ಮೋದಿ ಸೀಪ್ಲೇನ್ ಪ್ರಯಾಣಕ್ಕೂ ಟೀಕೆಯ ಸುರಿಮಳೆ!

Posted By:
Subscribe to Oneindia Kannada
   ನರೇಂದ್ರ ಮೋದಿಯವರ ಸೀ ಪ್ಲೇನ್ ಪ್ರಯಾಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ | Oneindia Kannada

   ಪ್ರಧಾನಿ ನರೇಂದ್ರ ಮೋದಿ ಕೂತರೂ ಸುದ್ದಿ, ನಿಂತರೂ ಸುದ್ದಿ. ತಮ್ಮ ಪ್ರತಿನಡೆಯನ್ನೂ ಸುದ್ದಿಯಾಗುವ ಹಾಗೆ ಮಾಡೋದು ಹೇಗೆ ಅನ್ನೋ ಜಾಣ್ಮೆ ಅವರಿಗಿರುವುದರಿಂದಲೇ ದಿನೇ ದಿನೇ ಸೋಶಿಯಲ್ ಮಿಡಿಯಾದಲ್ಲಿ ತಮ್ಮದೇ ಟ್ರೆಂಡ್ ಸೃಷ್ಟಿಮಾಡುವ ತಾಕತ್ತೂ ಅವರಿಗೆ ಸಿದ್ಧಿಸಿದೆ. ನಿನ್ನೆ(ಡಿ.12)ಯೇ ನೋಡಿ, ಸಾಬರಮತಿ ನದಿಯಲ್ಲಿ ಸೀಪ್ಲೇನ್ ನಲ್ಲಿ ಪ್ರಯಾಣ ಮಾಡಿದ್ದೇ ಮಾಡಿದ್ದು. ಅಲ್ಲಿಯವರೆಗೂ ಸೀ ಪ್ಲೇನ್ ಎಂಬ ಕಾನ್ಸೆಪ್ಟೇ ಗೊತ್ತಿಲ್ಲದವರ ಬಾಯಲ್ಲೂ ಇಂದು ಸೀಪ್ಲೇನ್ ನರ್ತಿಸುತ್ತಿದೆ!

   ಗುಜರಾತ್ ವಿಧಾನಸಭಾ ಚುನಾವಣೆಗೆ ಡಿ. 14 ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿರುವ ಮೋದಿ, ನಿನ್ನೆ ಸೀಪ್ಲೇನ್ ನಲ್ಲಿ ಪ್ರಯಾಣಿಸಿದ್ದರು. ಡಿ. 9 ರಂದು ಇಲ್ಲಿ ಮೊದಲ ಹಂತದ ಮತದಾನ ನಡೆದಿದ್ದು, ಡಿ. 18 ರಂದು ಮತ ಎಣಿಕೆ ನಡೆಯಲಿದೆ.

   'ಸಾಗರ ವಿಮಾನ'ದಲ್ಲಿ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಪ್ರಯಾಣ

   ಭಾರತದ ಮೊದಲ ಸೀಪ್ಲೇನ್ ನ ಮೊಟ್ಟ ಮೊದಲ ಪ್ರಯಾಣಿಕ ನರೇಂದ್ರ ಮೋದಿ ಎಂಬ ವಿಷಯ ಸತ್ಯಾನಾ..? ಸಾಮಾಜಿಕ ಮಾಧ್ಯಮಗಳಲ್ಲಿ ಸೀಪ್ಲೇನ್ ಅನ್ನೋದು ಈಗ ಗದ್ದಲ ಎಬ್ಬಿಸಿದೆ.' ಭಾರತದಲ್ಲಿ ಇದಕ್ಕೂ ಮೊದಲೇ ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಸೀಪ್ಲೇನ್ ಇತ್ತು, ನಂತರ ಕೇರಳ ಮತ್ತು ಮುಂಬೈಯಲ್ಲೂ ಇದ್ದವು. ಆದರೆ ಬಿಜೆಪಿ, ಇದು ಮೊಟ್ಟ ಮೊದಲ ಸೀಪ್ಲೇನ್ ಎಂದು ಬೊಗಳೆ ಬಿಡುತ್ತಿದೆ' ಎಂದು ಕೆಲವರು ಮೋದಿಯವರನ್ನು ಚೆನ್ನಾಗಿ ಟೀಕಿಸಿದ್ದಾರೆ!

   'ಪ್ರಶ್ನೆಯಿಂದ ನುಣುಚಿಕೊಳ್ಳಲು ಸಾಗರ ವಿಮಾನದಲ್ಲಿ ಮೋದಿ ಹಾರಾಟ'

   ಒಟ್ಟಿನಲ್ಲಿ ಸೀಪ್ಲೇನ್, ಸೀಪ್ಲೇನ್ ವಿಕಾಸ್ ಎಂಬಿತ್ಯಾದಿ ಹ್ಯಾಶ್ ಟ್ಯಾಗ್ ನಲ್ಲಿ ಟ್ವಿಟ್ಟರ್ ನಲ್ಲೂ ಟ್ರೆಂಡಿಂಗ್ ಆಗಿದ್ದು, ಮೊಟ್ಟ ಸಾಗರ ವಿಮಾನ ಅನ್ನೋದು ಕಂಬಿ ಇಲ್ಲದ ರೈಲು ಎಂಬಂತೆ ಹಲವರು ಆಡಿಕೊಂಡಿದ್ದಾರೆ. ಮತ್ತಷ್ಟು ಜನ ಮೋದಿಯವರನ್ನು ಸಮರ್ಥಿಸಿಕೊಂಡಿದ್ದಾರೆ ಸಹ.

