ಸ್ಕೂಪ್ ವೂಪ್ ಸಹ ಸಂಸ್ಥಾಪಕರ ವಿರುದ್ಧ ಲೈಂಗಿಕ ಕಿರುಕುಳ ಆರೋಪ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 12: ಭಾರತದ ಅಂತರ್ಜಾಲ ಸುದ್ದಿಸಂಸ್ಥೆಯಾದ ಸ್ಕೂಪ್ ವೂಪ್ ನ ಸಹ ಸಂಸ್ಥಾಪಕ ಸುಪರ್ಣ್ ಪಾಂಡೆ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಹಲ್ಲೆ ಮಾಡಿದ ದೂರು ದಾಖಲಾಗಿದೆ.

ವಾರದ ಹಿಂದಷ್ಟೇ, ದ ವೈರಲ್ ಫೀವರ್ (ಟಿವಿಎಫ್) ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ಅರುಣಾಭ್ ಕುಮಾರ್ ಅವರ ವಿರುದ್ಧವೂ ಲೈಂಗಿಕ ಕಿರುಕುಳದ ದೂರು ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

After TVF's Arunabh Kumar row, a ScoopWhoop co-founder Suparn Pandey face sexual harassment allegations

ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರು ವಸಂತ್ ಕುಂಜ್ ನಲ್ಲಿ ಈ ದೂರನ್ನು ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ, ಭಾರತೀಯ ದಂಡ ಸಂಹಿತೆ 354 ಎ, 509 ಹಾಗೂ 506 ಕಲಂಗಳ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ.

ದೂರಿನಲ್ಲೇನಿದೆ?:ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸಂತ್ರಸ್ಥ ಮಹಿಳೆಯು ಸ್ಕೂಪ್ ವೂಪ್ ನ ಎಲ್ಲಾ ಇತರ ಸಹ ಸಂಸ್ಥಾಪಕರಾದ ಸಾತ್ವಿಕ್ ಮಿಶ್ರಾ ಹಾಗೂ ಶ್ರೀಪರ್ಣ ಟಿಕೇಕರ್ ವಿರುದ್ಧವೂ ಲೈಂಗಿಕ ಕಿರುಕುಳ ಹಾಗೂ ಹಲ್ಲೆಯ ಆರೋಪ ಮಾಡಿದ್ದಾರೆ.

ಅಲ್ಲದೆ, ತಮ್ಮ ವಿರುದ್ಧ ಮಾಡಲಾದ ಈ ದುಷ್ಕೃತ್ಯವನ್ನು ಮರೆಮಾಚುವ ಪ್ರಯತ್ನಗಳನ್ನೂ ಮಾಡಲಾಗಿತ್ತೆಂದು ಆರೋಪಿಸಿರುವ ಅವರು, ಸ್ಕೂಪ್ ವೂಪ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗುವ ಮಹಿಳಾ ಉದ್ಯೋಗಿಗಳ ಕೂಗು ಕೇಳುವ ವ್ಯವಸ್ಥೆಯೂ ಇಲ್ಲವೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A former employee has accused co-founder of ScoopWhoop, Suparn Pandey of sexual harassment and assault. According to a FIR, the former employee has also accused other co-founders Sattvik Mishra and Sriparna Tikekar, of abetting the harassment and attempting to brush the incident aside.
Please Wait while comments are loading...