ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಮೊದಲ ಕೊರೊನಾ ಲಸಿಕೆ ಯಾವುದು, ಸಿಗುವುದು ಯಾವಾಗ?

|
Google Oneindia Kannada News

ನವದೆಹಲಿ, ಡಿಸೆಂಬರ್.01: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಯಾವಾಗ ಸಿಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆಕ್ಸ್ ಫರ್ಡ್ ಮತ್ತು ಅಸ್ಟ್ರಾಜೆನಿಕಾ ಸಂಸ್ಥೆ ಸಂಶೋಧಿಸಿರುವ ಕೊರೊನಾವೈರಸ್ ಲಸಿಕೆಯು 2021ರ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಬಳಕೆಗೆ ಸಿಗಲಿದೆ.

ಕೊರೊನಾವೈರಸ್ ಲಸಿಕೆ ಉತ್ಪಾದನೆಗೆ ಸಹಭಾಗಿತ್ವ ಹೊಂದಿರುವ ಪೂಣೆ ಮೂಲದ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಕೋವಿಶೀಲ್ಡ್ ಸಹಭಾಗಿತ್ವದಲ್ಲಿ 1600 ಸ್ವಯಂ ಸೇವಕರ ಮೇಲೆ 2 ಮತ್ತು 3ನೇ ಹಂತದ ವೈದ್ಯಕೀಯ ಪ್ರಯೋಗವನ್ನು ನಡೆಸಲಾಗಿದೆ ಎಂದು ಕಂಪನಿಯು ತಿಳಿಸಿದೆ.

ಭಾರತೀಯರು ಕೊರೊನಾ ಲಸಿಕೆಗೆ ಎಷ್ಟು ಸನಿಹದಲ್ಲಿದ್ದಾರೆ? ಇಲ್ಲಿದೆ ಮಾಹಿತಿಭಾರತೀಯರು ಕೊರೊನಾ ಲಸಿಕೆಗೆ ಎಷ್ಟು ಸನಿಹದಲ್ಲಿದ್ದಾರೆ? ಇಲ್ಲಿದೆ ಮಾಹಿತಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚಿಗಷ್ಟೇ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ ಮಾತನಾಡಿದ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಅದರ್ ಪೂನಾವಾಲಾ, ತುರ್ತು ಪರಿಸ್ಥಿತಿಯಲ್ಲಿ ಕೊರೊನಾ ಲಸಿಕೆ ಬಳಸುವುದಕ್ಕೆ ಅನುಮೋದನೆ ನೀಡುವಂತೆ ಕೋರಲಾಗಿದೆ ಎಂದಿದ್ದರು.

ವಿದೇಶಗಳಲ್ಲಿ ಕೊರೊನಾವೈರಸ್ ಲಸಿಕೆ ವೈದ್ಯಕೀಯ ಪ್ರಯೋಗ

ವಿದೇಶಗಳಲ್ಲಿ ಕೊರೊನಾವೈರಸ್ ಲಸಿಕೆ ವೈದ್ಯಕೀಯ ಪ್ರಯೋಗ

ಆಸ್ಟ್ರಾಜೆನಿಕಾ ನಡೆಸಿದ ಆಂತರಿಕ ಮತ್ತು ಸಾರ್ವಜನಿಕ ವೈದ್ಯಕೀಯ ಪ್ರಯೋಗಕ್ಕೆ ಇಂಗ್ಲೆಂಡ್ ಮತ್ತು ಬ್ರೆಜಿಲ್ ರಾಷ್ಟ್ರಗಳು ಸಾಕ್ಷಿಯಾದವು. ಕೊವಿಡ್-19 ಲಸಿಕೆಯ ಎರಡು ವಿಭಿನ್ನ ಡೋಸ್ ಗಳನ್ನು ನೀಡಿದ ಸಂದರ್ಭದಲ್ಲಿ ಸೋಂಕಿತರ ಆರೋಗ್ಯದಲ್ಲಿ ಶೇ.7040ರಷ್ಟು ಚೇತರಿಕೆ ಕಂಡು ಬಂದಿರುವುದು ಗೊತ್ತಾಗಿದೆ. ಇದೇ ಲಸಿಕೆ ಭಾರತದಲ್ಲಿ 368 ರೂಪಾಯಿಯಿಂದ 440 ರೂಪಾಯಿಗೆ ಲಸಿಕೆಯು ಸಿಗಲಿದ್ದು, ಯಾವಾಗ ಎಂಬುದರ ಬಗ್ಗೆ ಸಮಯವನ್ನು ನಿಗದಿಗೊಳಿಸಿಲ್ಲ.

2021ರ ಫೆಬ್ರವರಿ ವೇಳೆಗೆ 10 ಕೋಟಿ ಲಸಿಕೆ

2021ರ ಫೆಬ್ರವರಿ ವೇಳೆಗೆ 10 ಕೋಟಿ ಲಸಿಕೆ

ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಕೊರೊನಾವೈರಸ್ ಲಸಿಕೆ ಉತ್ಪಾದನೆ ಮತ್ತು ದಾಸ್ತಾನು ಮಾಡುವ ಪರವಾನಗಿ ನೀಡುವಂತೆ ಕೋರಲಾಗಿದೆ ಎಂದು ಕಂಪನಿ ತಿಳಿಸಿದೆ. ಅಲ್ಲದೇ, ಈಗಾಗಲೇ 4 ಕೋಟಿ ಡೋಸ್ ಲಸಿಕೆ ಉತ್ಪಾದಿಸಲಾಗಿದ್ದು, ಇನ್ನೂ 6 ರಿಂದ 7 ಕೋಟಿ ಡೋಸ್ ಲಸಿಕೆಯನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ. 2021ರ ಫೆಬ್ರವರಿ ವೇಳೆಗೆ ಒಟ್ಟು 10 ಕೋಟಿ ಕೊರೊನಾವೈರಲ್ ಲಸಿಕೆಯ ಡೋಸ್ ಗಳನ್ನು ಉತ್ಪಾದಿಸಲಾಗುತ್ತದೆ ಎಂದು ಕಂಪನಿಯು ತಿಳಿಸಿದೆ.