   ಇದು ಮೊದಲ ಸೀಪ್ಲೇನ್ ಆಗೋಗೆ ಹೇಗೆ ಸಾಧ್ಯ?!

   ಬಿಜೆಪಿ, ಇದನ್ನು ಮೊದಲ ಸೀಪ್ಲೇನ್ ಎಂದು ಕರೆಯುತ್ತಿರುವುದು ಯಾಕೆ ಅಂತ ನನಗೆ ಅರ್ಥವಾಗುತ್ತಿಲ್ಲ. ಇದಕ್ಕೂ ಮೊದಲೇ ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಸೀಪ್ಲೇನ್ ವೊಂದು ಕೆಲಸಮಾಡುತ್ತಿದೆ. ಕೇರಳ ಮತ್ತು ಮುಂಬೈನಲ್ಲೂ ತಲಾ ಒಂದೊಂದು ಸೀಪ್ಲೇನ್ ಗಳ ಉದ್ಘಾಟನೆಯಾಗಿದೆ. ಆದರೂ ಮೋದಿ ಏಕೆ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರತೀಕ್ ಅಗರ್ವಾಲ್ ಎಂಬುವವರು ಪ್ರಶ್ನಿಸಿದ್ದಾರೆ.

   ಕಾಂಗ್ರೆಸ್ಸಿಗೆ ಕಾಣುವುದೆಲ್ಲ ಋಣಾತ್ಮಕ ಅಂಶಗಳೇ!

   ಕಾಂಗ್ರೆಸ್ ಪ್ರಕಾರ ಸೀಪ್ಲೇನ್, ಬುಲೆಟ್ ಟ್ರೈನ್, ಜಿಡಿಪಿ ಬೆಳವಣಿಗೆ, ರೈತರಿಗೆ ಸಾಲ... ಇದ್ಯಾವುದೂ ವಿಕಾಸವಲ್ಲ. ಅವರಿಗೆ ಭಾರತ ಮತ್ತು ಮೋದಿಯವರನ್ನು ತೆಗಳುವುದನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು ಪ್ರದೀಪ್ ಕುಮಾರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

   ಬೆಳ್ಳಂದೂರು ಕೆರೆಯಲ್ಲಿ ನೊರೆಯ ಸ್ನಾನ!

   ಮೋದಿಯವರ ಸೀಪ್ಲೇನ್ ಗೆ ಪ್ರತಿಸ್ಪರ್ಧೆ ನೀಡುವುದಕ್ಕೆ ಕಾಂಗ್ರೆಸ್ಸು ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಸಾಮೂಹಿಕ ನೊರೆಯ ಸ್ನಾನ ಮಾಡಿಸುತ್ತದೆಯಂತೆ ಎಂದು ಅಭಿಜಿತ್ ಎಂಬುವವರು ವ್ಯಂಗ್ಯವಾಗಿ ಟ್ವೀಟ್ ಮಾಡಿ, ಒಂದೆಡೆ ಕಾಂಗ್ರೆಸ್ ಮತ್ತು ಇನ್ನೊಂದೆಡೆ ಬೆಳ್ಳಂದೂರು ಕೆರೆಯ ಮೂಲಕ ಬೆಂಗಳೂರಿನ ಮಾನವನ್ನೂ ಹರಾಜುಹಾಕಿದ್ದಾರೆ!

   ಪ್ರಧಾನಿಯೇ ಸರ್ಕಾರದ ನಿಯಮ ಮುರಿವುದು ಸರಿಯೇ?

   ಭಾರತೀಯ ಸರ್ಕಾರದ ನಿಯಮದ ಪ್ರಕಾರ ಸಿಂಗಲ್ ಎಂಜಿನ್ ಏರ್ ಕ್ರಾಫ್ಟ್ ನಲ್ಲಿ ಪ್ರಯಾಣಿಸುವಂತಿಲ್ಲ. ಅದೂ ಒಬ್ಬ ವಿದೇಶಿ ಪೈಲೆಟ್ ಜೊತೆ. ಸರ್ಕಾರದ ನಾಯಕರಾಗಿ ಮೋದಿಯವರೇ ಸರ್ಕಾರದ ನಿಯಮಗಳನ್ನು ಮುರಿಯುವುದು ಸರಿಯೇ ಎಂದು ಕೆಬಿ ಬೈಜು ಎಂಬುವವರು ಟ್ವೀಟ್ ಮಾಡಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Prime minister Narendra Modi who has travelled in seaplane on Dec 12th in Gujarat is a centre of debate now! Seaplane is trending in twitter.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