ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೊಬೈಲ್ ಸಿಮ್ ಗೆ ಆಧಾರ ಜೋಡಣೆ ಕಡ್ಡಾಯ’ ಸುಪ್ರಿಂ ಆದೇಶ

By Sachhidananda Acharya
|
Google Oneindia Kannada News

ನವದೆಹಲಿ, ಜೂನ್ 6: ಮೊಬೈಲ್ ಸಿಮ್ ದುರುಪಯೋಗ ತಡೆಗಟ್ಟಲು ಸಿಮ್ ಬಳಕೆದಾರರ ವಿವರಗಳ ಜತೆ ಆಧಾರ್ ಸಂಖ್ಯೆ ಜೋಡಣೆ ಮಾಡುವಂತೆ ಸುಪ್ರಿಂ ಕೋರ್ಟ್ ನಿರ್ದೇಶನ ನೀಡಿದೆ. ವರ್ಷದೊಳಗೆ ಈ ಜೋಡಣೆ ಮುಗಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಈ ನಿರ್ದೇಶನದ ಬೆನ್ನಲ್ಲೇ ಮೊಬೈಲ್ ಸೇವಾ ಕಂಪೆನಿಗಳು ತಮ್ಮ ತಮ್ಮ ಗ್ರಾಹಕರಿಗೆ ಸಿಮ್ ಜತೆ ಆಧಾರ್ ಜೋಡಣೆ ಮಾಡುವಂತೆ ಸಂದೇಶಗಳನ್ನು ಕಳುಹಿಸುತ್ತಿವೆ. ಇದಕ್ಕಾಗಿ ಹತ್ತಿರದ ರಿಟೇಲರನ್ನು ಸಂಪರ್ಕಿಸಿ ಎಂದು ಅವು ಗ್ರಾಹಕರನ್ನು ಕೋರಿಕೊಂಡಿವೆ.[ಆನ್ ಲೈನ್ ನಲ್ಲಿ ಪ್ಯಾನ್​ಗೆ ಆಧಾರ್ ಜೋಡಿಸುವುದು ಹೇಗೆ?]

After SC order its is mandatory to link Aadhaar with Mobile number

ಆಧಾರ್ ಜೋಡನೆ ಮಾಡುವುದು ಹೇಗೆ?

ಈ ಜೋಡಣೆ ನಿಯಮ ಎಲ್ಲ ಪೋಸ್ಟ್ ಪೇಯ್ಡ್ ಮತ್ತು ಪ್ರೀಪೇಯ್ಡ್ ಸಿಮ್ ಬಳಕೆದಾರರಿಗೆ ಅನ್ವಯವಾಗಲಿದೆ. ಬಯೋಮೆಟ್ರಿಕ್ ಮೇಷಿನ್ ಹೊಂದಿರುವ ಸಮೀಪದ ಮೊಬೈಲ್ ಅಂಗಡಿಗಳಿಗೆ ತೆರಳಿ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡಬಹುದಾಗಿದೆ.

ಕಳೆದ ವಾರ ಮೊಬೈಲ್ ಸಿಮ್ ದುರ್ಬಳಕೆ ತಡೆಗೆ ಏನೇನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ವಿವರಗಳನ್ನು ಸುಪ್ರಿಂ ಕೋರ್ಟ್ ಕೇಂದ್ರ ಸರಕಾರದ ಬಳಿ ಕೇಳಿಕೊಂಡಿತ್ತು. ಅದರಂತೆ ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ತ್ರಿಸದಸ್ಯ ಪೀಠ ಆಧಾರ್ ಜೋಡಣೆಯ ಆದೇಶ ನೀಡಿದೆ. ಒಂದು ವರ್ಷದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ.[ಪಾಕಿಸ್ತಾನಿ ಪ್ರಜೆಗಳಿಗೆ ಆಧಾರ್ ಮಾಡಿಸಲು ನೆರವಾದ ಬೆಂಗಳೂರಿನ ವೈದ್ಯೆ!]

ಇನ್ನು ರೀಚಾರ್ಜ್ ವೇಳೆಯೂ ಅರ್ಜಿ ತುಂಬಿ ಆಧಾರ್ ಜೋಡನೆ ಮಾಡಲು ಗ್ರಾಹಕರಿಗೆ ಅವಕಾಶ ಕಲ್ಪಿಸುವಂತೆ ಕೇಂದ್ರ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ಸೂಚನೆ ನೀಡಿದೆ. ಜತೆಗೆ ಸಿಮ್ ಕಾರ್ಡ್ ಗಳ ದುರ್ಬಳಕೆ ತಡೆಯಲು ಪ್ರತ್ಯೇಕ ನೀತಿ ಜಾರಿಗೆ ತರುವಂತೆಯೂ ಹೇಳಿದೆ.

English summary
Supreme Court gave direction to central government to link all existing user base, pre-paid and post-paid mobile number with unique Aadhaar identity number and biometric details. Telecom companies have been given an year's time to complete this activity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X