ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಫೈಜರ್ ಬಳಿಕ ಮತ್ತೊಂದು ಕೊರೊನಾ ಲಸಿಕೆ ಅನುಮೋದನೆಗೆ ಮನವಿ

|
Google Oneindia Kannada News

ನವದೆಹಲಿ, ಡಿಸೆಂಬರ್ 07:ಫೈಜರ್ ಕೊರೊನಾ ಲಸಿಕೆ ಬಳಿಕ ಸೆರಂ ಇನ್‌ಸ್ಟಿಟ್ಯೂಟ್ ಕೂಡ ತಮ್ಮ ಕೊರೊನಾ ಲಸಿಕೆಯನ್ನು ಅನುಮೋದಿಸುವಂತೆ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿದೆ.

ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಇಡೀ ವಿಶ್ವದಲ್ಲೇ ಅತಿದೊಡ್ಡ ಔಷಧ ತಯಾರಕ ಕಂಪನಿಯಾಗಿದೆ.

ಕೊರೊನಾ ಲಸಿಕೆಯನ್ನು ತುರ್ತು ಸಂದರ್ಭಗಳಲ್ಲಿ ನೀಡಲು ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಿದೆ. ಸೇರಂ ಇನ್‌ಸ್ಟಿಟ್ಯೂಟ್, ಆಸ್ಟ್ರಾ ಜೆನೆಕಾ, ಆಕ್ಸ್‌ಫರ್ಡ್ ಸೇರಿ ಕೊರೊನಾ ಲಸಿಕೆಯನ್ನು ಸಿದ್ಧಪಡಿಸುತ್ತಿದೆ.

ಇದೀಗ ಸರ್ಕಾರವು ಅನುಮತಿ ನೀಡಿದರೆ ದೇಶದಲ್ಲೇ ತುರ್ತು ಸಂದರ್ಭದಲ್ಲಿ ಬಳಕೆಗೆ ಅವಕಾಶ ಪಡೆದ ಎರಡನೇ ಕೊರೊನಾ ಲಸಿಕೆ ಇದಾಗಲಿದೆ.

ಕೊವಿಶೀಲ್ಡ್ ಬಗ್ಗೆ ಮಾಹಿತಿ ನೀಡಿದ ಸೆರಂ

ಕೊವಿಶೀಲ್ಡ್ ಬಗ್ಗೆ ಮಾಹಿತಿ ನೀಡಿದ ಸೆರಂ

ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು ಆಸ್ಟ್ರಾಜೆನೆಕಾದ ಜತೆ ಸೇರಿ ಕೊವಿಶೀಲ್ಡ್ ಕೊರೊನಾ ಲಸಿಕೆಯನ್ನು ಉತ್ಪಾದಿಸುತ್ತಿದೆ. ಇತ್ತೀಚೆಗಷ್ಟೇ ಈ ಲಸಿಕೆಯನ್ನು ಪಡೆದು ಸ್ವಯಂಸೇವಕರೊಬ್ಬರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಆದರೆ ಅವರ ಅನಾರೋಗ್ಯಕ್ಕೆ ಕಾರಣ ಲಸಿಕೆಯಲ್ಲ ಎಂದು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿತ್ತು. ಕೊವಿಶೀಲ್ಡ್ ಲಸಿಕೆಯು ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ.

ಯುಕೆ ಹಾಗೂ ಬ್ರೆಜಿಲ್‌ನಲ್ಲಿ ಮೂರನೇ ಹಂತದ ಪ್ರಯೋಗ

ಯುಕೆ ಹಾಗೂ ಬ್ರೆಜಿಲ್‌ನಲ್ಲಿ ಮೂರನೇ ಹಂತದ ಪ್ರಯೋಗ

ಯುಕೆ, ಬ್ರೆಜಿಲ್‌ನಲ್ಲಿ ಕೊವಿಶೀಲ್ಡ್ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ. ಕೊವಿಶೀಲ್ಡ್ ಲಸಿಕೆಗೆ ಒಪ್ಪಿಗೆ ನೀಡುವುದಿಲ್ಲ ಎನ್ನುವುದಕ್ಕೆ ಯಾವುದೇ ಕಾರಣವಿಲ್ಲ ಸರ್ಕಾರವು ಕಳೆದ ವಾರವಷ್ಟೇ ಸ್ಪಷ್ಟಪಡಿಸಿತ್ತು.

ಕೊವಿಶೀಲ್ಡ್ ಶೇ.70ರಷ್ಟು ಸುರಕ್ಷಿತ

ಕೊವಿಶೀಲ್ಡ್ ಶೇ.70ರಷ್ಟು ಸುರಕ್ಷಿತ

ಯುಕೆ ಹಾಗೂ ಬ್ರೆಜಿಲ್‌ನಲ್ಲಿ ಕೊವಿಶೀಲ್ಡ್ ಕೊರೊನಾ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆದಿದ್ದು, ಲಸಿಕೆ ಶೇ.70ರಷ್ಟು ಸುರಕ್ಷಿತ ಎನ್ನುವ ಮಾಹಿತಿ ಲಭ್ಯವಾಗಿದೆ. ಮಾಡೆರ್ನಾ ಹಾಗೂ ಫೈಜರ್ ಕೊರೊನಾ ಸೋಂಕಿನ ವಿರುದ್ಧ ಖಂಡಿತವಾಗಿಯೂ ಹೋರಾಡಲಿದೆ ಎಂದು ಭರವಸೆ ನೀಡಿದೆ.

ವೃದ್ಧರ ಮೇಲೂ ಕೊರೊನಾ ಲಸಿಕೆ ಪರಿಣಾಮಕಾರಿ

ವೃದ್ಧರ ಮೇಲೂ ಕೊರೊನಾ ಲಸಿಕೆ ಪರಿಣಾಮಕಾರಿ

ಕೊವಿಶೀಲ್ಡ್ ಕೊರೊನಾ ಲಸಿಕೆಯು ವೃದ್ಧರ ಮೇಲೂ ಕೂಡ ಪರಿಣಾಮಕಾರಿಯಾಗಿದೆ. ಕೊರೊನಾ ವೈರಸ್ ವಿರುದ್ಧ ಹೋರಾಡಲು ಇದು ನೆರವಾಗುತ್ತದೆ. 2021ರಲ್ಲಿ 100 ಮಿಲಿಯನ್ ಡೋಸ್‌ಗಳನ್ನು ಸಿದ್ಧಪಡಿಸಲಾಗುತ್ತದೆ. ಕೊವಿಶೀಲ್ಡ್ ಲಸಿಕೆಯನ್ನು 2-8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇರಿಸಬೇಕಾಗುತ್ತದೆ.

Recommended Video

ಎತ್ತರದ ಶಿಖರ Mt Everest , ಪುನಃ ಅಳತೆ ಮಾಡ್ಬೇಕಂತೆ | Oneindia Kannada

English summary
Serum Institute of India, the world's largest vaccine maker by number of doses produced, has sought government approval for emergency use authorisation of the coronavirus vaccine that it is developing with the University of Oxford and British drugmaker AstraZeneca, sources have said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X