ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣದಲ್ಲಿ ಮೋದಿ ಅಲೆ, ಬಿಜೆಪಿಗೆ ನಾಗಾರ್ಜುನ ಬೆಂಬಲ

By Mahesh
|
Google Oneindia Kannada News

ಅಹಮದಾಬಾದ್, ಮಾ.24: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ದಕ್ಷಿಣ ಭಾರತದಲ್ಲಿ ಬಿಜೆಪಿ ಅಲೆ ಎಬ್ಬಿಸಲು ಮಾಡಿರುವ ಪ್ರಯತ್ನ ಫಲಕಾರಿಯಾಗುತ್ತಿದೆ. ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ತಮ್ಮ ಹೊಸ ಪಕ್ಷ 'ಜನಸೇನ' ಮೂಲಕ ಬಿಜೆಪಿಗೆ ಸಂಪೂರ್ಣ ಬೆಂಬಲ ಘೋಷಿಸಿದ ಬೆನ್ನಲ್ಲೇ ಯುವಸಾಮ್ರಾಟ್ ಎಂದು ಕರೆಸಿಕೊಳ್ಳುವ ಅಕ್ಕಿನೇನಿ ನಾಗಾರ್ಜುನ ಅವರು ಮೋದಿಗೆ ಜೈಕಾರ ಹಾಕಿದ್ದಾರೆ.

ಅಹಮದಾಬಾದಿನಲ್ಲಿ ಮೋದಿ ನಿವಾಸದಲ್ಲಿ ಸೋಮವಾರ ಸಂಜೆ 5.05 ಸುಮಾರಿಗೆ ಅಕ್ಕಿನೇನಿ ನಾಗಾರ್ಜುನ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತು ಕತೆ ನಡೆಸಿದರು. ಆಂಧ್ರಪ್ರದೇಶ ವಿಭಜನೆ ನಂತರ ಉಂಟಾಗಿರುವ ಪರಿಸ್ಥಿತಿ, ಸಾಂಸ್ಕೃತಿಕ ವಿನಿಮಯ, ಬಿಜೆಪಿ ಅಭ್ಯರ್ಥಿಗಳಿಗೆ ಅಕ್ಕಿನೇನಿ ಕುಟುಂಬದಿಂದ ಪ್ರಚಾರ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಮೂಲಗಳ ಪ್ರಕಾರ ನಟ ನಾಗಾರ್ಜುನ ಅವರು ಬಿಜೆಪಿ ಸೇರುವ ಕುರಿತು ನಿರ್ಧರಿಸಿದ್ದು, ತಮ್ಮ ಪತ್ನಿ ಅಮಲಾ ಅವರಿಗೆ ಬಿಜೆಪಿ ಪರವಾಗಿ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವಿಷಯವಾಗಿಯೇ ಈ ಹಿಂದೆ ಆಂಧ್ರ ಪ್ರದೇಶದ ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದ್ದ ನಾಗಾರ್ಜುನ ಅವರು, ನಾಯ್ಡು ಅವರ ಸಲಹೆ ಮೇರೆಗೆ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಅಹಮದಾಬಾದ್ ‌ಗೆ ತೆರಳಿದ್ದಾರೆ.

ಅಕ್ಕಿನೇನಿ ನಾಗಾರ್ಜುನಗೆ ರಾಜಕೀಯದಲ್ಲಿ ಆಸಕ್ತಿ

ಅಕ್ಕಿನೇನಿ ನಾಗಾರ್ಜುನಗೆ ರಾಜಕೀಯದಲ್ಲಿ ಆಸಕ್ತಿ

ಈ ಹಿಂದೆ 2008ರಲ್ಲಿ ವೈಎಸ್ಸಾರ್ ಪಕ್ಷದ ಮುಖ್ಯಸ್ಥ ವೈ.ಎಸ್.ರಾಜಶೇಖರ ರೆಡ್ಡಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪರ ನಾಗಾರ್ಜುನ ಪ್ರಚಾರ ನಡೆಸಿದ್ದರು. ಆದರೆ, ಚುನಾವಣೆ ನಂತರ ರಾಜಕೀಯದಿಂದ ದೂರಸರಿದಿದ್ದರು.

ಕಾಂಗ್ರೆಸ್ ನಿಂದ ಬಿಜೆಪಿಯತ್ತ ತಿರುಗಿದ್ದು ಏಕೆ?

ಕಾಂಗ್ರೆಸ್ ನಿಂದ ಬಿಜೆಪಿಯತ್ತ ತಿರುಗಿದ್ದು ಏಕೆ?

ಮೊದಲಿನಿಂದಲೂ ವೈಎಸ್ ರಾಜಶೇಖರ ರೆಡ್ಡಿ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡುತ್ತಾ ಬಂದಿರುವ ಅಕ್ಕಿನೇನಿ ನಾಗೇಶ್ವರ್ ರಾವ್ ಹಾಗೂ ನಾಗಾರ್ಜುನ ಅವರು ಬಿಜೆಪಿಯತ್ತ ಮುಖ ಮಾಡಿದ್ದು ಕಡಿಮೆ. ಆದರೆ, ಈಗ ಅಕ್ಕಿನೇನಿ ನಾಗೇಶ್ವರ್ ರಾವ್ ಹಾಗೂ ವೈಎಸ್ಸಾರ್ ರೆಡ್ಡಿ ಇಬ್ಬರ ಮರಣಾನಂತರ ನಾಗಾರ್ಜುನ ಅವರು ಬಿಜೆಪಿಯತ್ತ ತಿರುಗಿದ್ದಾರೆ.