ಮೂರ್ನಾಲ್ಕು ತಿಂಗಳಿನಲ್ಲಿ ಕೊರೊನಾ ಲಸಿಕೆ

ಮೂರ್ನಾಲ್ಕು ತಿಂಗಳಿನಲ್ಲಿ ಕೊರೊನಾ ಲಸಿಕೆ

ಕೊರೊನಾವೈರಸ್ ಲಸಿಕೆ ಉತ್ಪಾದನೆ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ. 2021 ಜೂನ್-ಜುಲೈ ವೇಳೆಗೆ 40 ಕೋಟಿಗೂ ಅಧಿಕ ಲಸಿಕೆಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಒಬ್ಬ ವ್ಯಕ್ತಿಗೆ ಒಂದು ಡೋಸ್ ಲಸಿಕೆ ನೀಡುವುದಕ್ಕೆ 221 ರೂಪಾಯಿ ಆಗಲಿದ್ದು, ಒಬ್ಬ ವ್ಯಕ್ತಿಗೆ ಕನಿಷ್ಠ 2 ಡೋಸ್ ಲಸಿಕೆಯನ್ನು ನೀಡಬೇಕಾಗುತ್ತದೆ. ಅಂದರೆ ಒಬ್ಬ ವ್ಯಕ್ತಿಗೆ ಕೊರೊನಾವೈರಸ್ ಲಸಿಕೆ ನೀಡಲು ಸರ್ಕಾರವು ಕನಿಷ್ಠ 440 ರೂಪಾಯಿ ಪಾವತಿಸಬೇಕಾಗುತ್ತದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಖಾಸಗಿ ಮಾರುಕಟ್ಟೆಯಲ್ಲೂ ಕೊರೊನಾವೈರಸ್ ಲಸಿಕೆಯು ಸಿಗಲಿದೆ ಎಂದು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ.

ಭಾರತೀಯರಿಗೆ ಮೊದಲು ಸಿಗುವುದೇ ಕೋವಿಶೀಲ್ಡ್ ಲಸಿಕೆ

ಭಾರತೀಯರಿಗೆ ಮೊದಲು ಸಿಗುವುದೇ ಕೋವಿಶೀಲ್ಡ್ ಲಸಿಕೆ

ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಪ್ರಕಾರ, ಭಾರತೀಯರ ಬಳಕೆಗೆ ಲಭ್ಯವಾಗುವ ಮೊದಲ ಕೊರೊನಾವೈರಸ್ ಲಸಿಕೆಯೇ ಕೋವಿಶೀಲ್ಡ್ ಆಗಲಿದೆ. ಪಿ-ಫಿಜರ್ ಮತ್ತು ಮಾಡರ್ನಾ ಸಂಸ್ಥೆಯ ಲಸಿಕೆ ಮೊದಲು ಮಾರುಕಟ್ಟೆಗೆ ಬಿಡುಗಡೆ ಆಗುವ ಲಕ್ಷಣಗಳು ಕಾಣುತ್ತಿದೆ. ಆದರೆ ಭಾರತದಲ್ಲಿ ಈ ಲಸಿಕೆಗಳ ವಿತರಣೆ ಹೇಗಿರಬೇಕು. ಸಾರ್ವಜನಿಕರ ಉಪಯೋಗಕ್ಕೆ ತರುವುದು ಹೇಗೆ ಎನ್ನುವ ಬಗ್ಗೆ ಇದುವರೆಗೂ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ.

ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯ ಲಸಿಕೆಯ ಮೇಲೆ ಮೂರನೇ ಹಂತದ ವೈದ್ಯಕೀಯ ಪ್ರಯೋಗವನ್ನು ನಡೆಸಲಾಗುತ್ತಿದೆ. 16,000 ಸ್ವಯಂಸೇವಕರ ಮೇಲೆ ಲಸಿಕೆಯ ಪ್ರಯೋಗವನ್ನು ನಡೆಸಲಾಗುತ್ತಿದ್ದು, 2021ರ ಎರಡನೇ ತ್ರೈಮಾಸಿಕದ ವೇಳೆಯಲ್ಲಿ ಲಸಿಕೆಯು ಸಾರ್ವಜನಿಕ ಬಳಕೆಗೆ ಸಿಗಲಿದೆ ಎಂದು ಸಂಸ್ಥೆಯು ಸ್ಪಷ್ಟಪಡಿಸಿದೆ. ಭಾರತದಲ್ಲಿ 2021ರ ಜುಲೈ ಅಂತ್ಯದ ವೇಳೆಗೆ 50 ಕೋಟಿ ಕೊರೊನಾವೈರಸ್ ಲಸಿಕೆಯನ್ನು ಹೊಂದಿರುವ ಬಗ್ಗೆ ಕೇಂದ್ರ ಸರ್ಕಾರವು ಈಗಾಗಲೇ ಸ್ಪಷ್ಟಪಡಿಸಿದೆ.

Recommended Video

Covid Vaccine ಹಂಚುವಿಕೆ ಬಗ್ಗೆ ಮುಖ್ಯಮಂತ್ರಿಗಳ ಸಭೆ ಕರೆದ Modi | Oneindia Kannada

English summary
After March-April Covishield Vaccine Available In Indian Open Market: Serum Institute Of India Said About Oxford Vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X