ್ಯೆಯೂ ಇದೆ ಎಂಬ ಆರೋಪ ಕೇಳಿಬಂದಿತ್ತು.

ಫೇಕ್ ಸುದ್ದಿ ತಡೆಗಟ್ಟಲು ವಾಟ್ಸಾಪ್ ನೀಡುತ್ತಿದೆ ಹೊಸ ಸೌಲಭ್ಯಫೇಕ್ ಸುದ್ದಿ ತಡೆಗಟ್ಟಲು ವಾಟ್ಸಾಪ್ ನೀಡುತ್ತಿದೆ ಹೊಸ ಸೌಲಭ್ಯ

ವಿಶೇಷವಾಗಿ ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು, ಪಕ್ಷದ ಅಧಿಕೃತ ಖಾತೆಗೆ ಅನೇಕ ನಕಲಿ ಖಾತೆಗಳು ಜೋಡಣೆಯಾಗುವುದನ್ನು ತಡೆಗಟ್ಟಲು ಇಲ್ಲಿ ತನಕ ಟ್ವಿಟ್ಟರ್ ವಿಫಲವಾಗಿತ್ತು. ಆದರೆ, ಈಗ ಉದ್ಯಮಿಗಳು ಹಾಗೂ ಮನರಂಜನಾ ಕ್ಷೇತ್ರದ ಗಣ್ಯರ ಟ್ವಿಟ್ಟರ್ ಖಾತೆಗಳನ್ನು ದುರ್ಬಳಕೆ ತಡೆಗಟ್ಟಲು ಟ್ವಿಟ್ಟರ್ ಕ್ರಮ ಜರುಗಿಸುತ್ತಿದೆ.

ಟ್ವಿಟ್ಟರ್ ಈ ಕ್ರಮದಿಂದಾಗಿ ಹಲವರ ಹಿಂಬಾಲಕರ ಸಂಖ್ಯೆ ಕಡಿಮೆಯಾಗಲಿದೆ. ಆದರೆ, ಇದರಿಂದ ನಿಖರವಾದ ಅನುಯಾಯಿಗಳ ಸಂಖ್ಯೆ ತಿಳಿಯಲಿದೆ ಎಂದು ಟ್ವಿಟ್ಟರ್ ಹೇಳಿದೆ. ಕೀಹೋಲ್ ಡೇಟಾ ಸಂಸ್ಥೆ ಪ್ರಕಾರ, ಜನಪ್ರಿಯ ಖಾತೆಗಳ ಸರಾಸರಿ ಶೇ2ರಷ್ಟು ಹಿಂಬಾಲಕರು ಕಡಿಮೆಯಾಗಲಿದೆ.

ಲಕ್ಷಾಂತರ ಹಿಂಬಾಲಕರನ್ನು ಕಳೆದುಕೊಂಡ ಮೋದಿ

ಲಕ್ಷಾಂತರ ಹಿಂಬಾಲಕರನ್ನು ಕಳೆದುಕೊಂಡ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 284,746 ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ. ಪ್ರಧಾನಿ ಮೋದಿ ಸುಮಾರು 43 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸುಮಾರು 17,000 ನಕಲಿ ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ.

ಶಶಿ ತರೂರ್

ಶಶಿ ತರೂರ್

ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರು ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿರುತ್ತಾರೆ. ಟ್ವಿಟ್ಟರ್ ಅಭಿಯಾನದಿಂದಾಗಿ ಶಶಿ ಅವರು ಕಳೆದ 24 ಗಂಟೆಗಳಲ್ಲಿ ಸುಮಾರು 151,509 ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ

ಅಮಿತ್ ಶಾ

ಅಮಿತ್ ಶಾ

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು 33,363 ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ.

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸುಮಾರು 91,555 ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ.

ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್

ಸುಮಾರು 53.4 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ವಿಶ್ವದ ಅಗ್ರಗಣ್ಯ ಟ್ವಿಟ್ಟರ್ ಖಾತೆದಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಮಾರು 100,000 ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ.

ಬರಾಕ್ ಒಬಾಮಾ

ಬರಾಕ್ ಒಬಾಮಾ

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು 104 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದು, ಸುಮಾರು 400,000 ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ.

English summary
Twitter's move to remove suspicious accounts from users' followers has hit the follower count of several eminent persons across the world. Twitter said it wants its users to have confidence that the follower numbers are "meaningful and accurate."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X