ವೈಎಸ್ಸಾರ್ ರೆಡ್ಡಿ ಅವರ ನಿಧನ ನಂತರ ಕಾಂಗ್ರೆಸ್ ಪಕ್ಷದಲ್ಲಿ ನಡೆದ ಆಂತರಿಕ ಕಚ್ಚಾಟ, ವೈಎಸ್ಸಾರ್ ಪಕ್ಷದಲ್ಲಿ ಬದಲಾವಣೆ, ಜಗನ್ ಮೋಹನ್ ರೆಡ್ಡಿ ಜೈಲಿಗೆ ಹೋಗಿದ್ದು ಹಾಗೂ ಇತ್ತೀಚೆಗೆ ಆಂಧ್ರ ವಿಭಜನೆಯಲ್ಲಿ ಕಾಂಗ್ರೆಸ್ ಮುಖಂಡರ ವರ್ತನೆಯಿಂದ ಬೇಸತ್ತ ನಾಗಾರ್ಜುನ ಅವರು ಬಿಜೆಪಿ ಪಕ್ಷದತ್ತ ಒಲವು ತೋರಿದ್ದಾರೆ ಎನ್ನಲಾಗಿದೆ.

ಪವನ್ ಕಲ್ಯಾಣ್ ಹಾದಿಯಲ್ಲೇ ನಾಗಾರ್ಜುನ

ಪವನ್ ಕಲ್ಯಾಣ್ ಹಾದಿಯಲ್ಲೇ ನಾಗಾರ್ಜುನ

ಕಳೆದ ಶುಕ್ರವಾರ ಟಾಲಿವುಡ್ ‌ನ ಪವರ್ ಸ್ಟಾರ್ ಹಾಗೂ ಕೇಂದ್ರ ಸಚಿವ ಚಿರಂಜೀವಿ ಅವರ ಕಿರಿಯ ಸಹೋದರ ನಟ ಪವನ್ ಕಲ್ಯಾಣ್ ಅವರು ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಬಿಜೆಪಿ ಪಕ್ಷಕ್ಕೆ, ಮೋದಿ ಪ್ರಧಾನಿ ಅಭ್ಯರ್ಥಿಯಾಗಲು ತಮ್ಮ ಬೆಂಬವಿದೆ ಎಂದು ಘೋಷಿಸಿದ್ದರು. [ವಿವರ ಇಲ್ಲಿ ಓದಿ]

ಮೋದಿ- ನಾಗಾರ್ಜುನ ಭೇಟಿ ಚಿತ್ರ ಟ್ವೀಟ್

ಮೋದಿ- ನಾಗಾರ್ಜುನ ಭೇಟಿ ಚಿತ್ರ ಟ್ವೀಟ್ ಮಾಡಿರುವ ಎಎನ್ ಐ ಸುದ್ದಿ ಸಂಸ್ಥೆ

ಟಿಡಿಪಿ ತೊರೆದ ನಟ, ಮಾಜಿ ಸಚಿವ ಬಾಬುಮೋಹನ್

ಟಿಡಿಪಿ ತೊರೆದ ನಟ, ಮಾಜಿ ಸಚಿವ ಬಾಬುಮೋಹನ್

ಮಾಜಿ ಸಚಿವ ಮತ್ತು ಖ್ಯಾತ ಹಾಸ್ಯ ನಟ ಬಾಬು ಮೋಹನ್ ಅವರು ತೆಲುಗು ದೇಶಂ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಪಕ್ಷದಲ್ಲಿ ತಮಗೆ ಯಾವುದೇ ಗೌರವ ನೀಡುತ್ತಿಲ್ಲ. ಕೆಲ ನಾಯಕರು ತಮ್ಮ ಸ್ವಾರ್ಥಕ್ಕಾಗಿ ತಮಗೆ ಟಿಕೆಟ್ ದೊರೆಯದಂತೆ ಮಾಡುತ್ತಿದ್ದಾರೆ ಎಂದು ಬಾಬು ಮೋಹನ್ ಅವರು ಆರೋಪಿಸಿದ್ದಾರೆ. ಅವರನ್ನು ಬಿಜೆಪಿಯತ್ತ ಸೆಳೆಯಲು ಸ್ಟಾರ್ ಗಳನ್ನು ಬಳಸಲಾಗುತ್ತಿದೆ.

ಟಿಕೆಟ್ ಕೇಳಲು ಹೋಗಿರಲಿಲ್ಲ, ರಾಜಕೀಯ ದೂರ

ನನಗಾಗಲಿ, ನನ್ನ ಪತ್ನಿ ಅಮಲಾಗಾಗಲಿ ಟಿಕೆಟ್ ಕೇಳಲು ಹೋಗಿರಲಿಲ್ಲ ಎಂದು ನಾಗಾರ್ಜುನ ಸ್ಪಷ್ಟಪಡಿಸಿದ್ದಾರೆ.

English summary
It seems that Bharatiya Janata Party (BJP) and its prime ministerial candidate Narendra Modi are all set to build a strong base in South India as many of the superstars from the region have extended their friendly hands towards the party. After Pawan Kalyan, now Nagarjuna meets Modi in Ahmedabad on Monday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X