ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ ಸಾವಿನ ಸಂಖ್ಯೆಯಲ್ಲಿ ಫ್ರಾನ್ಸ್ ಹಿಂದಿಕ್ಕಿದ ಭಾರತ

|
Google Oneindia Kannada News

ದೆಹಲಿ, ಜುಲೈ 24: ಜಗತ್ತಿನಲ್ಲಿ ಈವರೆಗೂ 636,633 ಮಂದಿ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಅದರಲ್ಲಿ ಅಮೆರಿಕದಲ್ಲಿ ಹೆಚ್ಚು ಸಾವು ಸಂಭವಿಸಿದೆ. ವಿಶ್ವದಲ್ಲಿ ಅತಿ ಹೆಚ್ಚು ಕೊರೊನಾ ಸಾವು ಕಂಡಿರುವ ದೇಶಗಳ ಪಟ್ಟಿಯಲ್ಲಿ ಭಾರತ ಫ್ರಾನ್ಸ್ ದೇಶವನ್ನು ಹಿಂದಿಕ್ಕಿದೆ.

ಫ್ರಾನ್ಸ್‌ನಲ್ಲಿ ಇದುವರೆಗೂ 30,182 ಜನರು ಕೊವಿಡ್‌ನಿಂದ ಸಾವನ್ನಪ್ಪಿದ್ದಾರೆ. ಇಂದಿನ ವರದಿ ಬಳಿಕ ಭಾರತದಲ್ಲಿ ಕೊವಿಡ್‌ನಿಂದ ಮೃತಪಟ್ಟವರ ಸಂಖ್ಯೆ 30,601ಕ್ಕೆ ಏರಿಕೆಯಾಗಿದ್ದು, ಫ್ರಾನ್ಸ್ ಅಂಕಿ ಅಂಶವನ್ನು ಹಿಂದೆ ತಳ್ಳಿದೆ. ಈ ಮೂಲಕ ಜಗತ್ತಿನಲ್ಲಿ ಅತಿ ಹೆಚ್ಚು ಕೊವಿಡ್ ಸಾವು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನಕ್ಕೆ ಏರಿದೆ.

ಶುಕ್ರವಾರದ ವರದಿ ಪ್ರಕಾರ ಭಾರತದಲ್ಲಿ 24 ಗಂಟೆಗೆ 49,310 ಕೊವಿಡ್ ಕೇಸ್ ಪತ್ತೆಯಾಗಿದೆ. 740 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 12,87,945ಕ್ಕೆ ಏರಿಕೆಯಾದರೆ, ಒಟ್ಟು ಸಾವಿನ ಸಂಖ್ಯೆ 30,601 ಜಿಗಿದಿದೆ.

After Spain India Passed France In Covid 19 Death Numbers

ಅತಿ ಹೆಚ್ಚು ಕೊವಿಡ್ ಸಾವು ವರದಿಯಾಗಿರುವ ದೇಶಗಳ ಪಟ್ಟಿ:

- ಅಮೆರಿಕದಲ್ಲಿ 147,333 ಸಾವು

- ಬ್ರೆಜಿಲ್‌ನಲ್ಲಿ 84,207 ಸಾವು

- ಯುಕೆದಲ್ಲಿ 45,554 ಸಾವು

- ಮೆಕ್ಸಿಕೋದಲ್ಲಿ 41,190 ಸಾವು

- ಇಟಲಿಯಲ್ಲಿ 35,092 ಸಾವು

ಅಂದ್ಹಾಗೆ, ಅಮೆರಿಕ ಮತ್ತು ಬ್ರೆಜಿಲ್ ದೇಶಗಳನ್ನು ಬಿಟ್ಟರೆ ಉಳಿದ ದೇಶಗಳಲ್ಲಿ ಹೊಸ ಕೇಸ್‌ಗಳ ಸಂಖ್ಯೆ ಹಾಗೂ ಕೊವಿಡ್ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಮತ್ತೊಂದೆಡೆ ಭಾರತದಲ್ಲಿ ಎರಡೂ ಸಂಖ್ಯೆಯೂ ಏರಿಕೆಯಾಗಿದೆ. ಮುಂದಿನ ದಿನದಲ್ಲಿ ಭಾರತ ಈ ಪಟ್ಟಿಯಲ್ಲಿ ಮತ್ತಷ್ಟು ಮೇಲಕ್ಕೆ ಹೋಗುವ ಸಾಧ್ಯತೆ ಹೆಚ್ಚಿದೆ.

English summary
After spain, India Passed France in COVID 19 death numbers. now, India's COVID 19 death toll crosses 30,601 mark.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X